ಯೋಗಿಪದಕೆ ಅರ್ಥವಿಲ್ಲವೋ
ಸದ್ಗುರು ನಿರಾಲ ||ಪ||

ಭೋಗ ವಿಷಯ ನೀಗಿ ಭವದ
ಬ್ಯಾಗಿಯಳಿದು ಬ್ರಹ್ಮ ಸುಖದ ||ಅ.ಪ.||

ತನುವಿನಾಶಯರಿದು ಮಾಯಾ-
ಗೊನಿಯ ಕೊರಿದು ಕರ್ಮಸಾಗರ
ಕನಸಿನಂತೆ ತಿಳಿದು ತಾನೆ
ಚಿನುಮಯಾತ್ಮನಾಗಿ ಮೆರೆವ ||೧||

ಶಿಶುನಾಳೇಶ ಈಶನಲ್ಲಿ
ಅಸುವನಿಟ್ಟು ಗುರುಗೋವಿಂದನ
ಹೆಸರು ಹೇಳಿಕೊಂಡು ಲೋಕ
ಕಸರವಳಿದು ಪಾಪಸುಟ್ಟು ||೨||

****