ಮಣ್ಣೆತ್ತು

ಜನರ ಜೀವ ಅನ್ನ
ಅನ್ನದ ಜೀವ ಮಣ್ಣು
ಮಣ್ಣೇ ರೈತನ ಜೀವ
ಎತ್ತುಗಳೇ ರೈತನ ಜೀವನ

ಈ ಮಣ್ಣು ಮತ್ತು ಎತ್ತುಗಳೇ
ಅನ್ನವ ನೀಡುವ ಕಣಜಗಳು
ಬೆಳೆಯುವುದು ರೈತರ ಜೀವನ
ಎತ್ತುಗಳೇ ರೈತನ ಚೇತನ

ದೇವರ ಪೂಜಿಸುವ ತೆರದಲಿ
ಮಣ್ಣು ಮತ್ತು ಎತ್ತುಗಳ ಸೇರಿಸಿ
ಮಣ್ಣೆತ್ತ ಮಾಡಿ ಜಗಲಿಯಲ್ಲಿ ಇಟ್ಟು
ಪೂಜಿಸುವ ರೈತ ಈ ದಿನ
ತನ್ನ ನಿಜವಾದ ದೇವರೆನ್ನುತ

ಮಣ್ಣು ಎತ್ತು ರೈತನ ಸೊತ್ತು
ನಿತ್ಯ ಕರ್ಮದಿ ಜೊತೆಯಾಗಿತ್ತು
ಬಿತ್ತಿ ಬೆಳೆವ ಹೊಲದಿ ಪೈರು
ಅನ್ನ ನೀಡುವ ಅನ್ನದಾತ ಇವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನೊಳಗಿನ ನಾನು…
Next post ಪ್ರಯೋಜನ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…