Home / ಕವನ / ಕವಿತೆ

ಕವಿತೆ

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ? ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು ...

ಅದೇ ಕವಿತೆ ಹರಿತ ಕತ್ತಿಯಂತೆ ಸ್ವಾತಿ ಮುತ್ತಿನಂತೆ ಚಿತ್ತಿ ಮಳೆಯಂತೆ ಕರಾವಳಿ ಲಗ್ನದಂತೆ ಬದಲಾಗದ ವ್ಯವಸ್ಥೆಯಂತೆ. * ಅದೇ ಕವಿತೆ, ಅದೇ ಕಪ್ಪಿಟ್ಟ ಮುಖ ಬಡಿದಾಡೋ ಕೈ ಕಾಲು, ಉರಿಯುತ್ತಿರುವ ಕಣ್ಣುಗಳು ಮುಳುಗಡೆಯಾಗಿರುವ ಊರು ಕೇರಿಗಳು ಈ ಪ್ರಗತಿ ...

ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ, ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ ಹೇಳಿ. *****...

ಹಕ್ಕಿಯೊಂದು ಮೇಲೆ ಹಾರಿ ತೇಲಿಹೋಯಿತು ಚಿಕ್ಕಿಯಾಗಿ ಬಾನಿನಲ್ಲಿ ಸೇರಿ ಹೋಯಿತು ಇದೇ ಮಣ್ಣಿನಲಿ ಹುಟ್ಟಿ ರೆಕ್ಕೆ ಪುಕ್ಕಗಳನು ತಳೆದು ಬಿಳಿಯ ಹಂಸವಾಗಿ ಮಹಿಮೆ ಪಡೆದುಕೊಂಡಿತು ಹದ್ದು ಕಾಗೆ ಗೂಗೆಗಳಲೆ ಬೆಳೆದು ನಿಂತಿತು ಎನಿತೊ ಬೆಳ್ಳಕ್ಕಿಗಳನು ಸೃಷ್...

ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಹಾರಲಿ ಈ ಧ್ವಜ ಎಲ್ಲಾ ತಡೆಗಳ ಮೀಟಿ. ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ ಸಾವಿರ ಬಗೆ ಜೀವನಕೆ ನೆರಳನಿತ್ತ ಕೀರ್ತಿ ಇತಿಹಾಸಕು ಹಿಂದೆ ವಾಲ್ಮೀಕಿಗು ತಂದೆ ಎನುವ ಬಿರುದ ಹೊತ್ತ ನೆಲದ ಘನತೆಯ ಪ್ರತಿಮೂರ...

ಸೊಟ್ಪ ಕಾಲಿನ ಪುಟ್ಟ ಗುಬ್ಬಿ ಖುಷಿ ಕೊಡುತ್ತಿತ್ತು ಸ್ವರ್ಗದಂತೆ ಮರೆಸುತಿತ್ತು ಅಪ್ಪ ಅಮ್ಮರನ್ನೇ ಇಪ್ಚವಾಗಿತ್ತು ದೇವರು; ಪೂಜೆಯಂತೆ ಸಾಕ್ಷಾತ್ಕಾರವಾಗಿತ್ತು ಬೆಳಕಿನಂತೆ ಹತ್ತಿರವಿತ್ತು ಬಂಧು ಬಳಗದಂತೆ ಅಂಗಳದಲಿತ್ತು ತುಳಸಿ ದಳದಂತೆ ಕಳೆದು ಹೋದ...

ನನ್ನೀ ಬಾಳಿನ ಪೂಜಾ ಪಾತ್ರೆಯ ನಿನ್ನಡಿಗಿಡುವೆನು ದೇವ; ಬರಿದಾಗಿರುವೀ ಪಾತ್ರೆಯ ತುಂಬಿ ತುಳುಕಲಿ ಭಕ್ತಿಯ ಭಾವ ದಾರಿ ತಿಳಿಯದೆ ಗುರಿಯನರಿಯದೆ ಅಲ್ಲಸಲ್ಲದಕೆ ದುಡುಕಿ, ತಂದು ತುಂಬಿದೆ ಮನದ ಬಿಂದಿಗೆ ಕೊಳೆತ ಹಣ್ಣುಗಳ ಹುಡುಕಿ. ಈಗ ತಿಳಿಯುತಿದೆ ಬೆಳ...

ಹಸಿವು ಹಸಿವೆಲ್ಲೆಲ್ಲು ಹಸಿವು ಹಸಿವು ಎಲ್ಲರನು ಆಡಿಸಿ ಪೀಡಿಸುತಿಹುದು ಹಸಿವು. ರಾಷ್ಟ್ರನಾಯಕರಿಗೆ ರಾಜ್ಯಗಳಿಕೆಯ ಹಸಿವು ಸೇನಾಧಿಪತಿಗಳಿಗೆ ಸಮರಕೀರ್ತಿಯ ಹಸಿವು ವಣಿಕೆರಾಜರಿಗೆಲ್ಲ ಲಾಭಕೊಳ್ಳೆಯ ಹಸಿವು; -ಅದರಿಂದ ನಮಗೆ ಹಸಿವು! ಮಲಗಿದ್ದ ರಣಮಾರಿ...

ತೊಳೆದ ಮುತ್ತಿನ ಹೆಸರೆ? ಹೊಳೆವ ರತ್ನದ ಹೆಸರೆ? ಥಳಥಳಿಸಿ ಮೆರೆಯುತಿಹ ತಾರೆಗಳ ಹೆಸರೆ? ಕಳಿತ ಫಲಗಳ ಹೆಸರೆ? ಚಿಗಿತ ಲತೆಗಳ ಹೆಸರೆ? ಕೊಳದೊಳಗೆ ಬಳುಕುತಿಹ ಕಮಲಗಳ ಹೆಸರೆ? ಸುರಿವ ಮಧುವಿನ ಹೆಸರೆ? ಹರಿವ ನದಿಗಳ ಹೆಸರೆ? ಕಿರುನಗೆಯ ಸೂಸುತಿಹ ಪುಷ್ಪಗ...

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು? ಸರ್ವರಿಗೆಂದೆ ತಂಪು; ಒನಪು, ವೈಯಾರ, ಥಳಕು ಬಳಕು ಕೈಕುಲುಕು! ಹಳ್ಳ ದಿನ್ನಿ ಊರು ಕೇರಿ ಹಾರಿ; ಹಗಲಿರುಳೂ ಸಾಗಿ, ಚಳಿ ಮಳೆ ಗಾಳಿಗೆ ಮಾಗಿ, ನಿತ್ಯ ದುಡಿವೆ ನೋಡಿ. ಆಸೆ ನಿರಾಸೆ ಸುಖ ದುಃಖಗಳ ಹೊದ್ದು, ಮದುವ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....