ಆರು ವರ್ಷದ ಹುಡುಗ, ಕಲ್ಲು ಮುಳ್ಳಿನ ಏರುತಗ್ಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮಲೇರಿಸುವನು. ಅನಂತರ ಎಡ ಹೆಗಲ ಮೇಲೆ. ಅಲ್ಲಿಯೂ ನೋವಾ...

ಅಂದು ಚಂದ್ರನೊಂದಿಗೆ ಮದುವೆ. ಗೆಣಕಾತಿ ಗೌರಿಗೆ ಮತ್ತು ಹುಚ್ಚೀರನಿಗೆ ಎಲ್ಲೆಯಿಲ್ಲದ ಆನಂದ. ಶಬರಿಯ ಅಂತರಂಗವನ್ನು ಬಲ್ಲ ಗೌರಿ ಒಂದು ಕಡೆ, ಮೂಕನಾಗಿದ್ದೂ ಮೌನದಲ್ಲೇ ಮಾತು ಮೀಟುವ ಹುಚ್ಚೀರ ಇನ್ನೂಂದು ಕಡೆ. ಹಟ್ಟಿಯಲ್ಲಿ ಹುಚ್ಚೀರನದೊಂದು ಮುರುಕಲು...

ಜೋರಾಗಿ ಮಳೆ ಸುರಿಯುತ್ತಿತ್ತು. ಮರವು ತೊಯ್ದು ತೊಪ್ಪೆಯಾಗಿ ಹನಿ ತುಂಬಿ ನಿಂತಿತ್ತು. ಒಂದೊಂದು ಎಲೆಯ ಮೇಲೂ ಪುಟ್ಟಪುಟ್ಟ ಹನಿಗಳು ಕುಳಿತ್ತಿದ್ದವು. ಮಳೆ ನಿಂತೊಡನೆ ಎಲ್ಲಾ ರೆಂಬೆಗಳು ಗಾಳಿಯಲ್ಲಿ ಅಲ್ಲಾಡಲು, ಅದು ಮೋಡಕ್ಕೆ ಹೇಳಿತು “ನೀ ಮ...

ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ ಸಕಲ ಪುಷ್ಟ ಜಾತಿಗಳಿಗೂ ವಿಲಕ...

ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ ಆಚಾರ ವಿಚಾರಗಳಲ್ಲಿ ತನ್ನದೇ ರೂಪ ಪಡಕೊಂಡು ಲಾಗಾಯ್ತಿಂದ ಅನುಸರಿ...

ಸ್ಮಶಾನದ ಕಡೆಯಿಂದ ಹರಿದು ಬಂದ ನದಿಯಲ್ಲಿ ಒಂದು ಹೆಣ್ಣು ದೇಹ ತೇಲುತ್ತಿತ್ತು. ಹರಿವ ನದಿಯ ರಭಸದಲ್ಲಿ ಮತ್ತೆ ಒಂದು ಗಂಡು ದೇಹತೇಲಿ ಬಂದು ಹೆಣ್ಣು ದೇಹ ದೊಡಗೂಡಿತು. ನದಿಯ ದಡದ ಗಿಡದ ಮೇಲೆ ಕುಳಿತಿದ್ದ ಹಕ್ಕಿಗಳು ಗಂಡು ಹೆಣ್ಣಿನ ಜೋಡಿಯನ್ನು ನೋಡಿ...

-೧- ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗ...

“ಏ! ಮಿಂಚೆ ಏಕೆ ವಕ್ರ ವಕ್ರ ವಾಗಿ ಕುಣಿಯುತಿರುವೆ?” ಎಂದು ಗುಡುಗು, ಗುಡಿಗಿ ಗದರಿಸಿತು. “ಮೋಡದ ಮರೆಯಲ್ಲಿ ಅಡಗಿ ಗುಡಗ ಬೇಡ. ಹೊರಗೆ ಬಂದು ನೋಡು, ಇದು ಮಿಂಚಿನ ಬೆಳಕಿನ ನೃತ್ಯ, ವಕ್ರ ನೃತ್ಯವಲ್ಲ.” ಎಂದಿತು ಮಿಂಚು,...

ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು, ಬತ್ತಿ...

ಇರುವೆಗಳು ಸಾಲು ಸಾಲಾಗಿ ಧಾನ್ಯ ಹಿಡಿದು ಹೋಗುತ್ತಿದ್ದವು. ಒಂದು ತುಂಟ ಇರುವೆ ಸಾಲಿನಿಂದ ಮುಂದೆ ಹೋಗಲು ಯತ್ನಿಸಿತು. ನಾಯಕ ಇರುವೆ ದಂಡಿಸಿ ಹೇಳಿತು “ನೀನು ಮನುಷ್ಯರಂತೆ ನಿಯಮ ಬಾಹಿರವಾಗ ಬೇಡ. ಅವರಂತು ನಮ್ಮಿಂದ ಶಿಸ್ತಿನ ಪಾಠ ಕಲಿಯಲಿಲ್ಲ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...