ಚರಿತ್ರೆಯಲಿ
ದಾಖಲಾಗುವ ಹಂಬಲದಲಿ
ಹಸಿವು ನೂರಾರು
ದಾರಿಗಳಲಿ ಚೆಲ್ಲಾಪಿಲ್ಲಿ.
ಆಗೊಮ್ಮೆ ಈಗೊಮ್ಮೆ ಮಾತ್ರ
ದಾರಿಯೇ ಇರದ
ದುರ್ಗಮಾರಣ್ಯದ
ರೊಟ್ಟಿಯ ಅಕ್ಕರೆಯ ಸೆಳೆತ.