
ಹಸಿವು ಬ್ರಹ್ಮಾಂಡ ವ್ಯಾಪಿಸಿ ದಾಪುಗಾಲಿಟ್ಟು ನಡೆಯುತ್ತದೆ. ನಿಶ್ಚಲ ರೊಟ್ಟಿ ಇದ್ದಲ್ಲೇ ನೂರು ನಡೆ ಇಡುತ್ತದೆ. ಸದ್ದಿಲ್ಲದೇ ಸಂಭವಿಸುತ್ತದೆ. *****...
ಪಾಚಿಗಟ್ಟಿದ ನೆನಪ ಲೋಳೆಯ ಮೇಲೆ ಕಾಲಿಟ್ಟು ಕಣ್ಕಾಣದಂತೆಲ್ಲೋ ಜಾರದಿರು ಮನಸು ಇದ್ದಲ್ಲೆ ಕಣ್ಮುಚ್ಚಿ ಧೇನಿಸು ಕಂಡರೂ ಕಂಡಾವು ಒಂದೆರಡು ಕನಸು *****...
ಚರಿತ್ರೆಯಲಿ ದಾಖಲಾಗುವ ಹಂಬಲದಲಿ ಹಸಿವು ನೂರಾರು ದಾರಿಗಳಲಿ ಚೆಲ್ಲಾಪಿಲ್ಲಿ. ಆಗೊಮ್ಮೆ ಈಗೊಮ್ಮೆ ಮಾತ್ರ ದಾರಿಯೇ ಇರದ ದುರ್ಗಮಾರಣ್ಯದ ರೊಟ್ಟಿಯ ಅಕ್ಕರೆಯ ಸೆಳೆತ....













