ಕವನ

ಸೂರ್ಯೋದಯ

ಮುಗಿಲ ಗೆರೆಯನ್ನು ಹಿಡಿದು ವಾರಿಧಿಯ ಹೊಂಬಸಿರನೊಡೆದು ಏರುವವು ಮುಗಿಲನ್ನು ಅರುಣನ ಕುದುರೆಗಳೇಳು: ಮಾಡುವವು ಹಗಲನು! ಮೋಡಗಳ ಕೊತ್ತಳದ ಕೋಟೆಯೊಂದನು ಕಟ್ಟಿ ಕಿರಣಗಳ ಬತ್ತಳಿಕೆಯನು ಬದಿಗಿರಿಸಿ ಬರುತಿಹನು ದಿವ್ಯಶರೀರಿ […]

ಸಂಜೆಗೆ

(ಒಂದು ಪ್ರಗಾಥ) ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ ತುಂಬಿ ಮೈಮನವನ್ನು ಬಂಧಿಸಿಹುದು ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು ಹರಣಗಳ ನಯನದಲಿ ಅರಳಿಸುತ […]

ನಗೆ

ಅಹಾ! ನಿನ್ನ ಮೀಸಲು ಮುರಿಯದ ನಗೆಯೆ ಸೂಸಲವಾಗಿಹ ನಗೆಯೆ! ಅಂತರಗಂಗೆಯರಿಯದ ಗಂಗೆ-ನಿನ್ನ ನಗೆ. ಅದೆ ನಿದ್ದೆಯಿಂದೆಚ್ಚತ್ತಾಗಿನ ಇನ್ನೂ ಅರಳದಿದ್ದ ನಿನ್ನ ನಗೆಯು ಏಳನೇಸರಿನ ಹೊಂಬಿಸಿಲ ಕಂದಿಸಿತು. ನೀನು […]

ಅಂದಿದ್ದ ರಸ್ತೆ ವಾಹನ ಸಾಲದಿರಲೇನು ಪರಿಸರ ಪಾಠವೋ ?

ದುಂದು ವೆಚ್ಚದೊಳುಂದುನ್ನತದ ರಸ್ತೆಯನು ಮಾಡಿದೊಡ ಲ್ಲೊಂದು ವೇಗ ತಡೆ ದಿಬ್ಬಗಳಿರ್‍ಪಂತೆ ಎಮ್ಮೊ ಳಿಂದಾ ಪರಿಸರದ ಪಾಠಗಳು ಭೋಗ ಬಾಳಿನೊಳು ಅಂತೆ ರಸ್ತೆಯವಗಢದ ಲೆಕ್ಕವತ್ತೆಡೆಗಿರಲಿ ದುಂದು ರಸ್ತೆಯೊಳಾದ ಪರಿಸರದಾಘಾತವೆಣಿಕೆಗೆ […]

ರಾಯಲ್ ಜಾರ್ಜು ಮುಳುಗಿಹೋದದ್ದು

ಅಳಿದರೇ ಹಾ ಧೀರರು! ಕಳೆದುಹೋದರೆ ಧೀರರು! ತಮ್ಮ ನಾಡಿನ ಕರೆಯೊಳೆಲ್ಲರು ಮುಳುಗಿ ಹೋದರು ತೆರೆಯೊಳು. ಎಂಟುನೂರ್ವರು ಧೀರರು, ಕಂಡ ಕೆಚ್ಚಿನ ಧೀರರು, ಒಂದು ಮಗ್ಗುಲಿಗೆಳೆದು ಬಗ್ಗಿಸಿ ಒರಗಿಸಿದ್ದರು […]

ಅಂತರಂಗ

ಎಷ್ಟು ಗ್ರಂಥಗಳ ಓದಿದರೇನು ಪುರಾಣ ವೇದ ಪಠಿಸದರೇನು ಅಂತರಂಗ ಶುದ್ಧವಾಗಿರದೆ ಬಾಳಿಗೆ ಇನ್ನೊಂದು ಅರ್ಥವೇನು ಕಾಮಕ್ರೋಧ ಮನದಿ ಅಳಿದಿಲ್ಲ ಹೆರವರು ನನ್ನವರೆಂಬದು ತಿಳಿದಿಲ್ಲ ನಿತ್ಯವೂ ಸ್ವಾರ್ಥಗಳಲಿ ತೇಲಿ […]

ತಾಳ ಮದ್ದಲೆ

ಆದಿನ ನಮ್ಮೂರ ಬಯಲಿನಲ್ಲಿ ನಡೆಯಲಿತ್ತು ತಾಳಮದ್ದಲೆ ಚಿಕ್ಕಮಕ್ಕಳಿಂದ ವೃದ್ಧರವರೆಗೂ ಎಲ್ಲರ ಗಮನ ಅತ್ತಲೆ ತಾಳ ಮದ್ದಲೆಯ ಬಗೆಗೆ ಊರವರ ಪಿಸುಮಾತು ನನಗೂ ಆಸೆ ಹುಟ್ಟಿತು ತಾಳ ಮದ್ದಲೆ […]

ಹೀಗಿರಲು

ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ ಪ್ರಾಕೃತದ ಸ್ಮೃತಿಯಂತೆ ಹೋದಲ್ಲಿ ಬರುವ ತಾಳೆ ಮರವೇ ದಾರಿಯುದ್ದಕ್ಕೂ ಜತೆಗಾರ ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ ಯಾಕಿಲ್ಲ ಪ್ರಮಾಣ ಹಾಗೂ […]

ಮಲೆದೇಗುಲ – ೩೯

ಜಡಜಡವನೆಳದಾಡಿ ಮನಮನವ ತಾಗಿಸುತ ಕರ್ಮದೊಡ್ಡಿನೊಳಿಹವ ನೂನೂಗುತಿರುವ ಜೀಯ ನಿಮ್ಮ ಹಸಾದರೆಂಬರುರವಟೆಯೊಳಗೆ ಸಾಗುವರಸರ ವಿಭವದುತ್ಸವದ ತೆರವ ಕಂಡು ಕುಶಲವ ಪಡದ ಕಂಗಳಿವು ಹೊಂಗುವುವು ತುರೀಯೋಪಾಂತ್ಯದೊಳು ವಿವರಿಸುತಲಿರುವ ಯಾತ್ರಿಕರ ಕಾಣುತ್ತ,-ಹಗುರಾದ […]