ಸೃಷ್ಟಿಯಲ್ಲಿ ಎಲ್ಲರೂ ಸುಖವಾಗಿರುವರಾ ಎಂದು ಪರೀಕ್ಷಿಸಲು ದೇವರು ಬಂದ. ಕಡಲಿನಲ್ಲಿ ಈಜುತ್ತಿದ್ದ ಮೀನನ್ನು ಕೇಳಿದ- “ನೀನು ಸುಖವಾಗಿರುವೆಯಾ?” “ನನಗೆ ನೀರಿನಲ್ಲಿ ಬಾಳು ಹಾಯಾಗಿದೆ” ಎಂದಿತು. ಆಕಾಶದಲ್ಲಿ ಹಾರುವ ಹಕ್ಕಿಗೆ ಇದೇ ಪ್ರಶ್ನೆ ಮಾಡಿದ. “ನೀಲ ಆಗಸದಲ್ಲಿ ಹಾರಾಡಿ, ಗಿಡದಿಂದ ಗಿಡಕ್ಕೆ ಹೋಗಿ ಹಣ್ಣು ತಿಂದು ಗೂಡು ಕಟ್ಟಿ ಕೊಂಡು ಹಾಯಾಗಿರುವೆ” ಎಂದಿತು. ಇದೇ ಪ್ರಶ್ನೆಯನ್ನು ಮನುಷ್ಯನಿಗೂ ಕೇಳಿದ, “ಮನುಜ ನೀನು ಸುಖವಾಗಿರುವೆಯಾ?” ಎಂದ. “ನಾನು ಖಂಡಿತ ಸುಖವಾಗಿಲ್ಲ. ಸಾವಿರಾರು ತೀರದ ಆಶೆಗಳು, ಬಗೆಹರಿಯದ ಸಮಸ್ಯೆಗಳು” ಎಂದು ಹೇಳುವುದರಲ್ಲಿ ದೇವರು ಮಾಯವಾಗಿಬಿಟ್ಟ. ಮಾನವನು ಯುಗ ಯುಗಗಳಿಂದಲೂ ಸುಖದ ಮರೀಚಿಕೆಯಲ್ಲಿ ಬೇಯುತ್ತಿದ್ದಾನೆ.
*****