ಬುವಿಗಾಯಿತು ಬೆಳುದಿಂಗಳ ಸೇತುವೆ ಇಗೊ ಬನ್ನಿ ; ನಂದನವನ ಕುಸುಮಂಗಳ, ಕೆಳದಿಯರೇ, ತನ್ನಿ. ದೈನಂದಿನದಿಳೆಯಾರ‍್ತಿಯ ಪೂಜೆಗೆ ಆಸತ್ತು ಬೇಸತ್ತಿಹ ಮಾದೇವನ ನಲಿಸುವ ಈ ಹೊತ್ತು. ಬಾನ್‌ಬಟ್ಟೆಯೊಳಡಿಗೆಜ್ಜೆಯ ನೇವುರ ಝಣರೆನಲಿ, ಹಾಸಿಗೆಯೊಳು ಹಸುಮಕ್ಕಳು ...
೧ ಉಮ್ಮಳಿಸಿದೆ ಮಗು! ಕಾಯುವ ತಾಯಿಯ ಕೈಯ ನೀಡುವಿರಾ ನನ್ನಯ ರಯ್ಯ ಗೆಳೆಯರಿರಾ! ೨ ಇಮ್ಮಡಿ ಮುಮ್ಮಡಿ ನಾಲ್ಮಡಿ ನೂರ್ಮಡಿ ತಳಮಳಗೊಳುತಿಹುದು ಈ ಮಗು ಕಳವಳಗೊಳುತಿಹುದು! ೩ ನಿಮ್ಮಯ ನೆಮ್ಮದಿ-ಮಡಿಲಲಿ ಮಡಗಿಸಿ ಮಲಗಿಸಿಕೊಳ್ಳುವುದು ಗೆಳೆಯರೆ ತೂಲಗಿಸಿ ತ...
ಇಲ್ಲಿ ಕವಿಯ ದೃಷ್ಟಿಯರಳಿ ಮಾಗಿತವನ ಜೀವವು. ಇಲ್ಲಿ ಕೊಳದ ಬಳಿಗೆ ಬರಲು ಕೊನರಿತವನ ಭಾವವು. ಗಿರಿಕ೦ದರದೀ ಸುಂದರ ಸೀಮೆಯನ್ನೆ ತುಂಬಿತು ಕವಿಯ ಪ್ರತಿಭೆ, ಪ್ರಕೃತಿದೇವಿಯೊಲವನೊಂದೆ ನಂಬಿತು. ರವಿಯ ದಿನದ ಬೆಳಗು-ಮುಳುಗು ಜಲಪಾತದ ಹಿರಿಯ ಮೊಳಗು ಮಳೆಬಿ...
ಇದು ಸುಖಸ್ಪರ್ಶ. ಮೈಗೊಂಡು ಬಂತು ಇದು ಸೂಸಿ ಬಂದ ಹರ್ಷ ಮಗುಗಳಾಗಮನ ಜೀವ ಸಂಗಮನ ಜಗಕೆ ಪುಷ್ಪ-ವರ್ಷ. ಮನದ ಮೂಲೆ ಮೂಲೆಯಲಿ ಮಲೆತ ತಮ ಶಮನಗೊಳಿಸಲೆಂದು ಬಳಿಗೆ ಬಂತೆ ಈ ಚಿಗುರು-ಬೆಳಕು ಮನೆಮನೆಯನುಳಿಸಲೆಂದು. ದೇವ ಮನದ ಸ್ಮಿತಬಿಂದು ಒಂದು ಒಂದೊಂದು ಮ...





