ನನ್ನ ಇನಿಯನ ನೆಲೆಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೆ ನೀನೇ? ಇರುವೆ ಹರಿಯುವ ಸದ್ದು ಮೊಗ್ಗು ತೆರೆಯುವ ಸದ್ದು ಮಂಜು ಸುರಿಯುವ ಸದ್ದು ಕೇಳುವವನು, ನನ್ನ ಮೊರೆಯನ್ನೇಕೆ ಕೇಳನವನು? ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಬಲ್ಲ ಗಾಳಿಯುಸಿರನೆ ಕಟ್...

ಈಗೀಗ ನನ್ನ ಡೈರಿಪುಟಗಳು ಅಲ್ಲಲ್ಲಿ ಮಸಿ ಉರುಳಿ ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ ಆದರೂ ಹೊರಡಲೇಬೇಕು ಸರಿಯಾದ ಸಮಯಕೆ ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ ೧ ಇಡೀ ರಾತ್ರಿಗಳೆಲ್ಲ ನನ್ನವೇ ಬಾಚಿಕೊಳ್ಳುವ ನಶೆಗಳಲಿ ತೇಲಿ ಪ್ರೇಮಿಗಳ ಸ್ವರ್ಗ ಸುಖ...

ಮೌನದಕ್ಷಯ ಪಾತ್ರೆಯೊಳಗೆ ಒಂದು ಅಗುಳು ಮಾತು ಕಾವು ಕೂತು ಚಟಪಟನೆ ಸಿಡಿದು ಸಾವಿರವಾಯ್ತು ಲಕ್ಷವಾಯ್ತು ಅಕ್ಷಯವಾಯ್ತು ಎಷ್ಟೊಂದು ಮಾತು ಕಣ್ಣುಬಿಟ್ಟಿದೆ ಮೊಳೆತು! ಮೌನ ಹೊದ್ದ ನಿರ್ಜೀವ ಕನಸುಗಳಿಗೆ ಮಾತು ತುಂಬುವ ಹೊತ್ತು ಕೆಂಪು, ಹಸಿರು, ಹಳದಿ, ನ...

ಬಂದೇವು ನಾವು ಬೆಳಗಾಗಿ ಬೆಳಕಿನಾ ಮಕ್ಕಳು ಸಾಗಿ ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು, ಬೆಳಕನ್ನೆ ಸುತ್ತು ಸುತ್ತಿಕೊಂಡು ಎದೆಯಾಗೆ ಕುದಿಯುವಾ ಕಡಲೂ, ಸಿಕ್ಕಿದ್ದ ಸಣ್ಣಿಸುವ ಒಡಲೂ ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ, ಗುಡ್ಡ ಕಿತ್ತೇವು ಸಿಡಿಲಿನ ಕೈಯಿ ತಲ...

ಬಲ್ಲೆ ನಿನ್ನ ಮನಸ ಸಖೀ ಬಲ್ಲೆ ನಿನ್ನ ಕನಸ ಇಲ್ಲಿದ್ದೂ ಎಲ್ಲೋ ಮನ ಏನೋ ಶಂಕೆ ಹರುಷ ಅವನ ಕಂಡ ಗಳಿಗೆಯೇ ಹರಣ ಹಾರಿ ನಿಂತೆಯೇ ಉರಿವ ದೀಪ ನಿನ್ನ ನೇತ್ರ ಬರೆಯುತಿಹವು ಕತೆಯನೇ ಹೋದಲ್ಲಿಗೆ ಒಯ್ಯುತಿರುವೆ ಅವನ ಸ್ಮರಣೆ ಬಿಂಬ ಗಾಳಿಗೆ ಮರ ತೂಗುತಿರುವೆ ...

ನಿನ್ನ ಮಾತುಗಳೆಲ್ಲ ಈಗ ನನ್ನವು ಬಾ ನನ್ನ ಕೊಡೆಯೊಳಗೆ, ಮಾತನಾಡಿಸುವೆ ಅಲ್ಲಿಯೇ ನಿಂತರೆ ಹೇಗೆ? ಬಾ ಹತ್ತಿರ ಇನ್ನೂ ಹತ್ತಿರ ನಿನ್ನ ಪ್ರಿಯಬಣ್ಣ ನನ್ನ ಕಿಮೊನೋದಲ್ಲಿ ಹರಡಿದೆ ನೋಡಿಲ್ಲಿ ಕೆಂಪು ಹಸಿರು ನೀಲಿ ಹಳದಿ ಮೇಲೆ ಮೆತ್ತನೆಯ ಹೊಳಪು ನಿನ್ನ ಉ...

ನಾವು ಕಲಾವಿದರು ಬೆಳಕಿನ ತೇರನೆಳೆಯುವವರು ರವಿ ಮೂಡುವ ಮುನ್ನ ಕಣ್ಣ ತೆರೆದು ನಾಗರಿಕ ಕಿರಣಗಳು ನೆಲ ಮುಟ್ಟುವ ಮುನ್ನವೇ ಎದ್ದವರು ತಂಗಾಳಿಗೆ ಮೈಯೊಡ್ಡಿದವರು ಅರುಣೋದಯದ ಉಷಾಕಾಂತಿಗೆ ಮೈಪುಳಕಗೊಂಡು ಆಹಾ ಓಹೋ ಓಂ…. ಎಂದು ಉದ್ಗಾರ ತೆಗೆದವರು ...

ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು ಸಹಿಸಲಾಗದಂಥ ಮಧುರ ನೋವು ಕೆರಳಿಹುದು? ಬೀದಿಜನರು ಕೈ ತೋರುವ ಮನೆಯ ತನಕ ಬಂದು ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು ಇಷ್ಟು ದಿನದ ಧ್ಯಾನಕೆ ಕಾಯ್ದುಕೊಂಡ ಮಾನಕೆ ಒಲಿದ ದೈವ ಒಳಗೆ ಬಂದು ಬೆಳಕ ತುಂಬಿತು...

ಎಲ್ಲೆಲ್ಲೂ ತೈಲುಬಾವಿಗಳ ಜಿಡ್ಡು ಘಾಟಿವಾಸನೆ ಮರುಭೂಮಿಗಳಿಗದೇನೋ ಜೀವನೋತ್ಸಾಹ ಸೆಳಕು ಸೆಳಕು ಬಿಸಿಲು ಹರಿದೋಡಲು ಹೆದ್ದಾರಿಗುಂಟ ಏರ್ ಕಂಡೀಶನ್‌ಗಳ ಘಮಲು…. ಕಣ್ತಪ್ಪಿ ಎಂದೋ ಬೀಳುವ ಧಾರಾಕಾರ ಮಳೆಯ ಸಾವಿರಕಾಲೋ ನೂರು ಗಾಲಿಗಳೊ ಉರುಳುರುಳಿ ...

ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ ಅವನಂತೆ ತಿರುಗಣಿಯ ಗೋಳಾಟವಾಡುವ ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ? ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು ಇಲ್ಲಿ ಕೆಳಗೆ ಹಸಿದ ಮಣ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....