ರಾಮಾಯಣ

ಬರಲಿದ್ದಾನೆ ರಾಮ ಲಂಕೆಗೆ
ತಾಯೀ
ಬುಡವಿಲ್ಲ ನಿನ್ನ ಶಂಕೆಗೆ

ಹಾಗಾದರೆ ಹೇಳು ಸಖಿಯೇ ?
ನನ್ನ ಶ್ರೀರಾಮ ಅತ್ತ ಸುಖಿಯೇ ?

ವಾನರರು ಕಟ್ಟಿದ್ದಾರೆ ಸೇತುವೆ
ಇತ್ತ – ರಾಕ್ಷಸನ ಕಣ್ಣುಗಳು ಬಾತಿವೆ

ಹೆಜ್ಜೆ ಹೆಜ್ಜೆಗೂ ಗೂಢಚಾರ
ತರುತ್ತಿದ್ದಾನೆ ಸಮಾಚಾರ

ಹಾಗಾದರೆ ಹೇಳು ಸಖಿಯೇ
ನನ್ನ ಶ್ರೀರಾಮ ಅತ್ತ ಸುಖಿಯೇ ?

ಇನ್ನೇನು ನಡೆಯುತ್ತದೆ ಯುದ್ಧ
ಸೀತಾರಾಮನಿಗೇ ಜಯವು ಸಿದ್ಧ

ಅಯೋಧ್ಯಾ ರಾಜ್ಯಭಾರ
ರಾಮನಿಗೆ
ಇನ್ನಿಲ್ಲ ಬಹಳ ದೂರ

ಹಾಗಾದರೆ ಹೇಳು ಸಖಿಯೇ,
ಆಗಲಾದರೂ ನಾನು ಸುಖಿಯೇ ?

*
ನಾ ಹೇಳಲಾರೆ ಸೀತೆ
ತಾಯೀ
ನಾ ಹೇಳಲಾರೆ ಸೋತೆ
*****

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ
Next post ಮನಸ್ಸು

ಸಣ್ಣ ಕತೆ

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…