
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂದು ಬೇಲಿಸಾಲ ಪ್ರೀತಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ… ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ...
ಬೆಳಕು ಬೇಡವಾದರೆ ಇಲ್ಲ ಇಲ್ಲಿ ಏನೂ ಆಗಿಯೇ ಇಲ್ಲ ಆಗಿದ್ದು ಆಟವಷ್ಟೇ ಲೆಕ್ಕವಲ್ಲ ಜಮಾ ಆಗಿಲ್ಲ ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ ಎಲ್ಲಾ ಕೊಡವಿ ಎದ್ದು ಹೋಗಿಬಿಡಬಹುದು ಕತ್ತಲು ಬೇಡದ್ದೆಲ್ಲಾ ಒಪ್ಪಿ ತೋಳ್ತೆರೆದು ಅಪ್ಪಿ ತುಂಬಿ ತುಂಬಿ ಮೇಲೇರಿ ...
ಉರಿಯಿಲ್ಲ ಬಿಸಿಯಿಲ್ಲ ಉರಿಬಿಸಿಲ ಬೇಗೆ ಬವಣೆಗಳಿಲ್ಲ ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ ಅಸ್ತಕ್ಕೆ ರಕ್ತದೋಕುಳಿಯಿಲ್ಲ ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ ಠಳಾಯಿಸಲೆಂಬ ಠೇಂಕಾರದವನಲ್ಲ. ಏನಾದರೂ ಹೋದರು ಲೆಖ್ಖಿಸಿದೆ ಬೆಳಗು ...
ಗವ್ವನೆಯ ಅಮವಾಸೆಯ ಕಗ್ಗತ್ತಲು ಮಳೆಗಾಲದ ಕವದಿಹೊದ್ದು ಗಡದ್ದಾಗಿ ಮಲಗಿದ್ದು ಕನಸುಗಳೂ ಒಡೆಯದ ನಿಶ್ಶಬ್ದ ರಾತ್ರಿಗೆ ಸವಾಲು ಎನ್ನುವಂತೆಯೋ ಏನೋ ಕತ್ತಲಂಗಳಕೆ ಚಂದ್ರಲೇಪಿತ ಕಮಲೆ ಹುಟ್ಟಬೇಕೆ? ಎಳೆಗೂಸು ಎಸಳು ಇನ್ನೂ ಹೊಕ್ಕಳಬಳ್ಳಿ ಬಿಡಿಸಿಲ್ಲ ಕಣ್ಣ...
ದಟ್ಟ ನಗರದ ಈ ಸ್ಪಷ್ಟ ಏಕಾಂತದಲ್ಲಿ ಈ ಹೋಟೆಲಿನ ಈ ಮೂಲೆಯಲ್ಲಿ ಈ ಟೇಬಲಿನ ಈ ಎರಡು ಪಕ್ಕಗಳಲ್ಲಿ ಕೂತಿರುವ ನಾವು ಈಗ ಯೋಚಿಸುತ್ತಿರುವುದು ಏನು ಪ್ರಿಯೆ ? ಅದು ಜಾಫ್ನಾ ಅಲ್ಲ ನಾಳಿನ ಭಾರತದ ಸ್ವಪ್ನವೂ ಅಲ್ಲ ಅದು ಶ್ರೀಲಂಕಾ ಅಲ್ಲ ಅದು ಗೋಯಂಕಾ ಅಲ್ಲ...
ನಾವು ಮತ್ತೆ ಮತ್ತೆ ಕೆಲವು ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು ಅವು ನಾಯಿಗಳನ್ನು ಸಾಕಿಕೊಂಡಂತೆ ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ ನಾವು ಮತ್ತೆ ಮತ್ತೆ ಉತ್ತರಗಳನ್ನು ಬಿಟ್ಟುಕೊಡಲೇಬಾರದು ಅವು ಮೀನುಗಳಂತೆ ಪುಳಕ್ಕನೆ ಜಾರಿ ಕಣ್ಮರೆ ಸು...













