ಭವದ ಗರಳವ ಗುಡಿಯ ಶಿತಿಕಂಠದೊಳು ಶಮಿಸಿ
ನವಜಾತಚಿತ್ತದೊಳು ಜೀವ ರಮಿಸೆ
ತೊಳೆದ ಮುಕ್ತಾಫಲದ ಕಾಂತಿವೆತ್ತಾತ್ಮವಿದು
ಹೊರಗಲೆವ ನಲವಿನುಸಿರಾಡಿ ಜ್ವಲಿಸೆ
ಹೊಗುಹೊಗುತ ಹೊರಬರುವ ಮಾನುಷ್ಯ ವಾಹಿನಿಯ
ಕಲ್ಲೋಲಲೀಲೆಯೊಳು ದಿಟ್ಟಿ ಸಲಿಸಿ
ಶಂಖಜಾಗಟೆದನಿಯ ಕೈವಾರದೊಳು ನಾಮ-
ದುಗ್ಗಡಣೆಯಿರಿವಿನೇರುವೆಯಾಲಿಸಿ
ಮಂದಿರಪ್ರಾಕಾರಸೋಪಾನದೊಳು ಕುಳಿತು ಪಡುವ ಬಿಡುವಿನ ಸೊಗಕು ಮಿಗಿಲ ಕಾಣೆ
ವಿಷಯಾತ್ಮಸಂಬದ್ಧರಸದ ವ್ಯವಹಾರದೊಳು ಸಫಲವೀ ದೇಗುಲದ ಲೇಣೆದೇಣೆ.
*****


















