
ಅಮ್ಮನ ಮಡಿಲನೇರಿ ಕಂದ ಕಿಲಕಿಲನೆ ನಕ್ಕ ಅವಳ ಮಮತೆಯ ಕಾವಿಗೆ ಬೆಳೆದ ಶ್ರೀಮಂತ || ನೂರಾರು ಜನ್ಮದ ಪುಣ್ಯದ ಫಲವು ಅವಳ ಹಸಿರ ಸೆರಗ ಬಸಿರ ಕಂದ || ಅಳುವ ಕಂದನ ನಾದವ ಕೇಳಿ ನೋವ ಮರೆತು ತೊಟ್ಟಿಲ ತೂಗುವ ಆನಂದ || ರಾಮನ ಕಂಡು ಅಮ್ಮನು ಕೃಷ್ಣನ ಲೀಲೆಗೆ...
ಕೋಳಿ ಕೂಗಿದರೇನೇ ಬೆಳಗಾವುದೆಂಬ ಕಾಲವೊಂದಿತ್ತು| ನನ್ನ ಮನೆ ಬೆಂಕಿಯಿಂದಲೇ ಊರ ಜನರ ಬೇಳೆ ಬೇಯ್ಯುವುದೆಂಬ ಅಜ್ಞಾನದ ಕಾಲವೊಂದಿತ್ತು|| ಎಲ್ಲರೂ ಸರ್ವ ಸ್ವತಂತ್ರರು ಯಾರ ಹಿಡಿತದಲಿ ಯಾರಿಲ್ಲ| ಅಜ್ಞಾನಿಗಳು ಅಜ್ಞಾನದಿಂದ ಮುಗ್ಧರ ಆಳಬಯಸುವರು| ಸತ್ಯವ...
ಋಷಿಗಳ ಮನದಾಗೆ ಓಂಕಾರ ಹರದಂಗೆ ಬೆಸಲಾಗಿ ನಡೆದಾವೆ ತುಂತುಂಬಿ ಮೋಡ ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ || ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ ಎಳೆನಗೆ ಚಿಗತಂಗ ನಗತಾದ ಹುಲ್ಲು ಹಗಲೆಲ್ಲ ಗಾಳೆಪ್ಪ...
ಇಲ್ಲಿ ನಾನು ಬಿದ್ದಂತೆ ಎದ್ದಂತೆ ನಡೆದಂತೆ ಮರೆತಂತೆ ಅಲ್ಲಿ ನಿನಗೆ ಕನಸಾಗುತ್ತದೆ. ನನ್ನ ಉಸಿರು ಕಟ್ಟಿದಂತೆ ಸತ್ತಂತೆ ಹೂತಂತೆ ಸೋತಂತೆ ಸಾಯುವುದಿಲ್ಲ ಗೆಳೆಯಾ ಯೋಚಿಸ ಬೇಡ ಸಮ್ಮನೇ ಸತ್ತಂತೆಯೇ ಬದುಕುವುದು ಅಭ್ಯಾಸವಾಗಿದೆ ಬಿಡು ಮತ್ತೆ ಸಾಯುವುದೇ...
ಕಡಲ ಒಡಲೊಳಗಿಂದ ನಿನ್ನ ತಬ್ಬಿಕೊಳ್ಳುವೆನೆಂಬ ಮುಗಿಲೆತ್ತರದ ಆಸೆಯಿಂದ ಅಬ್ಬರಿಸಿ ರಭಸದಿ ಬರುತಿರಲು ನಾ… ನಿನ್ನ ಸನಿಹಕೆ ಅದೇಕೋ ತಣ್ಣಗಾದೆ ನಾ ನಿನ್ನಲ್ಲಿಗೆ ಬರುವಷ್ಟರಲ್ಲಿ ಸೇರದೇ ಬಿಗಿದಪ್ಪದೇ ನಿನ್ನ ನಾ.. ಮರಳಿದೆ ಗೂಡಿಗೆ ಕಡಲಿನಾ ಒಡಲ...
ಗಣಪತಿ ಬಂದಾನೋ ಚೌತಿ ಗಣಪಣ್ಣಾ ವರ್ಷಾ ವರ್ಷಾ ಹರ್ಷಾ ಹರ್ಷಾ ತಂದೆಣ್ಣಾ ||ಪಲ್ಲ|| ಮನಿಯಾ ಜಗಲಿ ಊರಾ ಬಗಲಿ ಮೆರೆದೆಣ್ಣಾ ಎದಿಯಾ ಬಾಗ್ಲಾ ದಡಾ ದಡಾ ತೆಗೆದೆಣ್ಣಾ ಚುಂವ್‌ಚುಂವ್ ಚುಂವ್‌ಚುಂವ್ ಇಲಿಯಾ ಮೇಲೆ ಕುಂತೆಣ್ಣಾ ಮವ್‌ಮೆವ್ ಮೆವ್‌ಮೆವ್ ಬೆಕ್ಕ...
ಭೂಗೋಳದ ತುಂಬ ಕಣ್ಣಾಡಿಸಿ ನೋಡಿದೆ- ನನ್ನ ಸುಂದರ ಕಾಶ್ಮೀರ ಕಾಣುತ್ತಲೇ ಇಲ್ಲ, ಎಲ್ಲಿದೆ ಅ ನಿಸರ್ಗದ ಬೀಡು- ಪ್ರವಾಸಿಗರ ಸ್ವರ್ಗದ ನೆಲೆವೀಡು, ಸುಂದರವಾದ ‘ದಲೆ’ ಸರೋವರದ ತಿಳಿ ನೀರನು ಕೆಂಪಾಗಿಸಿದ ವ್ಯವಸ್ಥೆಯ ವಕ್ತಾರರೇ ತೋರಿಸಿ ಕೊಡಿ ನನ್ನ ಹೂವ...
ಬಂತು ಶ್ರಾವಣ ಎಂತು ಬದುಕುವಳೊ ನಲ್ಲೆ ಜೀವ ಉಳಿಸಿ ಎಂದು ಹಪಹಪಿಸಿ ಮೈಗೆ ಮನಸ್ಸಿಗೆ ಯಾತನೆಯ ಬರಿಸಿ ಬರಿದೆ ಕೊರಗದಿರು, ಸೊರಗದಿರು ನಲ್ಲ ತುಂತುರು ಮಳೆಯ ತುಷಾರಕ್ಕೆ ತಂಗಾಳಿಯ ಅಲೆ ಬಂದು ಸಿಲುಕಿದಾಗ ನನ್ನ ಹೃದಯದ ಎಳೆ ಎಳೆದಂತಾಗಿ ಯಕ್ಷ, ನಿನ್ನ ನ...













