ಲಕ್ಷ್ಮಿಯೇ ನೀನೊಲಿದರೇನೇ

ಲಕ್ಷ್ಮಿಯೇ ನೀನೊಲಿದರೇನೇ
ನಮ್ಮಯ ಬಾಳು ಹಸನವು|
ಲಕ್ಷ್ಮಿಯೇ ನೀ ಒಲಿಯದಿರೆ
ನಮ್ಮಯ ಬಾಳು ಬರೀ ವ್ಯಸನವು||

ಲಕ್ಷ್ಮಿಯೇ ನಿನ್ನ ಕರುಣೆಯಿಂದ
ತಾನೇ ಸಕಲ ಸಂಪದವು|
ಲಕ್ಷ್ಮಿಯೇ ನಿನ್ನ ಆಗಮನದಿಂದ
ಏನೋ ಮನಕಾನಂದವು|
ಲಕ್ಷ್ಮಿಯೇ ನಿನ್ನಾ ದಯೆಯಿಂದ
ಧನ ಧಾನ್ಯ ಸಿರಿ ಸಂತಾನವು|
ಲಕ್ಷ್ಮಿಯೇ ನಿನ್ನ ಅಭಯದಿಂದ
ತಾನೇ ನಮ್ಮಯ ಆರೋಗ್ಯಭಾಗ್ಯವು||

ಲಕ್ಷ್ಮಿಯೇ ನಿನಗಾಗೆ ಕೆಂದಾವರೆ
ಹೂ ಮಾಲೆಯ ತಂದಿರುವೆನು|
ಲಕ್ಷ್ಮಿಯೇ ನಿನ್ನ ಮೆಚ್ಚಿಸೆ
ಮಲ್ಲಿಗೆಯ ಮಂಟಪವಕಟ್ಟಿರುವೆನು|
ನಿನ್ನ ನೈವೇದ್ಯಕೆ ತರ ತರದ
ಫಲಹಾರವನು ಮಾಡಿರುವೆನು|
ಶ್ರೀಹರಿ ಸಮೇತ ನೀಬಂದು
ದಯತೋರಿ ನಮ್ಮಲ್ಲಿ
ಇದನ್ನೆಲ್ಲ ಸ್ವೀಕರಿಸಿ ಹರಸೆಮ್ಮನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಖದ ಮರೀಚಿಕೆ
Next post ನಾ ನಿನ್ನ ಪಾದ ಧೂಳಿ

ಸಣ್ಣ ಕತೆ

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…