Home / ಕವನ / ಕವಿತೆ

ಕವಿತೆ

`ಅಹಂಕಾರರಹಿತ ನಾನು ಮುಕ್ತ ಆತ್ಮನಂದನು- ಸುಡಲಿ ಊಟ ಬರದು ಏಕೆ ಕೂಡಲೆ ತಾನೆ’೦ದನು. ಅವನಿಗೆಂದೆ `ಏಕೊ ರೋಷ?’ `ಎಂಥ ರೋಷ ಎದರದು? ಉದರದೇವ ಹಸಿದುಕೊಂಡ ಆ ಗರ್ಜನೆ ಆದರದು!’ `ಹೀಗೊ’ ಎಂದೆ- ‘ಹೌದು’ ಎಂದ ...

ವಸಂತ ೧ ಬಂದೆ ಬರುವನಂತೆ ಆತ ಬಂದೆ ಬರುವನಂತೆ ! ಚೆಂದದೊಸಗೆಯನ್ನು ಕೇಳಿ ನವಿರ ಹೊರೆಯನಾಂತೆ ! ನಿಂದೆ ಮರುಳೆಯಂತೆ…. ನಿಂದೆ ಮರುಳೆಯಂತೆ, ನೆರೆಯೆ ಮೈಮರೆವಿನ ಸಂತೆ. ೨ ಇನಿಯ ಬರುವ ಮೊದಲೆ ನನ್ನ ಮನೆಯನೆಂತು ಮಿನುಗಿಸುವೆ? ಮನಸು ಮೆಚ್ಚಿ ತಕ...

ಮೊದಲು ಸೀರೆಯನುಟ್ಟಾ ಕ್ಷಣ ಮೊದಲ ಸೀರೆಯನುಟ್ಟ ದಿನ| ಏನೋ ಒಂಥರಾ ತರ ಹೇಳಲಾಗದ ಹೊಸತನ ಮೈ ನವಿರೇಳಿಸುವ ರೋಮಾಂಚನ|| ನೆರಿಗೆ ಸರಿಯಾಗಿ ಕೂರುತ್ತಿರಲಿಲ್ಲ ಹಾಗೆ ಗಟ್ಟಿಯಾಗಲ್ಲಿ ನಿಲ್ಲುತ್ತಿರಲಿಲ್ಲ| ಸೆರಗು ಜಾರಿ ಜಾರಿ ಬೀಳುತಲಿತ್ತು ಭುಜದಮೇಲಿಂದ ...

ಬೋಧಿ ವೃಕ್ಷದ ಚಿತ್ರ ಬರೆದವರೆಲ್ಲ ಬುದ್ಧರಲ್ಲ ಹೆಚ್ಚೆಂದರೆ ಸಿದ್ದಾರ್‍ಥರು! ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ. ಯಾಕೆಂದರೆ- ಬುದ್ಧರಾಗುವವರ ಬಾಯಲ್ಲಿ ನರಿ, ಮರಿಹಾಕುವುದಿಲ್ಲ. ನರಿ ನಾಲಗೆಯಲ್ಲಿ ನಯ...

ರಾಜರು ಕಟ್ಟಿಸಿದ ಅರಮನೆ ಮಹಲು, ಗುಡಿ, ಗೋಪುರ, ಮಸೀದಿ, ಕೋಟೆ, ಕೊತ್ತಳಗಳಿಗೆ ಇಟ್ಟಿಗೆ, ಗಾರೆ, ಕಲ್ಲುಗಳ ಹೊತ್ತು ಹುಡಿಯಾಗಿ ಕೊನೆಗೆ ಭೂತಾಯಿ ಒಡಲು ಸೇರಿದವರು. ಇಲ್ಲವೆ ರಾಜರು ಘೋಷಿಸಿದ ಯುದ್ಧಗಳಿಗೆ ಮರು ಮಾತಿಲ್ಲದೆ ಕತ್ತುಗಳ ಕತ್ತರಿಸಿ ನೆತ್...

ಕಾಳು ನೀಡು ಹಕ್ಕಿಗಳಿಗೆ ಕಾಳಿಗವೇ ಕಾರಣ ನೀರು ನೀಡು ಮರಗಳಿಗೆ ನೀರಿಗವೇ ಕಾರಣ ನಿನ್ನೆಯ ನೆನೆ-ಈ ದಿನಕೆ ನಿನ್ನೆಯೇ ಕಾರಣ ಈ ದಿನ ಜೋಪಾನ- ನಾಳೆಗೀ ದಿನವೇ ಕಾರಣ ಯಾರು ನೇಯ್ದ ಮಹಾಜಾಲ ವಿಶ್ವವೆಂಬೀ ಅಚ್ಚರಿ ಅಲ್ಲಿ ಬಿಸಿಲು ಇಲ್ಲಿ ಮಳೆ ಇಂದ್ರಚಾಪದೀ...

ನಾನು, ನೀನು ಬಾಳಿನಲ್ಲಿ ಒಬ್ಬರನ್ನೊಬ್ಬರು ನಂಬದಿದ್ದರೆ ಇರುವುದೇನು ಹೊಂದಿಕೆ? ಹೆಜ್ಜೆ, ಹೆಜ್ಜೆಗೆ ಅನುಮಾನಿಸುತ್ತ ನಡೆದರೆ ಕಾಣ ಬಹುದೇನು ನೆಮ್ಮದಿ? ತಪ್ಪು, ಒಪ್ಪು ಸಹಜ ಅನುಸರಿಸಿ ಕೊಂಡು ಹೋಗದಿದ್ದರೆ ಆಗುವವೇನು ಊರ್ಜಿತ? ದಿನ, ದಿನಕೆ ಕಷ್ಟಗ...

ಯಾರಿಗೆ ಏನೆಲ್ಲ ಕೊಟ್ಟೆ ಯಾರಿಂದ ಏನೆಲ್ಲ ಪಡೆದೆ? ಪ್ರೀತಿ, ಸ್ನೇಹ, ಕರುಣೆ ಕೂಡಿದೆ. ಸೇಡನ್ನು ಕೇಡಿನಿಂದಲೂ ಸಂಚನ್ನು ವಂಚನೆಯಿಂದಲೂ ಗುಣಿಸಿದೆ ಪ್ರೇಮವನ್ನು ಕಾಮನೆಯಿಂದ ಭಾಗಿಸಿದೆ. ಆನಂದ-ಅನುಭೂತಿಯ ಮೂಲ? ತಡಕಾಡಿದೆ… ಲೆಕ್ಕ ಪಕ್ಕಾ ಹೌದ...

ನಿದ್ದೆ ಬರುವುದುಂಟೆ ದಿಂಬಿಲ್ಲದೇ ಮಲಗುವುದಕ್ಕಂತೂ ಇರಲೇ ಬೇಕು ದಿಂಬು ತಲೆಗೆ ಆರಾಮು ಮನಕೆ ಹಿತ ಹೆಂಡತಿ ಹಾಕಿದ ಹೂವೊಂದಿದ್ದರೆ ಗಮ್ಮತ್ತೆ ಬೇರೆ ಸುಖ ನಿದ್ರೆಯಲಿ ಕನಸಿನ ಮೇಲೆ ಕನಸುಗಳು ಶಯನೋತ್ಸವಕೆ ಬೇಕು ಮೋಹಕ ದಿಂಬು ಅಂಚಿನಲಿ ನಯನ ಮನೋಹರ ಕು...

ಹೊತ್ತು ಏರುವ ಮುನ್ನ ಮುತ್ತು ಸುರಿಯುವ ಮುನ್ನ ಅಸ್ತಂಗತನಾದನು ರವಿಯು. ಕತ್ತಲಾಯಿತು ಜೀವನ. ಬರಿದಾಯಿತು ಒಡಲು ಬತ್ತಿ ಹೋಯಿತು ಒಲವು ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು ಜೀವಿಸುವ ನಿಲುವು. ಯಾವ ಜನ್ಮದ ವೈರಿ ನೀನು ಈ ಜನ್ಮದಲಿ ಬಂದು ನನ್ನ ಮಡಿಲು ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...