ಎಲ್ಲಿಹೋದ ನಲ್ಲ? ಚಿತ್ತವ ಚೆಲ್ಲಿ ಹೋದನಲ್ಲ ಮೊಲ್ಲೆ ವನದಲಿ ಮೆಲ್ಲಗೆ ಗಾಳಿ ಸಿಳ್ಳು ಹಾಕಿತಲ್ಲ! ಹರಿಯುವ ಹೂಳಯಲ್ಲಿ – ಫಕ್ಕನೆ ಸುಳಿಯು ಮೂಡಿತಲ್ಲೆ ಜಲ ತುಂಬುವ ಮುಂಚೆ – ಕಟಿಯ ಕೊಡವೆ ಜಾರಿತಲ್ಲೆ! ನಡಿಗೆ ಏಕೊ ತಪ್ಪಿ – ಗೆ...

ಹೆದ್ದಾರಿ ಬದಿಯಲಿ ನನ್ನಪ್ಪ ಸಮಾಧಿಯಾಗಿ ಕೂತಿದ್ದಾನೆ ಮೇಲೆ ಹಸಿರಾಗಿ ಕಂಗೊಳಿಸುವ ಮಾವಿನ ಮರ ಒಳಹೊರಗೆಲ್ಲ ಚಿಲಿಪಿಲಿಸುವ ಪಕ್ಷಿ ಸಂಕುಲ ಪ್ರತಿಸಲದ ಬಸ್ ಪ್ರಯಾಣದಲಿ ಕಿಟಕಿಯಿಂದಲೇ ನೋಡುತ್ತೇನೆ ಮನದೊಳಗೆ ನಮಿಸುತ್ತೇನೆ ಕಣ್ಣುಗಳು ಜಿನುಗುತ್ತವೆ ಝ...

ಅಟ್ಟ ಏಣಿಗಳ ಅದೇ ಹಳೇ ಕಥೆ ಅಟ್ಟವೇರಲು ಏಣಿ ಏಣಿ ಕೊನೆಗೆ ಅಟ್ಟವಂತೆ! ಒಂದೊಂದು ಏಣಿ ಮೆಟ್ಟಿಲೇರಲೂ ಪ್ರಯಾಸ ದೀರ್ಘ ಪ್ರವಾಸ ಹಠ ಹಿಡಿದು ಉಪವಾಸ! ಎರಡನೇ ಮೆಟ್ಟಿಲೇರಿದರೆ ಮೊದಲ ಮೆಟ್ಟಿಲ ಮರೆವು ಏರುತ್ತಾ ಹೋದಂತೆ ಕೆಳಗಿನದೆಲ್ಲವೂ ಕೆಲಸಕ್ಕೆ ಬಾರದ...

ಎಲ್ಲಿ ಪ್ರಿಯಕರ ಹೇಳಿ ಯಾರಾದರೂ ಬಾರನೇತಕೆ ಬಳಿಗೆ ಕ್ಷಣವಾದರೂ? ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ, ಹಗಲು ಬೆರೆಯಿತು ಘೋರ ಇರುಳಿನಲ್ಲಿ ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ – ನೋಟ ಒಮ್ಮೆಯೂ ದೀನೆಯನು ಸೋಕಲಿಲ್ಲ ಏಕೆ ಮಾಡಿದ ಹೀಗೆ ನನ್ನ ಚೆ...

ಯಾಕೆ ತಾಯಿ ಮುಲುಗುತಿರುವಿ ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ ನೀನೇ ನುಂಗಿ ನೀರು ಕುಡಿದರೆ ಹೇಗೆ? ಸುನಾಮಿ ಜಲಪ್ರಳಯದಲಿ ಅವಿತು ದೈತ್ಯಾಕಾರದಲಿ ಬಂದು ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು ಸದ್ದಡಗಿಸುತಿರುವೆಯಲ್ಲ! ಇನ್ನೂ ಸಾಕಾಗಲ...

ಮತ್ತೆ ಮತ್ತೆ ಬದುಕಿಗೊಡ್ಡುವ ಜೀವನೋತ್ಸಾಹದ ಪ್ರತೀಕವಾಗಿ ನಿಂತ. ಮದನಿಕೆಯರ ಚಿತ್ರ. ಕಣ್‌ ತುಂಬಿ ಮನ ತುಂಬಿ ಇಲ್ಲೇ ಇದೇ ನಿಜವೆಂದು ಭ್ರಾಂತ. ಧುಮ್ಮಿಕ್ಕಿ ಹರಿವ ಹೇಮೆ ಒಮ್ಮೆ ಮೇರೆ ಮೀರಿ ತುಳುಕಿ ಮೈಭಾರ ತಡೆಯದೇ ಬಳುಕಿ ಸಡಗರದ ಪಯಣ ಗಮ್ಯದೆಡೆಗೆ...

ಹೋಗಲೇಬೇಕು ನಾನೀಗಲೇ ಬಾಡುತಿದೆ ಮಲ್ಲಿಗೆ ಆಗಲೇ ಸಮಯವೊ ಜಾರುತಿದೆ ಮೆಲ್ಲಗೆ-ನಿಲ್ಲದೆ ಹೋಗಲೇಬೇಕು ನಾನೀಗಲೇ ಕಿಡಿತಾಗಿ ಯೌವನದ ಧೂಪ ಹೊಗೆಯಾಡಿದೆ ಎಲ್ಲೆಲ್ಲು ಪರಿಮಳದ ಬಳ್ಳಿಗಳ ಚೆಲ್ಲಿದೆ. ಈ ಎಲ್ಲ ಸಂಭ್ರಮ ಆರಿಹೋಗುವ ಮುನ್ನ ಪರಿಮಳದ ನಾಡಿಗೇ ಧಾಳ...

ಬಣ್ಣ ಬಣ್ಣದ ಚಿಟ್ಟೆಗಳು ಎಷ್ಟೊಂದು ಮುಗ್ಧ ಹಾಯಾಗಿ ಹಾರಾಡುವುದೊಂದೆ ಗೊತ್ತು ಎಳೆಬಿಸಿಲಿಗೆ ಪಾಪ ! ಗೊತ್ತೇ ಇಲ್ಲ ಮುಂದೊಮ್ಮೆ ಗೌತಮನ ಶಾಪದೊಳಗೆ ಕಲ್ಲಾಗುತ್ತೇವೆಂದು. ನಡುಬಿಸಿಲಿನ ರಾಮನ ಕಾಲುಸ್ಪರ್ಶ !!! ತಮಗೇಕೆ ಇನ್ನು ಬಲಿಯಾಗತೊಡಗಿದವು ಕೆಲವ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....