Home / ಕವನ / ಕವಿತೆ

ಕವಿತೆ

ಹರಿಯುತಿರುವ ನದಿ ಹರಿಯುತಿರಲಿ ಬಿಡು ತಡೆಯನೆಂದೂ ಒಡ್ಡದಿರು ಬದುಕನೆಂದೂ ಕದಡದಿರು ಗಡಿಯನೆಂದೂ ನೀಡದಿರು ಆಶಯವನು ಬಿಡದಿರು ನಿರೀಕ್ಷೆಯನು ಸುಡದಿರು ಮೋಡ ಚಲಿಸುತ್ತದೆ ಬಿಸಿಲು ಬಾಡುತ್ತದೆ. ವರ್ಷಗಳು ಉರುಳುತ್ತವೆ ಅಂಗಾಂಗಗಳು ಕುಸಿಯುತ್ತವೆ. ಉಸಿರ...

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ… ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ… ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳ...

ಕರ ಮುಗಿದು ಬೇಡುವೆನು ನಿನಗೆ ಹರಸು ಬಾರಮ್ಮ ಭೂಮಿ ತಾಯೇ ಮುನಿಸಿಕೊಳ್ಳದಿರು ಅನವರತ ನೀ ನಮ್ಮ ಜೀವದಾತೆ. ಲೆಕ್ಕವಿಲ್ಲದ ದೇವರುಗಳೆಲ್ಲ ನಿನ್ನ ತೆಕ್ಕೆಯಲ್ಲಿ ಬೆಳೆದವರು ಯಾವ ದೇವರು ಕೊಡದಿರುವ ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು. ಮುಕ್ಕೋಟಿ ...

ಮತ್ತೇರಿಸುವ ಗಾನದ ನಶೆ ಏರಿಸುವ ಪಾನದ ಕನಸಿನ ಲೋಕದಲ್ಲಿ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ ಗಾಜಿನ ಮನೆಯವರು. ನರ್ತಿಸದೆ ಇನ್ನೇನು ಮಾಡಿಯಾರು ? ಕಪ್ಪ ಕೊಡದೆ ಬಾಚಿ ಗಳಿಸಿದ್ದಾರೆ ಕಪ್ಪು ಹಣದ ಒಡೆಯರು. ತಿಂದು ಕುಡಿದು ಚೆಲ್ಲುತ್ತಿದ್ದಾರೆ ಉತ್ತ...

ವಿಲಯ ದಿಂದ ಮಲಯ ಭಾನು ಇಗೋ ಇಲ್ಲಿ ಮೂಡಲಿ ಪ್ರಲಯ ಮೇಘ ಇಂಗಿ ತಂಗಿ ಹೂವು ಹಣ್ಣು ಸುರಿಯಲಿ ||೧|| ಎಂಥ ಗಾಳಿ ಕುತ್ತು ಕೇಳಿ ಗರ್ರ ಗರ್ರ ತಿರುಗಿತು ಮನೆಯ ಗುಡಿಯ ಹುಡಿಯ ಮಾಡಿ ಚಿಂದಿ ಚೂರು ಮಾಡಿತು ||೨|| ಬರಲಿ ಶಾಂತ ಅವಲ ವಿಮಲ ರಾಜ ಹಂಸ ಜಲವನಂ ಮ...

ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು ಬಗ್ಗಿ ಕೈ ಮುಗಿದು ಹೇಳಿತು “ನಾ ತುಳಿಯದ ನೆಲವಿದೆ, ಕುಡಿಯದ ಗಾಳಿ ನೀರು, ಅರಿಯದ ನೆಲೆ ಇವೆ. ಅವಕ್ಕೆ ಬಗೆ ಬಗೆ ಬೆಲೆ, ಬೇರು. ಅಲ್ಲೆಲ್ಲ ಹೋಗಿ ಬಾ, ನಿಧಾನ ಆಗಿ ಬಾ, ಹುಗಿದ ಕೊಪ್ಪ...

ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ ಗೆರೆಗಳನ್ನು ಬಿಸಿಯುಸಿರಿನಲ್...

ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ ಮಮತೆಯ ಸಸಿಗಳು || ಎಲ್ಲಿ ಬಂಜೆತನದ ಬಾಳಿಹುದೋ ...

ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ...

ಯಾರು ಕಟ್ಟಿದರೊ ಈ ಭವ್ಯ ದೇಗುಲ ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? || ಯಾವ ಚರಿತೆಯು ಬರೆಯಲಿಲ್ಲ ಶಿಲಾಶಾಸನ ಕೊರೆಯಲಿಲ್ಲ ತಾಳೆಗರಿಗಳು ಮಿಡಿಯಲಿಲ್ಲ ತಾಮ್ರಪಟಗಳು ಹೊಗಳಲಿಲ್ಲ || ಕಟ್ಟಿಸಿದಾತನು ಪಟ್ಟದ ಮೇಲೆ ಅಟ್ಟಹಾಸದಲಿ ಹೆಸರಾದ ಕಟ್ಟಿದ ಸಾವಿ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...