ಯೌವನದ ಕನಸುಗಳ,
ದೇಹ ಸಿರಿಯ ಹಸಿರು
ಕಾಮುಕರಿಗೆ ಮಾರಿ ಬೇಯುತಿಹ
ಭಾಗ್ಯಹೀನ ಮಾನಿನಿಯರಿಗೆ

ಬದುಕಿನ ಬೆಳಕಾಗಿ
ಬಾಳಕುಡಿಯ ನೆರಳಾಗಿ
ದೇವದಾಸಿ ವೇಶ್ಯೆ
ಹೃದಯಹೀನರ ಹಣೆಪಟ್ಟಿಯ
ಸಮಾಜದ ಮೌಡ್ಯ ಬಂಧನದ
ಆಚಾರ-ರೂಢಿಗಳ ಸಂಕೋಲೆಯ

ಬಿಡಿಸಿ ಅಪ್ಪುಗೆಯ ಬಾಹುಗಳನು
ಮುದ್ದಿಸಿ ಕಮರಿದ ಬದುಕನು
ಚಿಗುರೊಡಿಸಿ ಬೆಳೆಸುತ
ಬಾಳ ಬೆಳಗುವುದಕ ಜ್ಯೋತಿ
ಬಿ.ಎಲ್.ರೇ ಸ್ಫೂರ್ತಿ
ಮನುಕುಲದ ಅಬಲೆಯರನು
ಸಬಲೆಯರನ್ನಾಗಿಸುವ ಲಾಂಛನ
ಅಥಣಿಯ ವಿಮೋಚನ
ಇದು ಸ್ತ್ರೀಶಕ್ತಿಯ ಶಾಸನ

***