ಬೀದರಿಗೆ ಬಂದು ಮೂರು ದಿನವಾಗಿದ್ದರೂ ಕೋಟೆಗೆ ಹೋಗಲು ಸಾಧ್ಯವಾಗಿರಲೇ ಇಲ್ಲಾ. ಗೊಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಮೇಲೆ ಒತ್ತಡ ಕಡಿಮೆಯಾಗಿತ್ತು. ಹಾಗಾಗಿ ಕೋಟೆಯ ಸೆಳೆತ ಹೆಚ್ಚಾಯಿತು. ಕೋಟೆ ಊರಿನ ತುದಿಗಿತ್ತು. ಆಟೋವೊಂದನ್ನು ನಿಲ್ಲಿಸಿ ಕೋಟೆಗೆ ಎಂ...

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು ದಾಳಿಂಬರ ಬೀಜ; ಆಕೆಯನ್ನು ಯಾರು ಬೇಡವೆಂದಾರು...

ಕಾಲು ನೆಲಕ್ಕೆ ಊರಿದೊಡನೆಯೇ ಪಚಕ್ ಪಚಕ್ ಸದ್ದು, ಹಸಿರ ಹುಲ್ಲಿನ ಮೇಲೆ ಮುತ್ತಿನಂತೆ ಕಾಣುತ್ತಿದ್ದ ಇಬ್ಬನಿ ಮೇಲೆ ನಡೆಯುವಾಗ ಬರಿಗಾಲಿಗೆ ತಂಪಿನ ಅನುಭವ. ಕಚಗುಳಿ ಇಡುತ್ತಿದ್ದ ಆ ಹುಲ್ಲ ಮೇಲಿನ ನಡಿಗೆ ಚೇತೋಹಾರಿಯಾಗಿತ್ತು. ಪುಟ್ಟ ಮಗುವಿನಂತೆ ಕೈ...

ಕೋಮಟಿಗನೊಬ್ಬನಿದ್ದನು. ಅವನ ಆಳುಮಗನ ಹೆಸರು ಇಕ್ಯಾ. “ತುಪ್ಪ ಕೊಂಡುಕೊಂಡು ಬಾ” ಎಂದು ಕೋಮಟಿಗ ಹೇಳಿದರೆ, ಇಕ್ಯಾ ತುಪ್ಪ ಕೊಂಡು ತರುವಾಗ ಲೆಕ್ಕ ಹಾಕತೊಡಗಿದನು – “ಈ ಉಳಿದ ನಾಲ್ಕು ರೂಪಾಯಿಕೊಟ್ಟು ಕೋಳಿ ಕೊಂಡರೆ ಕೆಲವ...

ಮೌಸ್ ಜೊತೆ ಬೆರಳು ಆಡುತ್ತಿದ್ದರೂ ಮನಸ್ಸನ್ನು ಕಂಪ್ಯೂಟರ್ ಕಡೆ ಕೇಂದ್ರಿಕರಿಸಲಾರದೆ ಗಾಯನ್ ಕೊಂಚ ಡಿಸ್ಟರ್ಬ್ ಆಗಿದ್ದ. ಬೆಳಗ್ಗೆಯೇ ಬಂದ ಮಮ್ಮಿ ಫೋನ್ ಅವನನ್ನು ಅಸಹನೆಗೀಡು ಮಾಡಿತ್ತು. ಇವತ್ತು ಸೂರ್ಯ ಗ್ರಹಣ. ಅದು ನೈಸರ್ಗಿಕವಾಗಿ ನಡೆಯೋ ಒಂದು ...

ಅಜ್ಜಿಗೆ ಮೊಮ್ಮಗಳೊಬ್ಬಳ ಹೊರತು ಇನ್ನಾರೂ ಇರಲಿಲ್ಲ. ಮೊಮ್ಮಗಳು ದೊಡ್ಡವಳಾದಳೆಂದು ತಕ್ಕವರನಿಗೆ ಕೊಟ್ಟು ಲಗ್ನಮಾಡಿದ್ದಳು. ಒಳ್ಳೆಯದಿನ ನೋಡಿ ಮೊಮ್ಮಗಳನ್ನು ಕರೆಯಲಿಕ್ಕೆ ಆಕೆಯ ಗಂಡನು ಬಂದನು. ಅಜ್ಜಿ ಬಲು ಹಿಗ್ಗಿನಿಂದ ಮೊಮ್ಮಗಳನ್ನು ಎರಡು ದಿವಸ ...

“ಅನು, ಅನು” ಹೊರಗಿನಿಂದಲೇ ಕೂಗುತ್ತ ಒಳಬಂದ ಸದಾನಂದ ಏದುಸಿರು ಬಿಡುತ್ತ ಅನುವನ್ನು ಹುಡುಕಿಕೊಂಡು ಹಿತ್ತಿಲಿನವರೆಗೂ ಬಂದ. ಬಟ್ಟೆ ತೆಗೆಯುತ್ತಿದ್ದವಳನ್ನು ಕಂಡವನೇ “ಅನು ಕೇಳಿದ್ಯಾ, ಚಂದ್ರು ಅಮ್ಮನ್ನ ನಾಲಿಗೇನಾ ಯಾರೋ ಕತ್ತ...

ಗಂಡಹೆಂಡಿರು ಮಾತಾಡಿಕೊಂಡು ಒಂದು ಹಿಂಡುವ ಎಮ್ಮೆಯನ್ನು ಕೊಂಡುತಂದರು. ಹಾಲಿಗೆ ಹೆಪ್ಪು ಹಾಕಿ, ಬೆಣ್ಣೆ ತುಪ್ಪ ಮಾಡಿ ಮಾರಿಕೊಂಡರೆ ಕೈಯಲ್ಲಿ ಹಣವೂ ಆಗುವದೆಂದು ಗಂಡನು ಹೆಂಡತಿಗೆ ಸೂಚನೆಮಾಡಿದನು. ಅದಕೈ ಹೆಂಡತಿ ಸೈ ಎಂದಳು. ಕೆಂಡದ ಮೇಲಿಟ್ಟು ಹಾಲು...

ಬಸ್ಸು ಹೊರಡುವ ಸಮಯವಾಯ್ತು. ಜೇಬಿನೊಳಗೆ ಎರಡೂ ಕೈಗಳನ್ನು ಇಳಿಬಿಟ್ಟು ನಿಂತಿದ್ದ ಶಂಕರನನ್ನೇ ಕಿಟಕಿಯಿಂದ ದಿಟ್ಟಿಸಿದಳು ಸುಮಿತ್ರಾ. ಆ ನಿರ್ಭಾವದ ಮುಖದಲ್ಲಿ ಯಾವ ವೇದನೆಯ ಎಳೆಯನ್ನು ಅವಳಿಂದ ಹುಡುಕಲಾಗಲಿಲ್ಲ. ಮರುಕ್ಷಣವೇ ಮನಸ್ಸು ನಿರಾಶೆಗೊಂಡಿತ...

ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು. ರಾಜನು ಒಂದು ದಿವಸ ಮಂತ್ರಿಮಾನ್ಯರೊಡನೆ ತನ್ನೋಲಗದಲ್ಲಿ ಕುಳಿತಾಗ ನೆರೆಯ ರಾಜನ ಕಡೆಯಿಂದ ಒಬ್ಬ ದೂತನು ಬಂದು, ತಾನು ತಂದ ಪತ್...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...