ಮಳೆ ಶುರುವಾಯಿತೆಂದರೆ ಶೀತ, ನೆಗಡಿ ಮತ್ತು ಜ್ವರದ ಬಾಧೆ ಜ್ನರಜೋರಾದಾಗ ಡಾಕ್ಟರ ಬಳಿ ಧಾವಿಸುತ್ತೇವೆ. “ತಡೆಯಲಾಗುತ್ತಿಲ್ಲ ಡಾಕ್ಟರೇ, ಏನಾದರೂ ಮಾಡಿ ಜ್ವರ ಇಳಿಸಿ” ಅನ್ನುತ್ತೇವೆ. ಆಗ ಡಾಕ್ಟರ್ ಕೆಲವು ಮಾತ್ರೆಗಳನ್ನು  ಕೊಟ್ಟು ಬೇಗನೇ ಜ್ವರ ಇಳಿಸಲಿಕ್ಕಾಗಿ ಒಂದು ಇಂಜೆಕ್ಷನ್ ಚುಚ್ಚಬಹುದು. ಆದರೆ ಡಾಕ್ಷರ್ ಇಂಜೆಕ್ಷನಿಗಾಗಿ ಬಳಸಿದ ನೀರು ಸೊಂಕು ರಹಿತ ಆಗಿಲ್ಲದಿದ್ದರೆ? ಅದರಿಂದಾಗಿ ನಿಮಗೆ ಬೇರೂಂದು ಸೊಂಕು ತಗಲಿದರೆ… ?

ಅಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಅಂಡ್ ರೀಸರ್ಚ್ ಸೋಸೈಟಿ ನಡೆಸಿದ ವೈಜ್ಞಾನಿಕ ಪರೀಕ್ಷೆಗಳು ಇಂತಹ ಅಪಾಯ ನಮ್ಮನ್ನು ಕಾದಿದೆ ಎಂದು ಸಾಬೀತುಪಡಿಸಿದೆ. ಇಂಜೆಕ್ಷನಿಗಾಗಿ ವೈದ್ಯರು ಬಳಸುವ ಐದು ಕಂಪೆನಿಗಳ ಸೋಂಕುರಹಿತ ನೀರಿನ (ಸ್ಟೆರೈಲ್ ವಾಟರ್) ಸ್ಯಾಂಪಲ್‌ಗಳನ್ನು ಸೊಸೈಟಿ ಪರೀಕ್ಷಿಸಿತು. ಅವುಗಳಲ್ಲಿ ಎರಡರಲ್ಲಿ ಎಂಡೋಟಾಕ್ಸಿನ್‌ಗಳಿದ್ದವು! ಕೆಲವು ಸೂಕ್ಷ್ಯಜೀವಿಗಳ ಕೋಶಭಿತ್ತಿಗಳಲ್ಲಿ ಇರುವ ವಿಷಗಳೇ ಎಂಡೋಟಾಕ್ಸಿನ್‌ಗಳು. ಇವುಗಳಿಂದಾಗಿ ಚಳಿಜ್ವರ ಮಾತ್ರವಲ್ಲದೆ ಶಾಕ್ ಉಂಟಾದೀತು. ಸೊಂಕು ತಗಲಿದ ವ್ಯಕ್ತಿಯ ಪರಿಸ್ಥಿತಿ ಮತ್ತು ಪೈರೂಜನ್ ಅವಲಂಬಿಸಿ ಇತರ ಹಲವು ಬಾಧಗಳಿಗೂ ಈ ವಿಷ ಕಾರಣವಾದೀತು.

ಸೋಂಕುರಹಿತ ನೀರು
ಇದೇನಿದು ಇಂಜೆಕ್ಷನಿಗಾಗಿ ಸೋಂಕು ರಹಿತ ನೀರು? ಎಲ್ಲ ಔಷಧಿಗಳನ್ನೂ ಬಾಯಿಯ ಮೂಲಕ ಸೇವಿಸಲು ಆಗುವುದಿಲ್ಲ. ಏಕೆಂದರೆ ನಮ್ಮ ಜೀರ್ಣಾಂಗವ್ಯೂಹದಲ್ಲಿರುವ ಜೀರ್ಣಕಾರಿ ರಸಗಳು ಕೆಲವು ಔಷಧಿಗಳನ್ನು ನಿಷ್ಕ್ರಿಯಗೂಳಿಸುತ್ತವೆ. ಮಾತ್ರವಲ್ಲ ತುರ್ತಿನ ಸಂದರ್ಭಗಳಲ್ಲಿ ಬಾಯಿಯ ಮೂಲಕ ಸೇವಿಸಿದ ಔಷಧಿಗಳು ಪರಿಣಾಮ ಬೀರಲು ದೀರ್ಘ ಕಾಲ ತಗಲುತ್ತದೆ. ಆದ್ದರಿಂದ ಇಂಜೆಕ್ಷನ್ ಮೂಲಕ ಔಷಧಿ ನೀಡಬೇಕಾಗುತ್ತದೆ.

ಪುಡಿಯ ರೂಪದಲ್ಲಿರುವ ಇಂಜೆಕ್ಷನ್ ಔಷಧಿಗಳನ್ನು ನೀರಿನಲ್ಲಿ ಕರಗಿಸಿ ಇಂಜೆಕ್ಷನ್ ದ್ರಾವಣ ತಯಾರಿಸಬೇಕು. ಅದಕ್ಕಾಗಿ ಬಳಸುವ ನೀರೇ ಇಂಜೆಕ್ಷನ್ ನೀರು. ಶುದ್ದನೀರನ್ನು ಭಟ್ಟಿಯಿಳಿಸಿ ಇಂಜೆಕ್ಷನಿಗಾಗಿ ನೀರನ್ನು  ತಯಾರಿಸಲಾಗುತ್ತದೆ. ಭಟ್ಟಿಯಿಳಿಸುವ ಉಪಕರಣಗಳನ್ನು ಅತ್ಯಂತ ಶುಚಿಯಾಗಿಟ್ಟು ಜ್ವರಕ್ಕೆ ಕಾರಣವಾಗುವ ಸೂಕ್ಷ್ಮಕ್ರಿಮಿಗಳು ಸೋಂಕದಂತೆ ಎಚ್ಚರವಹಿಸಲಾಗುತ್ತದೆ.

ಪ್ರತೀ ಬಾರಿ ನೀರನ್ನು ಭಟ್ಟಿ ಇಳಿಸುವಾಗಲೂ ಮೊದಲಾಗಿ ಹೊರಬರುವ ಸ್ವಲ್ಪ ನೀರನ್ನು ಚೆಲ್ಲಲಾಗುತ್ತದೆ. ಉಳಿದ ನೀರನ್ನು ಜಾಗರೂಕತೆಯಿಂದ ಯಾವುದೇ ಸೂಕ್ಷ್ಯ ಜೀವಿ ಬೆಳೆಯದಂತೆ ಮತ್ತು ಇತರ ಸೋಂಕು ತಗಲದಂತೆ ಶೇಖರಿಸಲಾಗುತ್ತದೆ. ಅನಂತರ ಈ ನೀರನ್ನು ಪ್ಯಾಕ್ ಮಾಡಿ ಸೋಂಕುರಹಿತಗೊಳಿಸಲಾಗುತ್ತದೆ.

ಆ ವೈಜ್ಞಾನಿಕ ಪರೀಕ್ಷೆಯಲ್ಲಿ ಈ ಐದು ಕಂಪೆನಿಗಳ ಸೋಂಕುರಹಿತ ಇಂಚೆಕ್ಷನ್ ನೀರನ್ನು ಪರೀಕ್ಷಿಸಲಾಯಿತು. ಕೋರ್ ಹೆಲ್ತ್ ಕೇರ್ ಲಿಮಿಟೆಡ್, ಹಿಂದೂಸ್ಥಾನ್ ಫಾರ‍್ಮಸಿಟಿಕಲ್ಸ್, ಪರೆಂಟರಲ್ ಡ್ರಗ್ಸ್ ಇಂಡಿಯಾ ಲಿಮಿಟೆಡ್, ರತಿ ಲೆಬೊರೆಟರೀಸ್ ಪ್ರೈ. ಲಿಮಿಟೆಡ್, ಎಸ್ಕೆ ಪೆರೆಂಟರಕಲ್ಸ್ ಪ್ರೈ. ಲಿಮಿಟೆಡ್ ಈ ಕಂಪೆನಿಗಳ 5ಮಿ.ಲೀ. ಮತ್ತು 10ಮಿ.ಲೀ. ನೀರಿನ ಆಂಪ್ಯೂಲ್ (ಗಾಜಿನ ಪುಟ್ಟ ಸೀಸೆ)ಗಳನ್ನು ಪರೀಕ್ಷೆ ಮಾಡಲಾಯಿತು.

ಮಾನಕಗಳು
ಐದು ಕಂಪೆನಿಗಳ ಇಂಜೆಕ್ಷನ್ ನೀರಿನ ಸ್ಯಾಂಪಲ್‌ಗಳನ್ನು 15 ಮಾನದಂಡ ಗಳಿಗಾಗಿ ಪರಿಶೀಸಲಾಯಿತು. ಇಂಡಿಯನ್ ಫಾರ‍್ಮಕೊಪಿಯಾ (ಐಪಿ)ದ 12 ಮಾನದಂಡಗಳ ಮತ್ತು ಅಮೇರಿಕದ ಯು.ಎಸ್. ಫಾರ‍್ಮಕೋಪಿಯದ 3 ಮಾನದಂಡಗಳ ಅನುಸಾರ ಪರೀಕ್ಷಿಸಲಾಯಿತು. ಪಿಎಚ್, ಇಂಗಾಲದ ಡೈಆಕ್ಸೈಡ್ ಮತ್ತು ಸೂಕ್ಷ್ಯ ಕಣಗಳು ಈ
ಮಾನದಂಡಗಳು ಯುಎಎಸ್ ಫಾರ‍್ಮಕೋಪಿಯದಲ್ಲಿದೆ. ಆದರೆ ಐಪಿಯಲ್ಲಿ ನಮೂದಾಗಿಲ್ಲ.

ಸೋಂಕು ಪತ್ತೆ
ಇಂಜೆಕ್ಷನಿನಿಂದ ಚುಚ್ಚುವ ಔಷಧಿಗಳು ಚರ್ಮವನ್ನು ತೂರಿಕೊಂಡು ನೇರವಾಗಿ ಶರೀರದ ಕೋಶಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ ಅವುಗಳಲ್ಲಿ ಭೌತಿಕ, ರಾಸಾಯನಿಕ ಮತ್ತು ಜೈವಿಕ ಸೋಂಕು ಇರಲೇಬಾರದು. ಆದರೆ ಹಿಂದೂಸ್ಥಾನ್ (14 ಮಿ.ಲೀ.) ಮತ್ತು ರತಿ(5 ಮಿ.ಲೀ.) ಕಂಪೆನಿಯ ಇಂಜೆಕ್ಷನ್ ನೀರಿನಲ್ಲಿ ಸೊಂಕು ಪತ್ತೆಯಾಯಿತು. ಅಂದರೆ ಇಂಡಿಯನ್ ಫಾರ‍್ಮಕೋಪಿಯ ನಿಗದಿಪಡಿಸಿದ ಪ್ರತಿ ಮಿ.ಲೀ.ನಲ್ಲಿ 0.25 ಎಂಡೋಟಾಕ್ಸಿನ್ ಗಿಂತ ಜಾಸ್ತಿ ಬ್ಯಾಕ್ಟೀರಿಯಲ್ ಎಂಡೋಟಾಕ್ಸಿನ್ ಅದರಲ್ಲಿತ್ತು. (ಪರಿಸರದಲ್ಲಿರುವ ಬಹುಪಾಲು ಗ್ರಾಂ ನೆಗೆಟಿನ್ ಬ್ಯಾಕ್ಟೀರಿಯಾಗಳ ಕೋಶಭಿತ್ತಿಯಲ್ಲಿರುವ ವಿಷಾಂಶವೇ ಎಂಡೋಟಾಕ್ಸಿನ್) ಇಂಜೆಕ್ಷನಿನ ಔಷಧಿ ಜೊತೆ ಎಂಡೋಟಾಕ್ಸಿನ್‌ಗಳು ಶರೀರ ಪ್ರವೇಶಿಸಿದರೆ ಗಂಭೀರ ಅನಾರೋಗ್ಕದಿಂದ ಬಳಲುವ ರೋಗಿಗಳಿಗೆ ಅವು ಮರಣಾಂತಿಕವಾದಾವು.

ಇಂಜೆಕ್ಷನ್ ನೀರಿನಲ್ಲಿರುವ ಎಂಡೋಟಾಕ್ಸಿನ್ ಏನನ್ನು ಸೂಚಿಸುತ್ತದೆ? ಶುಚಿಯಾದ ಸ್ಥಳದಲ್ಲಿ ಮತ್ತು ಸ್ವಚ್ಛ ಉಪಕರಣಗಳ ಮೂಲಕ ನೀರಿನ ಸಂಸ್ಕರಣೆ ಆಗಿಲ್ಲ ಮತ್ತು ಎಂಡೋಟಾಕ್ಸಿನ್ ಪೂರ್ತಿ ತೊಲಗುವಂತೆ ನೀರನ್ನು ಭಟ್ಟಿ ಇಳಿಸಿಲ್ಲ.

ನೀರಿನಲ್ಲಿ ಅನೇಕ ಸೂಕ್ಷ್ಮ ಕಣಗಳು ಇರುತ್ತವೆ. ಇವುಗಳಿಂದ ನಮ್ಮ ಆರೋಗ್ಕಕ್ಕೆ ಹಾನಿ ಆಗಬಹುದು. ಇದರ ಬಗ್ಗೆ ಅಮೆರಿಕದ ಯುಎಸ್ ಫಾರ‍್ಮಕೋಪಿಯಾ ನಿಗದಿಪಡಿಸಿದ ಮಾನದಂಡ ಹೀಗಿದೆ : 5 ಮಿಲೀ ಆಂಪ್ಯೂಲಿನಲ್ಲಿ 100ಮೈಕ್ರಾನ್ ಅಳತೆಯ 6,000ಕ್ಕಿಂತ ಜಾಸ್ತಿ ಸೂಕ್ಷ್ಯಕಣಗಳು ಇರಬಾರದು. ಅದೇ ರೀತಿಯಲ್ಲಿ 25 ಮೈಕ್ರಾನ್ ಅಳತೆಯ 600ಕ್ಕಿಂತ ಜಾಸ್ತಿ ಕಣಗಳು ಇರಬಾರದು. ಈ ಪರೀಕ್ಷೆಯಲ್ಲಿ ಎಲ್ಲ ಕಂಪನಿಗಳ ಇಂಜೆಕ್ಷನ್ ನೀರಿನ ಎಲ್ಲ ಸ್ವಾಂಪಲ್‌ಗಳೂ ಪಾಸಾದದ್ದು ಸಮಾಧಾನದ ವಿಷಯ.

ನೀರಿನಲ್ಲಿ ಶೇಷಾಂಶ
ಆ ಪರೀಕ್ಷೆಯಲ್ಲಿ ಇಂಜೆಕ್ಷನ್ ನೀರನ್ನು ಆವಿ ಮಾಡಿ ಪರಿಶೀಲಿಸಲಾಯಿತು. ಆಗ ಉಳಿಯುವ ವಸ್ತುವೇ ಶೇಷಾಂಶ. ಇದು ನೀರಿನಲ್ಲಿ ಕರಗಿರುವ ಮತ್ತು ನೇತಾಡುವ ಕಣಗಳ ತೂಕಕ್ಕೆ ಸಮಾನ. ಈ ಪರೀಕ್ಷೆಯಲ್ಲಿಯೂ ತೀರಾ ಕಡಿಮೆ ಶೇಷಾಂಶ ಉಳಿದದ್ದರಿಂದ ಎಲ್ಲ ಸ್ಯಾಂಪಲ್‌ಗಳೂ ಪಾಸಾದವು. ಕೋರ್ ಕಂಪೆನಿಯ 5 ಮಿ.ಲೀ. ಮತ್ತು 10ಮಿ.ಲೀ. ಸ್ಯಾಂಪಲ್ ಗಳಲ್ಲಿ ಅತ್ಕಂತ ಕಡಿಮೆ ಶೇಷಾಂಶ (ಶೇಕಡಾ 0.0003) ಇತ್ತು. ಅ ಇಂಜೆಕ್ಷನ್ ನೀರು ಅತ್ಯುತ್ತಮ ಗುಣಮಟ್ಟದ್ದು ಎಂದು ಇದರ ಅರ್ಥ. ಎಸ್‌ಕೆಪಿ ಕಂಪೆನಿಯ 6 ಮಿ.ಲೀ. ಸ್ಯಾಂಪಲಿನಲ್ಲಿ ಶೇಕಡಾ 0.0016 ಮತ್ತು ರತಿ ಕಂಪನಿಯ 10 ಮಿ.ಲೀ. ನ್ಯಾಂಪಲ್ನಲ್ಲಿ ಶೇಕಡಾ 0.001 ಇತ್ತು.

ಬಣ್ದ, ಆಮ್ಲೀಯತೆ ಮತ್ತು ಕ್ಷಾರತೆ, ಆಕ್ಷಿಡೈಸ್ ಆಗುವ ವಸ್ತುಗಳು, ಅಮೋನಿಯಂ, ಕ್ಕಾಲ್ಷಿಯಂ ಮತ್ತು ಮೆಗ್ನೇಸಿಯಂ, ಭಾರ ಲೋಹಗಳು, ಕ್ಲೋರೈಡ್, ನೈಟ್ರೇಟ್, ಸಲ್ಫೇಟ್, ಇಂಗಾಲದ ಡೈಆಕ್ಸೈಡ್ ಮತ್ತು ಪಿಎಚ್‌ಗೆ ಸಂಬಂಧಿಸಿದ  ಪರೀಕ್ಷೆಗಳಲ್ಲೂ ಆ ಐದು ಕಂಪೆನಿಗಳ ನೀರಿನ ಸ್ಯಾಂಪಲ್‌ಗಳು ಪಾಸಾದದ್ದು ವಿಶೇಷ.

ಅವುಗಳಲ್ಲಿ ಐಡಿಪಿಎಲ್ ಕಂಪೆನಿಯ ಇಂಜೆಕ್ಷನ್ ನೀರಿಗೆ ಅತ್ಕಧಿಕ ಬೆಲೆ: 5 ಮಿ.ಲೀ.ಗೆ ರೂ. 2.75 ಮತ್ತು 10 ಮಿ.ಲೀ.ಗೆ ರೂ. 3.75 ಹಿಂದೂಸ್ಥಾನ್ ಮತ್ತು ರತಿ ಕಂಪೆನಿಯ ಇಂಜೆಕ್ಷನ್ ನೀರಿಗೆ ಕನಿಷ್ಠ ಬೆಲೆ 5 ಮಿ.ಲೀ.ಗೆ ರೂ. 1.75.

ಅತ್ಕಂತ ಸುರಕ್ಷಿತವಾಗಿರಬೇಕಾದ ಇಂಜೆಕ್ಷನ್ ನೀರು ಕೂಡಾ ನಮ್ಮ ದೇಶದಲ್ಲಿ ಸುರಕ್ಷಿತವಾಗಿಲ್ಲ ಎಂಬುದು ಅಹ್ಮದಾಬಾದಿನ ಸಿಇಆರ್ ಸೊಸೈಟಿ ನಡೆಸಿದ ಪರೀಕ್ಷೆಯಿಂದ ಬಹಿರಂಗವಾಗಿದೆ. ಆದ್ದರಿಂದ ವೈದ್ಕರು ಇಂಜೆಕ್ಷನ್ ನೀಡಲು ಅತ್ಯುತ್ತಮ ಗುಣಮಟ್ಟದ ಸೋಂಕುರಹಿತ ನೀರನ್ನು ಬಳಸುವುದೇ ತಮ್ಮ ರೋಗಿಗಳನ್ನು ಕಾಪಾಡಲು ಇರುವ ಏಕಮಾತ್ರ ವಿಧಾನ.

ಉದಯವಾಣಿ31.7.2003