ಏನೆಂದು ಬಣ್ಣಿಸಲಿ ನಾನು
ನಿನ್ನ ಏನೆಂದು ವರ್ಣಿಸಲಿ ನಾನು
ಆದಿಯು ನೀನೇ, ಅಂತ್ಯವು ನೀನಾಗಿರಲು||

ಕಾಲನು ನೀನು, ಕಾಲಾತೀತನು ನಾನು
ಕರ್ತೃವು ನೀನು, ಕರ್ಮಣಿಯು ನಾನು|
ಅಜೇಯನು ನೀನು, ಅಜಮಿಳನು ನಾನು
ದೈವನು ನೀನು, ದೇಹಿಯು ನಾನು||

ಸಾಗರನು ನೀನು, ಸಣ್ಣ ವರ್ಥಿಯು ನಾನು
ಸಿದ್ಧಾಂತಿಯು ನೀನು, ನಿನ್ನ ಸಂಶೋಧಕನು ನಾನು|
ಸಕಲ ಜೀವಕೋಟಿಗೆ ಆಶ್ರಯದಾತನು ನೀನು
ಅನಂತ ಕೋಟಿಯಲ್ಲೊಬ್ಬ ಆಶ್ರಯ ಕೋರಕನು ನಾನು||
*****