ನನ್ನ ಪ್ರಕೃತಿಯಲ್ಲ ನೀನು
ನಿನ್ನ ಪುರುಷ ಯಾವನೋ?
ನಿನ್ನ ಕೇಳಿ ಕಳೆದುಕೊಂಡೆ
ಕಂಡು ಉಂಡ ಕಾವನೋ?
ಕರುಳನೀಯಲಾರನೇನೋ
ಕರುಣಿಸುತ್ತ ಈವನೋ?
ಕತ್ತಲಲ್ಲಿ ಆಟವಾಡಿ
ಕೆಣಕುವ ಯಾ ದೇವನೋ?
ಅಲೆಯುತಿಹೆನು ಅಂತರಾಳ
ನಾ ವಿದೇಹಿ ಭೂತವೋ?
*****
ಕನ್ನಡ ನಲ್ಬರಹ ತಾಣ
ನನ್ನ ಪ್ರಕೃತಿಯಲ್ಲ ನೀನು
ನಿನ್ನ ಪುರುಷ ಯಾವನೋ?
ನಿನ್ನ ಕೇಳಿ ಕಳೆದುಕೊಂಡೆ
ಕಂಡು ಉಂಡ ಕಾವನೋ?
ಕರುಳನೀಯಲಾರನೇನೋ
ಕರುಣಿಸುತ್ತ ಈವನೋ?
ಕತ್ತಲಲ್ಲಿ ಆಟವಾಡಿ
ಕೆಣಕುವ ಯಾ ದೇವನೋ?
ಅಲೆಯುತಿಹೆನು ಅಂತರಾಳ
ನಾ ವಿದೇಹಿ ಭೂತವೋ?
*****