ವೃತ್ತಪತ್ರಿಕೆಯ ಕುರಿತು
ಶಾಲಾ ಕಾಲೇಜು ದಿನಗಳಿಂದಲೂ
ಬರೆಯುತ್ತಾಬಂದಿದ್ದೇವೆ
ಲೇಖನಗಳನ್ನು, ಪ್ರಬಂಧಗಳನ್ನು.
ಹಾಡಿ ಹೊಗಳಿದ್ದೇವೆ
ಅದರ ಬಹು ಉಪಯೋಗಗಳನ್ನು.
ಕಳೆದ ವಿದ್ಯಾರ್ಥಿ ದೆಸೆ
ಮುಗಿದ ನಿರುದ್ಯೋಗ ಪರ್ವ
ಬಂದೆರಗಿದ ಸಂಸಾರ ಸಾಗರ
ಇದೀಗ ತಿಳಿಸಿಕೊಟ್ಟಿದೆ
ವೃತ್ತಪತ್ರಿಕೆಯ ಪ್ರಯೋಜನವನ್ನು
ಜೀವರಕ್ಷಕ ಮಹಾ ಗುಣವನ್ನು!
ತಿಂಗಳ ಕೊನೆಯ ವಾರ
ಕೈಲಿ ಕಾಸಿಲ್ಲದ ಸರದಾರ
ಮಾರು ಹಳೆಯ ವೃತ್ತಪತ್ರಿಕೆ
ಉಟಕ್ಕಾಗುವುದು ಎರಡು ಹೊತ್ತಿಗೆ!
*****
೦೮-೧೨-೧೯೯೨