ನಾ ಹೋಗಿ ಸೇರುವ
ಅಂಗಳದಲಿ ಅರಳಿ
ಆ ಮನೆಗೆ ಬೆಳಕ ಚೆಲ್ಲುವೆ

ನಾ ಬೆಳೆದು ಹಾಡಿ
ಕುಣಿದು ಉಲಿದು ನಲಿದು
ಆ ಮನೆಯ ಹೆಸರ ಉಳಿಸುವೆ

ಅವ್ವ ಅಪ್ಪನ ತೆಕ್ಕೆಯಲಿ
ಪಡೆದ ಪ್ರೀತಿಯನ್ನೆರೆಯುವೆ
ಆ ಮನೆಯ ಮರಗಿಡ ಬಳ್ಳಿಗಳಿಗೆ

ತರಗೆಲೆಯಾದ ನಾನು ಗೊಬ್ಬರವಾಗಿ
ಎನ್ನ ನಂಬಿದವಂಗೆ ಬೊಗಸೆ ತುಂಬಿ
ನೀಡುವೆ ನಾ ಮಲ್ಲಿಗೆಯ
*****