ಅವ್ವಾ
ಅವರು
ಕತ್ತಿ ಮೊನೆ
ಕೊರಳಿಗೆ ಚುಚ್ಚಿ
ತಮಗೆ ಬೇಕೆನಿಸಿದ
ನುಡಿ ಅರುಹಲು
ಆಗ್ರಹಿಸುತ್ತಿದ್ದಾರೆ

ಇವರು
ನಾಲಿಗೆಗೇ
ಭರ್ಜಿ ನೆಟ್ಟು
ತಮಗೊಲ್ಲದ
ನುಡಿ ಅರಳದಂತೆ
ಕಡಿವಾಣ ಹಾಕಿದ್ದಾರೆ

ಅವ್ವಾ….
ಎಂದಿಗೂ
ನನ್ನ
ನುಡಿಗಳಲ್ಲಿ
ನನ್ನೊಳಗಿನ ನಾನು
ಜೀವಿಸಿಯೇ ಇಲ್ಲ…..
*****