Home / ಕವನ / ಕವಿತೆ

ಕವಿತೆ

ಕಟುಕರಾಗದಿರಿ ನೀವು| ಕನ್ನಡ ತಿಳಿದೂ ಕನ್ನಡದವರೆದುರು ಕನ್ನಡ ಮಾತನಾಡದೆ|| ಕನ್ನಡ ತಿಳಿದು ಮಾತನಾಡದವರನು ಕಠಿಣ ಹೃದಯಿಗಳೆಂದರೆ ತಪ್ಪೇಕೆ? ಇಂಥವರನು ಹುಡುಕಲು ಕನ್ನಡಿ ಬೇಕೇಕೆ? ಇವರ ಮೆಚ್ಚಿಸಲು, ಹೊಗಳಲು ನಾ ಮುನ್ನುಡಿ ಬರಿಯ ಬೇಕೆ?|| ಇರುವುದು ...

ಬಿಗಿಗಣ್ಣ ಬದುಕಿನಲಿ ಅತ್ತ ಇತ್ತ ಹೊರಳಾಡುತ್ತ ಮುದುಡುತ್ತ ಮತ್ತೆ ಮಲಗುವಾಗ ಹೊದಿಕೆ ಹೊದ್ದು ಯಾವುದೋ ಬಾಯಗುಡಿಯಲ್ಲೊಂದು ಗಂಟೆ ಸದ್ದು: ‘ಏಳಯ್ಯ ಬೆಳಗಾಯಿತು’. ಥು ಸಾಡೇಸಾತು ಎಂದು ಸಹಸ್ರನಾಮಾವಳಿ ಪಠಿಸುತ್ತ ಕಣ್ಣು ತೆರೆದಾಗ ತೆರೆ ತೆರೆಯಾಗಿ ಪೊ...

ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ ಕೋಟಿ ಜನುಮಗಳ ಸಮುದ್ರ ಮಥನದಿ ಅಮ್ಮತವನ್ನೆ ತಂದ || ೨ || ವಿಷಯಸಾಗರದಿ ವಿಷದ ಭೋಗದಲಿ ಜೀವ ಕೊಡ...

ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ ಮುಂಜಾನದಲ್ಲಿ ನಿನಗೆ ಕಾಣದೇನು? ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ ಮೊದಲೆ ಬೆಳಕು ಕೊಡಲುಬಾರದೇನು? ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು – ತಿರೆ ಎತ್ತಿ ನೀ ಹಿಡಿಯಬಾರದೇನು? ಕುಂಠಿ...

ಆಗಾಗ ಭೂ ಕಂಪಗಳು ಯುದ್ಧಗಳು ಸುನಾಮಿಗಳು ಮುಗಿಯದ ತಾಪ ತ್ರಯಗಳು ಗೋಜು ಗೊಂದಲಗಳು ಶರಧಿಯ ತಿಮಿಂಗಿಲಗಳು ಅಲ್ಲಲ್ಲಿ ಮಿಂಚು ಹುಳುಗಳು ದ್ವೀಪಗಳು ಕಾಪಾಡ ಬಂದ ಹಡಗುಗಳು ಸಿಡಿಸುತ್ತಿರುವ ಮತಾಪುಗಳು ಅನವರತ ಸಾಗುವ ಈ ಪ್ರಯಾಣ ಮುಗಿಯುವುದೇ ಇಲ್ಲ ಆಯಾಸ ...

ಕವಿಯ ಮನ ಮಿಡಿಯುವುದು ದಿನ ಹೊಸತನವ ಹುಡುಕುತ ಹೊಸ್ತಿಲಲಿ ಕಲ್ಪನೆಯ ಭಾವನೆಗಳು ಚಿಗುರೊಡೆದು ಹೊರ ಹೊಮ್ಮುತಿವೆ ಕಥೆ – ಕವನಗಳಾಗಿ ತನುವು ಕುಗ್ಗಿ ಬಾಗಿ ಮುದಿಯಾದರೂ ಮನಸ್ಸು ಚಿರ ಯೌವನದ ಚಿಲುಮೆಯಂತೆ ಪುಟಿದೇಳುವುವು ಕನಸಿನ ಸಾಲುಗಳು ಕರೆದೊ...

ಸತ್ತವನ ಮನೆಯಲ್ಲಿ ಸಂಜೆ ಅವರಿವರು ತಂದಿಟ್ಟ ಬಗೆ ಬಗೆಯ ಊಟ ಅವರಿವರು ತಂದಿಟ್ಟ ಹಲವು ಹತ್ತು ಸಮಸ್ಯೆ. ಸಂತಾಪಕೆ ಬಂದವರ ಮಾತು ನಗೆ ಕೇಕೆ ಸರಸ ಸಂಭಾಷಣೆ! ನವ ವಿಧವೆ ಸೊಂಟದಲ್ಲಿ ಬೀಗದ ಕೈಗೊಂಚಲು ಭದ್ರ. ಮಗ ಮಗಳು ಸೊಸೆ ಅಳಿಯ ಎಲ್ಲರದೂ ಒಂದೇ ಚಿಂತೆ...

ಸೀರೀಯ ಬಿಚ್ಚವ್ವಾ ಸಣಬಾಲಿ ಎದರಾಗ ಏನೈತಿ ನೀ ಖಾಲಿ ||ಪಲ್ಲ|| ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ ಮುತ್ತೀನ ಮುತ್ತೂ ಒತ್ತೈತೆ ಹತ್ತರ ಹದಚಂದ ಬಿತ್ತರ ಏನ್ಚೆಂದ ಹತ್ತೂರು ಸತ್ತೂರು ಸತ್ತೈತೆ || ೧|| ಸೀರೀಯ ಸಣಗಂಟು ಗಟಿಗಂಟು ಉಟಗಂಟು ನಾ ...

ಹನ್ನೆರಡು ವರ್ಷದವಳಿದ್ದಾಗ, ನನ್ನ ಮದುವೆ ಆಯಿತು. ದಿನಾಲೂ ಆರು ಗಂಟೆಗೆ ಎದ್ದು ಕೂಳು ಕುದಿಸಿ, ಸೂರ್ಯ ಕಣ್ಣು ತೆರೆಯುವ ಮೊದಲೇ ಭತ್ತ ಕೊಯ್ಯಲು ಹೋಗುತ್ತಿದ್ದೆ. ಸಂಜೆ ತಂದ ಕೂಲಿಯೆಲ್ಲ ಗಂಡ ಕಿತ್ತುಕೊಳ್ಳುತ್ತಿದ್ದ. ಕುಡಿದು ಬಂದು ಮನಬಂದಂತೆ ಬಡಿ...

ಖಯಾಲಿಗೆ ನನ್ನ ಎಲ್ಲವನ್ನು ನಾನು ಒಪ್ಪಿಸಿದ್ದೇನೆ ಖುಷಿಯಾಗುತ್ತದೆ, ಎಲ್ಲವು ವರ್ಣಮಯ ಸುಖಕರ ಕಾಣುತ್ತದೆ. ವೇದನೆ, ಭಾವನೆ ಅದರಲ್ಲಿಯೆ ಸರ್ವಕಾಲದ ಅಸ್ತಿಯಾಗಿದೆ. ಅದು ಬದುಕಿನ ಜಂಜಡದಿಂದ ದೂರವಿಡುವ ಅಮಲಿನ ಮೈಮರೆಯಲ್ಲಿ ಕರಗಿಸುವ ಸೆರೆಯಾಗಿದೆ. ನ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...