ನೂರು ನೋವ
ಅಳಿಸಿ ಹಾಡು
ನಲಿವ ನೀಡಿ
ತಣಿಸಿ ಮನವ
ಹಾಡು ಹಾಡಿದೆ ||

ಪ್ರೀತಿ ಎಂಬ
ಹೂವ ಕಟ್ಟಿ
ಮಾಲೆ ಹಾಕಿ
ಮಣಿಸಿ ಮಾತು
ನಿನ್ನ ಕರೆದಿದೆ ||

ಬಯಕೆ ತಂಪು
ಕಂಪನೊಸೆದು
ಹಸಿರು ಬಾಳ
ಸಸಿಯ ನೆಟ್ಟು
ಚೆಲುವನರಸಿದೆ ||

ಜನುಮ ಜನುಮ
ಬಂಧ ಚೆಂದ
ಅಂದ ಆನಂದ
ತಂದ ಸುಖದೆ
ಚಿಂತೆ ಕಳೆದಿದೆ ||

ಸೆಳೆದ ಮನದ
ಕನಸು ನೂರು
ನೆನಪು ಹಾದಿ
ಕಲ್ಪನೆ ಕಳೆದು
ಆಸೆ ಮೂಡಿದೆ ||

ಹಾಡ ಹಾಡಿ
ಹಗಲು ಇರುಳು
ಪರಿಯ ಹಕ್ಕಿ
ನಾದ ಹೆಕ್ಕಿ
ಮನವ ಕೆಣಕಿದೆ ||
*****