ತಾತ: (ಮೊಮ್ಮಗಳಿಗೆ) “ನಿನಗೆ ಆಗಲೇ ಮದುವೆ ಆಗುವ ವಯಸ್ಸು ಬಂತು. ಅಡುಗೆಮನೆ ಕೆಲಸದಲ್ಲಿ ನಿಮ್ಮ ಅಮ್ಮನಿಗೆ ಸಹಾಯಕಳಾಗಬೇಡವೆ. ನೀನು ಯಾವಾಗ ಕಲಿಯೋದು?”
ಮೊಮ್ಮಗಳು: “ಎಲ್ಲಾ ಕೆಲಸ ಅಮ್ಮನೇ ಮಾಡಿಬಿಡುತ್ತಾಳೆ. ನನಗೆ ಏನನ್ನೂ ಮಾಡಲು ಬಿಡೋಲ್ಲ. ತುಂಬಾ ಮುದ್ದು ಮಾಡುತ್ತಾಳೆ ನನ್ನನ್ನು.”
ತಾತ: “ಬರೀ ಮುದ್ದು ಮಾಡಿಸಿಕೊಂಡರೆ ಸಾಲದಮ್ಮಾ, ನೀನು ಮುದ್ದೆ ಮಾಡುವುದನ್ನೂ ಕಲಿಯಬೇಕು, ತಿಳಿಯಿತೇ.”
***