ತಳಿರು ತೋರಣಗಳಿಂದ ಸಿಂಗರಿಸಿ, ಅಂಗಳಗಳು ಸೆಗಣಿ ಸಾರಿಸಿಕೊಂಡು, ರಂಗೋಲಿ ಇಕ್ಕಿಸಿಕೊಂಡದ್ದಕ್ಕೆ ಸಾಯಲು ಸಿದ್ಧವಾಗಿದ್ದ ಊರಿಗೆ ಕಾಯಕಲ್ಪ ಬಂದಂತಾಗಿತ್ತು. ವರ್ಷಕೊಮ್ಮೆ ಜಾತ್ರೆಗೆ ಊರಿಗೆ ಯೌವನ ಪ್ರಾಪ್ತವಾಗುತ್ತದೆಯಾದರೂ ಅದು ಇತ್ತೀಚಿಗೆ ತನ್ನ ಆಕ...

ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ” ಎಂದಳು ಹೆಂಡತಿ. “ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎ...

ಗಗನದಿಂದ ಧರಣಿಗೆ ಮುತ್ತಿನಸರದಂತೆ ಉದುರುವ ಹನಿಗಳು. ತುಸು ಒದ್ದೆಯಾದ ಭಾರ ಮೋಡಗಳು – ಪ್ರೀತಿಯ ತುಳುಕುವ ಹೃದಯದಂತೆ- ಬಿಡಲಾರದೆ ಸುರಿಯುತ್ತಿವೆ. ಮಾಳಿಗಿ ಮೇಲೆ ನಿಂತು ಕೆಳಗೆ ನೋಡಿದರೆ ಹೋದೋಟ- ಪ್ರತಿ ಹೂ ಪ್ರತಿ ಎಲೆ, ಒಂದು  ಹನಿಯನ್ನೂ ...

ಎಂದೋ ಉರಿದು ಆರಿದ ಒಲೆಯ ತುಂಬಾ ಬೂದಿ ತುಂಬಿದ್ದರೆ ಒಲೆಯ ಮೇಲಿರಿಸುವ ಸಿಲಾವಾರ್ ಪಾತ್ರೆಗಳು ಖಾಲಿ ಖಾಲಿ. ಒಬ್ಬರು ಕಾಲು ಚಾಚಿ ಮಲಗುವಷ್ಟು ವಿಶಾಲವಲ್ಲದ ಹೆಂಚಿನ ಮನೆಯದು. ಗೆದ್ದಲು ಹಿಡಿದ ಪುಟ್ಟ ಬಾಗಿಲನ್ನು ಮುಚ್ಚಿಬಿಟ್ಟರೆ ಒಡೆದು ಹೋದ ಹೆಂಚು...

ಮಟ್ಮಾಟಾ ಮಧ್ಯಾನ್ದತ್ತು….ವುರ್ರೀರ್ರೀ….ಬಿಸ್ಲು. ನೆಲ್ದ್ಮೇಲೆ ಕೆಂಡಾರ್ವಿದಂಗೆ. ವುಗಾದಿಯ ಬಿಸ್ಲೆಂದ್ರೆ….ಅದ್ರಲ್ಲಿ…. ಬಳ್ಳಾರಿ ಬಿಸ್ಲೆಂದ್ರೆ…. ಯೇಳ್ದೇ ಬ್ಯಾಡಾ! ಸಿವ್ನ ಮೂರ್ನೇ ಕಣ್ಣು ಬಿಟ್ಟಂಗೇ&#8230...

ಪತ್ರಿಕೆಯಲ್ಲಿ ಆ ಪ್ರಕಟಣೆ ಕಂಡಾಗ ಅವಳಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವನೆ. ಬಿ.ಎ. ಆಗಿ ಮನೆಯಲ್ಲಿ ಒಂದು ವರ್ಷ ಕಳೆದದ್ದು ಒಂದು ನರಕಯಾತನೆ. ಪದವಿ ಮುಗಿಯುತ್ತಲೇ ರತ್ನಗಂಬಳಿ ಹಾಸಿ ತನ್ನನ್ನು ಯಾರಾದರೂ ಕೆಲಸಕ್ಕೆ ಕರೆದುಕೊಳ್ಳುತ್ತಾರೆ ಎಂದ...

ಕುರಿಕಾಯುವ ಜೊತೆಗಾರರಾದ ಕಾಮಣ್ಣ ಭೀಮಣ್ಣ ಅವರಿಬ್ಬರು ತಮ್ಮ ಕುರಿ ಹಿಂಡಿನೊಡನೆ ಅಡವಿಯಲ್ಲಿಯೇ ಅಡ್ಡಾಡುವರು; ಅಡವಿಯಲ್ಲಿಯೇ ವಾಸಿಸುವರು. ತಮ್ಮಷ್ಟು ಜಾಣರಾದವರು ಇನ್ನಾರೂ ಇಲ್ಲವೆಂದೇ ಅವರು ಬಗೆದಿದ್ದರು. ಅಂಥ ಜಾಣರಾಗಿದ್ದರೂ ಅವರಿಬ್ಬರೂ ಬಗೆಹರಿ...

ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ  ಇಡುಗಿದರೂ ಮೂಗಿಗದು ಬಡಿಯುತ್ತಿರಲಿಲ್ಲ. ದಿನವಿಡೀ ಯೋಚಿಸಿ ಅತ್ತೆಯಿಂದ ಬೈಗಳು ತಿಂದದ್ದು ಅದೆಷ್ಟು ಬಾರಿಯ...

ಅವನಿಗೆ ದಿನಾ ಸಾಯಂಕಾಲದ ಹೊತ್ತು ಮುಳುಗಿತ್ತಿರುವ ಸೂರ್ಯನನ್ನು ಸೇತುವೆಯ ಮೇಲಿಂದ ನೋಡುವುದು ತುಂಬಾ ಇಷ್ಟ. ಆ ನದಿ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ಪಶ್ಚಿಮದ ಗುಡ್ಡದ ಅಂಚಿನಲ್ಲಿ ಸೂರ್ಯ ಕಂತುವಾಗ ಕೆಂಪನೆ ಕಿರಣಗಳು ನೀರಿನ ಮೇಲೆ ಪ್ರತಿಫಲಿಸಿ ...

ರಾಕೇಶ್ ಆಸ್ಪತ್ರೆಗೆ ಅಂದು ರಜೆ ಹಾಕಿ ಸೂಟುಧಾರಿಯಾಗಿ ಸುಶ್ಮಿತಳ ಮದುವೆಗೆ ಹೊರಟು ನಿಂತನು. ಏನು ಕೊಳ್ಳಬೇಕೆಂದು ತಿಳಿಯದೆ ಬರಿಗೈಲಿ ಮದುವೆ ಮನೆಗೆ ಬಂದನು. ಅಪರಿಚಿತರ ನಡುವೆ ತಬ್ಬಿಬ್ಬಾಗಿ ನಿಂತುಬಿಟ್ಟ. ಸುಶ್ಮಿತಳೇನೋ ಹಸೆಮಣೆಯ ಮೇಲಿದ್ದಾಳೆ. ಆ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...