
(ಮಂಗಳಾರತಿ) ಸೂರ್ಯ ಪಾದಾ ಚ೦ದ್ರ ಪಾದಾ ಕಡಲ ನಾದಾ ಮಂಗಳಾ ಆದಿ ರೇಣುಕ ವೇದ ಘೋಷಾ ಭುವನ ಭಾಸ್ಕರ ಮ೦ಗಳಾ ಅತ್ತ ಅಗೋ ವೀರಭದ್ರಾ ರುದ್ರ ತಾಂಡವ ಮಂಗಳಾ ಇತ್ತ ಇಗೋ ಢಮರು ಢಮರುಗ ಭುವನ ಭೈರವ ಮಂಗಳಾ ಜ್ಞಾನ ಯೋಗಿಯೆ ಪ್ರೇಮ ರಾಜ್ಯವೆ ನಾದ ಬಿಂದುವೆ ಮಂಗಳ...
ಹೊಂಗಳಸ ಮಿರುಗುವೆಡೆ ಮೊನೆಗೂಡುವಾಗಸದ ಮೊಳಕಾಲಿನೊಳು ಸರಿವ ಬಿಸಿಲಿನಂಗಳದ ಸದ್ದಿರದೆ ತುಟಿಬೆರಳಿನೊಳು ಸುಳಿವ ಮಾರುತದ ಪಾವಿತ್ರ್ಯದೊಸಗೆಯನು ತಳೆದು ಬಹ ನೆಲದ ನೆನೆದೊಡನೆ ನೆರೆಗೊಳುವ ನೇತ್ರಾಂಬು ತೀರ್ಥಗಳ ಹೊಗೆವೊಳಗನೇರೆ ಬಹ ದಿವ್ಯ ಭಾವಗಳ ಸಿರಿಯ...
ಎಷ್ಟೊಂದು ನಕ್ಷತ್ರಗಳು ಅಡ್ಡ ಬಂದವು ಸೂರ್ಯನ ಬೆಳಕಿಗೆ ಕತ್ತಲೆಯನ್ನು ಕತ್ತರಿಸುವ ಕೋಲ್ ಮಿಂಚನು ತುಂಡರಿಸಬಹುದೆ? ಎಷ್ಟೊಂದು ಶಬ್ದ ಕಂಪನಗಳಾಗಿವೆ ಕತ್ತಲೊಡಗಿನ ಭೂಮಿಯ ಗರ್ಭದಲಿ ಅಂತರಂಗದ ಕತ್ತಲೆಗೆ ಓಡಿಸಲು ನಿಶ್ಯಬ್ದದೊಳಗಣ ಶಬ್ದ ಚಿತ್ತಾರ ಶಬ್ದ...
ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ ತಾಯಿಯ ಉಳಿಸೋಣ ನಲುಗಿದ ...
ಗುರುವೆ ನಿಮ್ಮ ಚರಣ ತುಂಬಿ ತುಂಬಿ ಹೂವು ಅರಳಿತು ನಿಮ್ಮ ಸ್ಮರಣ ಸವಿವ ದುಂಬಿ ಜೀವ ಸ್ಫೂರಣ ಪಡೆಯಿತು ಕಲ್ಲು ಕೊರಡು ಕಮಲವಾಯ್ತು ಮನೆಯು ಮಂದಿರವಾಯಿತು ಆತ್ಮದೀಪ ದೇವ ದೀಪ ಜ್ಯೋತಿ ರೂಪ ಪಡೆಯಿತು ಮನದ ಮಾನಸ ಸರೋವರದಲಿ ರಾಜ ಹಂಸೆಯು ತೇಲಿತು ಮಳಲು ಹ...













