ಬಣ್ಣ ಬಣ್ಣದ ಚಿಟ್ಟೆಗಳು
ಎಷ್ಟೊಂದು ಮುಗ್ಧ
ಹಾಯಾಗಿ ಹಾರಾಡುವುದೊಂದೆ
ಗೊತ್ತು ಎಳೆಬಿಸಿಲಿಗೆ
ಪಾಪ ! ಗೊತ್ತೇ ಇಲ್ಲ
ಮುಂದೊಮ್ಮೆ ಗೌತಮನ ಶಾಪದೊಳಗೆ
ಕಲ್ಲಾಗುತ್ತೇವೆಂದು.

ನಡುಬಿಸಿಲಿನ ರಾಮನ ಕಾಲುಸ್ಪರ್ಶ !!!
ತಮಗೇಕೆ ಇನ್ನು
ಬಲಿಯಾಗತೊಡಗಿದವು
ಕೆಲವು ತಮ್ಮ ತಾವೆ
ಬೆಂಕಿ ದೀಪಕೆ,
ಮರುಹುಟ್ಟು ಪಡೆದು ಇನ್ನುಳಿದವು
ಬೂದಿ ಚದುರಿಸಿ ಗರಿಗೆದರಿ ಹಾರಿದವು
ಫಿನಿಕ್ಸ್‌ಗಳಾಗಿ.
*****

ಪುಸ್ತಕ: ಇರುವಿಕೆ