Home / ಕಥೆ / ಕಿರು ಕಥೆ / ದುಂಬಿದಂಡು

ದುಂಬಿದಂಡು

ಝೆನ್ ಗುರುಗಳು ಧ್ಯಾನಕ್ಕೆ ಕುಳಿತಾಗ ದುಂಬಿಯ ದಂಡು ಒಂದು ಗುರುಗಳನ್ನು ಸತಾಯಿಸುತಿತ್ತು. ಗುರುಗಳ ಧ್ಯಾನ ಭಂಗವಾಗದಂತೆ ಶಿಷ್ಯ ಬಹಳ ಶ್ರಮವಹಿಸಿ ದುಂಬಿಗಳನ್ನು ಓಡಿಸುತ್ತಿದ್ದ. ದುಂಬಿಗಳು ಝೇಂಕಾರ ಮಾಡುತ್ತ ಕೆಲವೊಮ್ಮೆ ಗುರುಗಳನ್ನು ಕುಟುಕುತಿತ್ತು. ಕಿವಿಯ ಹತ್ತಿರ ಹೋಗಿ ಗುಂಯ್ ಗುಟ್ಟುತಿತ್ತು. ಅತೀವ ಕಳವಳದಿಂದ ಶಿಷ್ಯ ಗುರುಗಳಲ್ಲಿ ಹೇಳಿದ- “ನಿಮಗೆ ತೊಂದರೆ ಕೊಡುತ್ತಿರುವ ಈ ದುಂಬಿ ದುಂಡನ್ನು ನಾನು ಇಂದು ಜಾಲದಲ್ಲಿ ಸೆರೆಹಿಡಿಯುತ್ತೇನೆ” ಎಂದು. ಸರ್ವಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಮಾರನೆಯದಿನ ಶಿಷ್ಯ ದುಂಬಿ ದಂಡನ್ನು ಮರ್ದಿಸಲು ಖಡ್ಗ ಪ್ರಯೋಗ ಮಾಡಲು ಅನುವಾದ. ಇದನ್ನು ನೋಡಿದ ಗುರುಗಳು- “ಶಿಷ್ಯ ದುಡಕಬೇಡ, ಇದಕ್ಕೆ ಒಂದು ಸುಲಭೋಪಾಯವಿದೆ” ಎಂದರು. “ಗುರುಗಳೇ ಹೇಳಿ ನಾನು ಏನು ಮಾಡಬೇಕು?” ಎಂದ ಶಿಷ್ಯ.

ಸುಗಂಧಿತ ಪುಷ್ಪದ ಕುಂಡಗಳಿಂದ ನಮ್ಮ ಬೌದ್ಧ ವಿಹಾರವನ್ನು ಅಲಂಕರಿಸು. ಆಗ ದುಂಬಿದಂಡು ತಮ್ಮ ಧ್ಯಾನವನ್ನು, ಗಮನವನ್ನು ಹೂವಿನ ಹೃದಯದ ಕಡೆ ತಿರುಗಿಸುತ್ತವೆ. ನನ್ನ ಧ್ಯಾನಕ್ಕೆ ಏನು ಅಡ್ಡಿಯಾಗುವುದಿಲ್ಲ.” ಎಂದರು ಗುರುಗಳು.

ಶಿಷ್ಯನ ಕೈಯಲ್ಲಿದ್ದ ಖಡ್ಗದ ಬ್ರಹ್ಮಾಸ್ತ್ರನಾಚಿ ಮೂಲೆ ಸೇರಿತು. ಸ್ವರ್ಣ ಸಂಪಿಗೆ, ಮಲ್ಲಿಗೆ, ಜಾಜಿ, ಕಮಲಗಳು ವಿಹಾರದಲ್ಲಿ ಅರಳಿ ದುಂಬಿವಿಂಡಿಗೆ ಸ್ವಾಗತವಿತ್ತವು. ಸಮಸ್ಯೆಗೆ ಶಾಂತ ಪರಿಹಾರ ಸೂಚಿಸಿದ ಗುರುಗಳಿಗೆ ಶಿಷ್ಯ ನಮಿಸಿದ.
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...