Home / ಕವನ / ಕವಿತೆ

ಕವಿತೆ

ಇಂದೇಕೋ ಕವಿತೆ ಬರೆಯುವ ಹುಚ್ಚು ಒಳಗಿನದೆಲ್ಲ ಹೊರಬರಬಹುದೇ ಎಂಬ ನಚ್ಚು ಅವಿತಿಡಲಿ ಎಷ್ಟು ದಿನ ಜೀರ್ಣವಾಗದ ಈ ಅನ್ನ ಕಾಡುತ್ತದೆ ಒಳಗೊಳಗೇ ಹಿಂಡಿ ಜೀವವನ್ನ ಅತ್ತ ಅರಗುವುದೂ ಇಲ್ಲ. ರಕ್ತಗತ, ಇತ್ತ ಹೊರ ಬರುವುದೂ ಇಲ್ಲ ಮುಗಿಸಿ ತನ್ನ ಸುತ್ತ ಬರಲೇ ...

ದೇವನು ಇವ ದೇವನು ನರ ದೇಹಕೆ ಇವ ದೇವನು ಹುಟ್ಟಿಗೆ ಮರು ಹುಟ್ಟು ನೀಡಿ ಕಾಯುವ ಈ ವೈದ್ಯನೂ ಬಾಧೆಯಲಿ ನಲುಗಿದ ದೇಹಕ್ಕೆ ಮುಕ್ತಿದಾತ ವೈದ್ಯನು ತಾನಾಗಿಹನು ವ್ಯಾಧಿಯೆನ್ನುವ ವೈರಿಯ ಬಡಿದೋಡಿ ಸುವ ಈಶನು ನೋವ ನೀಡಿ ನಲಿವು ಕೊಡುವ ಕಹಿಯ ತಿನ್ನಿಸಿ ಸವಿ...

ಮುದ್ದು ಮಕ್ಕಳು, ಮುದುಕರು ಹಲವು ವಿಷಯಗಳಲ್ಲಿ ಒಂದೇ. ಪ್ರತಿಯೊಂದರಲ್ಲಿಯೂ ಆಸಕ್ತಿ, ಕುತೂಹಲ. ಆಸೆಪಟ್ಟಿದ್ದು ಬೇಕೇ ಬೇಕೆಂದು ಹಟ ಹಿಡಿಯವುದು ಇತ್ಯಾದಿ. ಆದರೆ ಮಕ್ಕಳು ಬೇಕಾದ್ದನ್ನು ಬಹು ಬೇಗ ಕಲಿಯುತ್ತವೆ. ಬೇಡವಾದುದನ್ನು ಅಷ್ಟೇ ಬೇಗ ಮರೆಯುತ್...

ಬಾರ ಪಾತರಗಿತ್ತಿ ಚನ್ನಿ ನಿನಗ ಯಾತರ ಚಿಂತಿಯು ಹೂವು ಹೂವಿನ ತೇರು ಎಳಿಯ ನೀನ ಕಳಸದ ಗಿತ್ತಿಯು ಹಸಿರು ಹೂವು ಗುಡ್ಡ ಬೆಟ್ಟಾ ನಿನ್ನ ಮಂಚಾ ತೂಗ್ಯವ ಮುಗುಲ ಮ್ಯಾಲಿನ ತಂಪುಗಾಳಿ ನಿನ್ನ ಪಕ್ಕಾ ತೊಳೆದವ ದೇವರಾಯನ ಮನಿಯ ತೋರ ನೀನ ಪಾರ್‍ವತಿ ರೂಪಸಿ ನೀ...

ಕನ್ನಡಿಯ ಎದುರು ಅಪರೂಪಕ್ಕೆ ಕೂತ ನಾನು ದಿಟ್ಟಿಸಿ ನೋಡಿದೆ ನನ್ನ ಬಿಂಬ ನನ್ನನ್ನೇ ಅಣಕಿಸುವಂತೆ ಕಂಡಿತು ಸಿಟ್ಟಿನಿಂದ ಮುಷ್ಟಿ ಬಿಗಿ ಮಾಡಿ ಜೋರಾಗಿ ಹೊಡೆದೆ ಕನ್ನಡಿ ಚೂರು ಚೂರಾಗಿ ನೆಲಕ್ಕೆ ಬಿದ್ದು ಒದ್ದಾಡಿ ಹೇಳಿತು “ಇದರಲ್ಲಿ ನನ್ನದೇನು...

ಝುಳು ಝುಳು ನಡು ಬಳುಕಿಸಿ ಬಂದಳು ನೀರೆ ಯಾರಿವಳು ಹೇಳೆ || ಮೌನದಿ ತೂಗುತ ಜಾಲವ ಬೀಸುತ ಚಂಚಲೆ ಇವಳು ಯಾರಿವಳು ಹೇಳೆ || ವೈಯಾರಿ ಇವಳು ಗಯ್ಯಾಳಿ ಇವಳು ಮರ್ಮವ ತಿಳಿ ಯಾರಿವಳು ಹೇಳೆ || ಊರ ಹೊರಗೆ ಊರನಾಳ್ವಳು ಆಗರ್ಭ ಸಂಜಾತೆ ಇವಳೆ ಇವಳು ಕೇಳೆ ||...

ನಿಂದಿಸದಿರು ನೀ ಕಾಲವನು ವಿಧಿಯ ನೆಪಮಾಡಿ| ದೂಷಿಸದಿರು ನೀ ಈ ಜನ್ಮವನು ಹಿಂದಿನ ಕಾಲಕರ್ಮನು ಹಗೆಮಾಡಿ|| ಕಠಿಣ ಪರಿಶ್ರಮವಿಲ್ಲದೆ ಬರಿಯ ಅದೃಷ್ಟವನೇ ನಂಬಿ ಬದುಕಲು ಸಾದ್ಯವೇನು?| ಬಿಲ್ಲನೆತ್ತಿ ಬಾಣವ ಹೂಡದೆ ಬರೀ ಠೇಂಕರಿಸಿದರೆ ಗುರಿಯತಲುಪಲು ಸಾಧ್...

ಸಾಲ ಸರ್ಪವು ಬಂದು ಸಂಸಾರ ಸೇರಿತು ಚಿತ್ತ ಚಿತ್ತವನೆಲ್ಲ ಹುತ್ತವ ಮಾಡಿತು. ಸಣ್ಣ ಸಂದೀಲಿ ತೂರಿ ಬಂದಾ ಸರ್ಪ ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ ಸಂಸಾರದಾಗೆ ಇನ್ನೆಂಥ ಶಾಂತಿ! ಸುತ್ತಿ ಬಳಸಿದ ಸರ್ಪ, ಆಲಿಂಗ...

ಮಂಗಳಂ, ಮೈಸೂರಿನರಮನೆಗೆ ಮಂಗಳಂ. ಜಯದ ಹೆಸರಿನ ಚಾಮರಾಜಂಗೆ ಮಂಗಳಂ. ಮುಮ್ಮಡಿಯ, ನಾಲ್ಮಡಿಯ ದಿವ್ಯ ತೇಜಂಗಳಂ ಒಮ್ಮುಡಿಯೊಳಾಂತೆಸೆವ ಧೀರಂಗೆ ಮಂಗಳಂ. ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ, ಸೋದರನ ಸೌಭಾಗ್ಯದಮೃತ ಕಳಶಂಗಳೇ, ಲಾವಣ್ಯ ಲಕ್ಷ್ಮಿಯರನಾಳ...

ಸೂರ್ಯ ಅಪೂರ್ಣ ಚಂದ್ರ ಅಪೂರ್ಣ ತಾರಾಗಣ ಅಪೂರ್ಣ ಗಗನ ಅಪೂರ್ಣ ಭೂಮಿ ಅಪೂರ್ಣ ವಾರಿಧಿಯು ಅಪೂರ್ಣ ಭೂತ ಅಪೂರ್ಣ ಭವಿಷ್ಯ ಅಪೂರ್ಣ ವರ್ತಮಾನ ಅಪೂರ್ಣ ಅರಿವು ಅಪೂರ್ಣ ಆಯುಸ್ಸು ಅಪೂರ್ಣ ಯುಗ ಯುಗಾದಿ ಅಪೂರ್ಣ ಮಾತು ಅಪೂರ್ಣ ಮೌನ ಅಪೂರ್ಣ ಶಬ್ದಾರ್ಥ ಅಪೂ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...