“ಕಣ್ಣಿಗೆ ರೆಪ್ಪೆ ರಕ್ಷೆ. ಹೃದಯಕ್ಕೆ ಎಲುಬಿನ ರಕ್ಷೆ? ನಮಗೇನು ರಕ್ಷೆ? ಎಂದು ಕೇಳಿದ ಓರ್ವ ಶಿಷ್ಯ.
ಗುರುಗಳೇ! ನೀವು ಹೇಳುವ ಮುನ್ನ ನಾನು ಹೇಳಲೇ? ಎಂದ ಮತ್ತೊರ್ವ ಶಿಷ್ಯ.
“ಹೇಳು ಶಿಷ್ಯಾ! ಎಂದಾಗ, “ಗುರು ರಕ್ಷೆ, ದೈವ ರಕ್ಷೆ” ಎಂದ.
ಮತ್ತೇ ಗುರುಗಳು ಹೇಳಿದರು. ಇದು ನಿನಗೆ ಗುರು, ದೈವ ಕೊಟ್ಟ ರಕ್ಷೆ. ನಿನ್ನ ಅರಿವಿಗೆ ಇರಬೇಕಾದದು, ಮಾನ ರಕ್ಷೆ, ಮರ್ಯಾದ ರಕ್ಷೆ. ಮಾನದಿಂದ ನೀನು ಉಳಿಯುತ್ತೀಯ, ಮರ್ಯಾದೆಯಿಂದ ನೀನು ಬೆಳೆಯುತ್ತೀಯ. ಗುರು ರಕ್ಷೆಯಿಂದ ದೈವ ರಕ್ಷೆಯ ತನಕ ಕೊಂಡೊಯ್ಯುವ ರಕ್ಷಾಸೇತುವೆ ನಿನ್ನ ಮನದಲ್ಲಿ ನೆಲೆಸಿರುವ ಮಾನ, ಮರ್ಯಾದೆ. ನಿನ್ನ ಹೃದಯ ಮಂದಿರದ ದ್ವಾರ ಪಾಲಕರು ಇವರು,” ಎಂದರು ಗುರುಗಳು.
ಶಿಷ್ಯಂದಿರು ಗುರುಗಳ ವಿವರಣೆಗೆ ತಲೆ ತೂಗಿದರು.
*****


















