
ಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ ನನ್ನಂತರಂಗದಲ್ಲಿ ಹೃದಯವಿಂದು ಕುದಿಯುತಿದೆ ಉಕ್ಕುತಿದೆ ಬತ್ತುತಿದೆ ಒಂದೊಂದು ನನ್ನಾತ್ಮ ಬಿಂದು ಯಾವ ತಪ್ಪಿಗೆ ಯಾವ ಶಿಕ್ಷೆಯಿದೊ ಕಾಣೆನು ಸರ್‍ವ ಕ್ಷಮೆ ಯಾಚಿಸಲು ನಾನಿಂದು ಸಿದ್ಧನು ಏನ ಮಾಡಲು ಹೊರಟು ಏನಾಯಿತ...
ಸ್ಫುರ್ಜದೂರ್ಜಸ್ವಿತೆಯ ಚೈತನ್ಯದೊಂದೆಳೆಗೆ ಜನ್ಮಲಯಲಯಗತಿಯೊಳುಳಿಯೇಟ ಹೊಡೆದು ಕಾಲ ಬಲುಹಿಂದಣದ ಅದನೆ ಆ ಜೀವವನೆ ಕಂಡರಿಸಿದೀ ತನುವು ಹೊಸದು ನನ್ನದಿದು; ಬಗೆಬಗೆಯ ಪರಿಸರದ ವಾಸ್ತವವ್ಯಾಘಾತ- ದೊಳಗಿರವ ನೆಲೆಗೊಳಿಸಿ ಹದುಳದೊಳು ನಡೆಸಿ ಜ್ಞಾನಾರ್ಜನೋಪ...
ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ ಓಕುಳಿಯನು ಎರೆದ ಭ್ರಷ್ಟವಾದ ನೂರೊಂದು ಬಣ್ಣಕೆ ಹೊಸ ಭ...
ಮುಂದೇನು? ಮುಂದೇನು? ಓ! ಹಸುಳ ಜೀವವೇ ! ನಿನ್ನ ಹಾರಿಕೆಯಲ್ಲಿ? ಕತ್ತಲೆಯು ಕವಿದಿರಲು ಮುಳ್ಳುಗಾಡನು ಸೇರಿ ಕಾಲೆಲ್ಲ ನವೆದಿರಲು ನಿನ್ನ ನಂಬಿಕೆಯೆಲ್ಲಿ? ಆಧಾರ? ಭಾವವೇ ನಿನ್ನನ್ನು ತಿನ್ನುತಿದೆ. ನಿನಗಾಗದಾದವೇ ನಿನ್ನ ರಕ್ತವನುಂಡು ಬೆಳೆದ ತತ್ತ್ವ...
ಸರಸ ಮುಖಿಯರೆ ಬಾರೆ ಸಖಿಯರೆ ಚಂದ ಚಲುವಿನ ತೋಟಕೆ ಕಮಲ ಮಲ್ಲಿಗಿ ಜಾಜಿ ಸಂಪಿಗಿ ಹೂವು ಎತ್ತಿರೆ ಗುರುವಿಗೆ|| ರಾಜ ರಂಭಾಪುರಿಯ ಗುರುಗಳು ಇಕೋ ಗುರುಕೇದಾರರು ಶ್ರೀಶೈಲದ ಉಜ್ಜಯಿನಿಯ ಕಾಶಿ ಕ್ಷೇತ್ರದ ಶ್ರೇಷ್ಠರು ಕಡಲು ಉಡುಗೆಯ ಮಾಡಿ ತೊಟ್ಟರು ಭುವನ ...
ಇಳೆಗೆ ಬಂದಳದೋ ಲಕ್ಷ್ಮಿ ಮಧುಮಾಸದ ಅಮೃತ ರಶ್ಮಿ! ಮಿಂದು ಬಂತು ನೆಲಜಲ ಸ್ವಾಗತಿಸಿತು ಭೂತಲ ದಿಸೆ ದಿಸೆಯೂ ಹೊಳೆವ ಹವಳ ಸ್ವಸ್ತಿ ಲಿಖಿತ ಹೊಸ್ತಿಲ! ಗಗನ ಕರದ ನೀಲಕಮಲ ಅರ್ಘ್ಯವೀಯೆ ಕಿರಣ ಸುಜಲ ಕೈ ಮುಗಿಯಿತು ಜೀವಕುಲ ಭಾವ ಪಕ್ವ ಫಲವಲ! ಪುರೂರವನ ಎದ...
ಮಜ್ಜನಕ್ಕಾಗಿ ನಡೆದಿದೆ ಸೂರ್ಯನ ಪಡುವಣದ ಪಯಣ ಹಾಸಿಚೆಲ್ಲಿದೆ ಕೆಂಪನೆಯ ಜಮಖಾನ ಸೂರ್ಯನ ರಾತ್ರಿಯ ನಿದಿರೆಗಾಗಿ ಹಾರುತಿರುವ ಹಕ್ಕಿಗಳ ಆತುರ ಗೂಡು ಸೇರುವ ಕಾತುರ ಒಂದಿಷ್ಟು ಚಿಲಿಪಿಲಿಯ ಸದ್ದು ರಂಗಿನ ಸಂಜೆಗೆ ಮತ್ತಷ್ಟು ಸೊಬಗು ಕಡಲ ಮರಳಿನಲ್ಲಿ ಮನ...
ದೋಣಿಯೊಂದು ಹುಟ್ಟು ನಿನಗೆ ದೋಣಿಯೊಂದು ಹುಟ್ಟು ನನಗೆ ದೋಣಿಯೊಂದೆ ಯಾನವೊಂದೆ ಜೀವ ನದಿಯು ಒಂದೆಯೆ ಎಲ್ಲಿ ಯಾಕೆ ಸಾಗುತ್ತಿದೆ ತಿಳಿಯದು ನದಿ ನೀರಿಗೂ ಇರುವತನಕ ಹರಿವುದೊಂದೆ ಇರುವ ಗತಿಯು ಜೀವಿಗೂ ಹಕ್ಕಿ ನೀನು ಹಕ್ಕಿ ನಾನು ಗೂಡು ನಮ್ಮದೊಂದೆಯೆ ಎಲ...













