ಸಂಗ್ಯಾ ಪರಿವಾರ ಭಂದಳ ವಿಹಿಂಪಗಳು ಬದುಕಿಲ್ಲದ ಬಡಗಿ ಮಗನ ತಿಕ ಕೆತ್ತಿದ ಅಂಬೋ ಗಾದೆನೇ ವೇದ ಮಾಡ್ಕೊಂಡು ವೇದಗಳ್ನ ನಾಯಿ ಮಾಡ್ಕೊಂಡ ದತ್ತಾತ್ರೇಯನ್ನ ಟಾರ್ಗೆಟ್ ಮಾಡ್ಕೊಂಡು ಗದ್ದಲ ಎಬ್ಬಿಸ್ಯಾವೆ. ದೇಸದಾಗೆ ಸಾಂತಿ ಸಮಾದಾನ ಇರಕೂಡ್ದು ಅಧಿಕಾರ್ದಾಗೆ ಇರೋರು ಟೆನ್ಸನ್ ಮಾಡ್ಕೊಂಡು ನೆಗೆದು ಬಿದ್ದು ಸಾಯ್ಲಿ ಅಂತ ಡೈಲಿ ಥಿಂಕ್ ಮಾಡೋ ಇವರು ಮನೆಗೂ ಮಾರಿ ಪರರಿಗೆ ಹೆಮ್ಮಾರಿ. ಅಯೋಧ್ಯನಾಗೆ ಬಾಬ್ರಿ ಮಸೀದಿ ಉಲ್ಡಿಸಿದರು. ಅಷ್ಟಕ್ಕೆ ಬಿಡ್ದೆ ಅದೇ ಪ್ಲೇಸ್ನಾಗೆ ರಾಮ ಮಂದ್ರ ಕಟ್ತೀವಿ ಅಂತ ರಗ್ಗಡ ಕಾಸು ಎತ್ತಿದರು. ಇಟ್ಟಿಗಿ ಸಪ್ಲೈ ಮಾಡಿದರು ಅಧಿಕಾರಕ್ಕೂ ಬಂದರು. ಆಮ್ಯಾಗೆ ಟಾರ್ಗೆಟ್ ಅಗಿದ್ದ ರಾಮನ್ನೂ ಫರ್‌ಗೆಟ್ಟು. ಮಂದಿರಾನೂ ನೆಗ್ಲೆಕ್ಟ್. ಅಧಿಕಾರದಿಂದ ಪಲ್ಟಿ ಹೊಡೆಯತ್ಲೂ ಎಗೇನ್ ರಾಮ ಅಯೋದ್ಯೆ ಎಲ್ಲಾ ಈ ಅಯೋಗ್ಯರಿಗೆ ನೆಪ್ಪಾತು. ಆದರೆ ಬಿಜೆಪಿ ಹವಾಮಾನವೇ ಸ್ಟ್ರಾಂಗ್ ಇಲ್ಲ ಕಣ್ರಿ.

ಉತ್ತರ ಪ್ರದೇಶ ಉತ್ತರಾಂಚಲದ ವಿಧಾನಸಭಾ ಚುನಾವಣೆ ಬ್ಯಾರೆ ಹತ್ತಿರದಾಗೈತೆ. ಲೋಕಜನ ಶಕ್ತಿಧಾತೆ ಉಮಾಬಾತಿ ರಾಂಗ್ ಆಗಿ ಸಂಗ್ಯಾಗಳಿಂದ ದೂರವಾಗಿ ದುರ್ಗಿ ಆಗವ್ಳೆ. ಪ್ರಮೋದ್ ಮಹಾಜನ್ ಮಣ್ಣು ಸೇರ್ಕ್ಕಂಡವ್ನೆ. ವಾಜಪೇಯಿ ಅವನ ಕ್ಯೂನಾಗವರೆ. ಅಡ್ವಾಣಿ, ಮನೋಹರ ಜೋಷಿ ಎಪ್ಪತ್ತು ದಾಟಿವೆ. ರಾಜನಾಥಸಿಂಗ್ ಗೆ ಪಕ್ಷದಾಗೆ ಯಾರೂ ಪಕ್ಷದಾಗೂ ಇಲ್ಲ ಇಮೇಜ್ ಬ್ಯಾಕೂ ಇಲ್ಲ. ವೆಂಕಯ್ಯನೆಂಬ ಆಂಧ್ರದೋನ ಕಿಮ್ಮತ್ತೇನಾದ್ರೂ ಕರ್ನಾಟಕದಾಗಟೆಯಾ. ಇಂಥ ಪರಿಸ್ಥಿತಿನಾಗೆ ಡೆಲ್ಲಿಯಾಗೆ ಜಂತರ್ ಮಂತರ್ ನೆಡೆಸೋಕೆ ಪಾರ್ಟಿನೇ ವೀಕ್ ಆಗೇತಿ.

ಆದರೆ ಕರ್ನಾಟಕದಾಗೆ ಬಿಜಪಿ ಬಚ್ಚೆಗಳೆಲ್ಲಾ ಗೆದ್ದು ಸ್ಯಾಸಕರಾಗಿ ಮಿನೀಟ್ರು ಆಗಿ ಪವರ್ ಸುಖ ಉಣ್ತಾ ಅವೆ. ಪವರ್ ಅಂಡ್ ಸೀಟ್ ಸಿಗ್ದೆ ಇರೋ ಅತೃಪ್ತ ಆತ್ಮಗಳೆಲ್ಲಾ ಚಿಕ್ಕಮಗಳೂನಾಗೆ ಟೆಂಟ್ ಹಾಕ್ಯಾವೆ. ಹೆಂಗೂ ಇಯರ್ಲಿ ಒನ್ಸ್ ದತ್ತಮಾಲ ಅಭಿಯಾನ, ಸೋಭಾಯಾತ್ರೆ ಅಂತ ಗದ್ದಲ ಸುರುಹಚ್ಕಂಡ್ರೆ ಪುಗಸಟ್ಟೆ ಪಬ್ಲಿಸಿಟಿ. ಹಿಂದೂಗಳ ಪ್ರೀತಿಯ ಅನಿಂಗು ಯಲಕ್ಷನ್ದಾಗೆ ಮೆಜಾರ್ಟಿನಾಗೆ ವಿನ್ನಿಂಗು. ಆಮೇಲೆ ಫುಲಟೇಮ್ ನಮ್ದೆ ಪವರಿಂಗು ಅಂತೆಲ್ಲ ಡ್ರೀಮ್ ಕಂಡ ಬಿಜೆಪಿ ಬಚ್ಚೆಗಳೆಲ್ಲಾ ಅರ್ಥಾತ್ ಸಂಗ್ಯಪರಿವಾರ, ಭಂದಳ, ವಿಹಿಂಪಗಳಿಗೆ ಹುಟ್ಟಿದ ಕೂಸುಗಳಾರ ಹೆಂಗೆ ಸುಮಗಿದ್ದಾವು ? ಚಿಕ್ಕಮಗಳೂನೆ ಅಯೋಧ್ಯೆ ಮಾಡಿಬುಡ್ತೀನಿ ಅಂತ ಕುಂಕುಮಧಾರಿ ಗಡ್ಡದ ಬಾಲಕ ರವಿ ಸೀಟಿ ಹೊಡಿಲಿಕತ್ತಾನೆ. ಇದರ ಎಫೆಕ್ಟ್ ನಿಂದಾಗಿ ಯಡ್ಡಿ ಎಂಬೋ ಡಿಸಿ‌ಎಂ ಗಂಟಲ್ದಾಗೆ ಮುಳ್ಳು ಸಿಕ್ಕಂಡಂಗೆ ಆಗೇತ್ರಿ. ಕುಮ್ಮಿನೂ ಯಡ್ಡಿನೂ ಅಗ್ದಿ ಜೋಡೆತ್ತು ಗಳಿದ್ದಂಗೆ ಅಂತ ಬಿಜೆಪಿ ನೋರು ಕುಂಡಿ ಚಿವುಟಿದ್ರೆ ಅದು ಹಂಗಲ್ರಿ ನಮ್ಮ ಕುಮ್ಮಿ ಹೋರಿ, ಯಡ್ಡಿ ಆಕಳಿದ್ದಂಗೆ. ಸವಾರಿ ಮಾಡೋನು ನಮ್ಮೋನೆ ಅಂತವೆ ಜೆಡಿ‌ಎಸ್ ನೋವು.

ಅದಕ್ಕೆ ಸರಿಯಾಗೇ ಇನ್ಸಿಡೆಂಟ್ಸು ನೆಡಿಲಿಕತ್ತವೆ. ಯಡ್ಡಿ ಅಕ್ಕನ್ನ ಹುಡುಕ್ಕೊಂಡು ಅಮೇರಿಕಾಕ್ಕೆ ಹಾರಿದಾಗ್ಲೆ ಕುಮ್ಮಿ ಬೆಳಗಾವಿ ಅಧಿವೇಸ್ನಕ್ಕೆ ಸ್ಕೆಚ್ ಹಾಕ್ದ. ತಿರುಗಿ ಬಂದ ಯಡ್ಡಿಗೆ ಗಾಬರಿಯಾಗೋತು. ವಾಟ್ ನಾನ್‌ಸೆನ್ಸ್‌ ಈಸ್ ದಿಸ್ ? ವಿಥ್ ಔಟ್ ಮೈ ನಾಲೆಡ್ಜ್ ಹೆಂಗ್ರಿ ಡಿಸಿಶನ್ ತಕ್ಕಂಡ್ರಿ ಅಂತ ಗುರಾಯಿಸವ್ನೆ. ಶ್ಯಾನೆ ಅರ್ಜೆಂಟಿತ್ತು ಬ್ರದರ್. ನಿಮ, ಈಶ್ವರಿ ಶೆಟ್ಟಿತಾವ ನಾನ್ ಟಾಕ್ ಮಾಡೇ ಟೇಕ್ ಆಫ್ ಮಾಡಿರೋದು ಅಂದು ಬಿಟ್ಟ. ಸಿ‌ಎಂ. ಅಧಿವೇಸ್ನಾದಾಗೆ ಶೆಟ್ಟರ್ ಈಶ್ವರಿ, ಟಿಪ್ಪು ಸೆಟ್ಟಿ, ಅಸೋಕ ಎಲ್ಲಾ ಕುಮ್ಮಿ ಹಿಂದುಗಡಾನೇ ರೌಂಡ್ ಹೊಡಿದಾಗ ಯಡ್ಡಿ ಅಬ್ಬೆಪಾರಿ ಹಂಗಾಗಿ ಕಾಂಗೈನೋರು ಧರಣಿಗೆ ಬಿದ್ದು ಮಕ್ಕಂಡ ಜಾಗದಾಗೆ ಯಡ್ಡಿನೂ ಮಕ್ಕಂಡು ನೈಟೆಲ್ಲಾ ನಿಟ್ಟುಸಿರು ಬಿಟ್ಟದ್ದೇ ಆತು. ಅಲ್ ಕಣ್ರಿ, ನನ್ನ ಡಿಸಿ‌ಎಂ ಮಾಡಿ, ನನ್ನ ಖಾತೆನಾಗೇ ಗಂಟು ಹೊಡಿತಾನೆ. ಟ್ರಾನ್ಸ್‌ಫರ್ ದಂಧೆ ಮಾಡ್ತಾನೆ. ಪವನಾಗೂ ಮೂತಿ ತೂರಿಸ್ತಾನೆ. ಹಿಂಗಾದ್ರೆ ಚಲೋ ಅಲ್ಲ ಅಂತ ಚಡ್ಡಿಯ ಯಡ್ಡಿ ಆಪ್ತರ ತಾವ ತನ್ನ ಗೋಳಾಟದ ಮೆಸೇಜ್ ಕಳಿಸಿದ್ರೆ ಕುಮ್ಮಿ ಕ್ಯಾರೆ ಅನ್ಲಿಲ್ಲ! ಅದೇನು ಡಿಸಿ‌ಎಂ ಅಂಬೋದು ಪದವಿನಾ? ಅದು ಯಕಸ್ಚಿತ್ ಗೌರವ ಅಷ್ಟೇ ಬ್ರದರ್ ….ಡಿಗನಿಫೈಡ್ ಡೆಸಿಗ್ನೇಶನ್ ವಿಥ್ ನೋ ಪವರ್. ಸಂವಿಧಾನದಾಗೆ ಮಂತ್ರಿಗಿರೋ ಪವರ್‌ನಷ್ಟೇ ಈವಯ್ಯಂಗಿರೋದು, ಫುಲ್ ಪವರ್ ಏನಿದ್ರೂ ನಂದು ನಮ್ಮ ಫಾದರ್ದು ಅಂದುಬಿಡಬೇಕೆ! ಈ ಮಾತು ಕೇಳಿ ಯಾರಿಗೂ ಕಾಣದಹಂಗೆ ಟಾಯ್ಲೆಟ್ನಾಗ ಕುಂತು ಯಡ್ಡಿ ಅತ್ತಿದ್ದೂ ಅತ್ತಿದ್ದೇ.

ಇಂಥ ವ್ಯಾಳೆದಾಗ ತಲೆ ಕೆಟ್ಟ ಸಿಟಿ ರವಿ, ಸುನಿಲ್ ಕುಮಾರ, ಜೀವರಾಜ, ಸೋಭಾ ಕರಂದ್ಲಾಜೆನ ಬೆನ್ನಿಗಿಟ್ಕಂಡು ಸಾವಿರಾರು ಮಂದಿ ತೆಲಿಕೆಡಿಸಿ ದತ್ತಮಾಲೆ ಸಂಕೀರ್ತನಾ ಯಾತ್ರೆ ಸುರು ಹಚ್ಕಂಡವ್ನೆ. ಮೊದ್ಲು ಕೂಗಾಡ್ತಿದ್ದ ಕೂಗುಮಾರಿ ಯಡೂರಿ ಈಗ ಪವನಾಗವ್ನೆ . ಸರ್ಕಾರ ಬಿದ್ದೋದ್ರೆ ಮಂತ್ರಿಗಳೆಲ್ಲಾ ಕಂತ್ರಿಗಳಾಗೋಯ್ತಾರೆ. ಆದರೆ ಸ್ಯಾಸಕನಾಗಿರೋ ಸಿಟಿ ರವಿ ಪದವಿ ಹೋದ್ರೆ ನನ್ನ ಷಂಟ ಹೋತು. ಮತ್ತೆ ಗೆದ್ದು ಬರಲಿಕ್ಕೇ ಬೇಕಂದ್ರೆ ಸಾಬನ ಗೋಳುಗುಟ್ಟಿಸಿ ಹಿಂದೂಗುಳ ದಿಲ್ ಖುಷ್ ಮಾಡಬೇಕು. ಹೆಂಗೂ ನನ್ನ ಮಂತ್ರಿ ಮಾಡದ ಕಂತ್ರಿಗಳ ಮ್ಯಾಗೆ ದತ್ತನ್ನ ಛೂ ಬಿಡ್ತೀನಿ ಅಂತ ಡಿಸೈಡ್ ಮಾಡಿ ಡಿಸೆಂಬನಾಗೆ ಆಗೋ ಗದ್ದಲಕ್ಕೆ ಈಗ್ಲೆ ಫೌಂಡೇಶನ್ ಹಾಕ್ಲಿಕತ್ತಾನೆ. ಇಡೀ ಚಿಕ್ಕಮಗಳೂನ ಬರಿ ಕರ್ಪೂರ್ದಾಗೆ ಸುಟ್ಟು ಬೂದಿ ಮಾಡ್ತೀನಿ ಅಂತ ಸೆಡ್ಡು ಹೊಡಿತಾ ಅವ್ನೆ.

ಹೇತ್ಲಾಂಡಿ ಸರ್ಕಾರ ತನ್ನ ಪವನೆಲ್ಲಾ ಜಿಲ್ಲಾಡಳಿತಕ್ಕೆ ಒಪ್ಪಿಸಿ ಹೈಕೋರ್ಟ್ ಕಾನೂನು ಪ್ರಕಾರ ನೆಡ್ಕಳಿ. ನಂದೂ ಇದೇ ಅಭಿಪ್ರಾಯ ನಮ್ಮ ಫಾದರ್ದೂ ಇದೆ ಅಂದವ್ನೆ ಕುಮ್ಮಿ. ನಾವು ಚಿಕ್ಕಮಗಳೂರಿಗೆ ಹೋಗಿ ಸಿಕ್ಕಳದೇ ಬ್ಯಾಡ ಬ್ರದರ್ಸ್. ಸೋಭಾಯಾತ್ರೆ ನೆಡೆದ್ರೆ ಡಿಸಿ, ಎಸ್ಸಿನೇ ರೆಸ್ಪಾನ್ಸಿಬಲ್ಲು. ಸ್ಯವ ಯಾತ್ರೆ ಆತೋ ಅವರೇ ರೆಸ್ಪಾನ್ಸಿಬಲ್ಲು. ನಾಕು ದಿನ ಅವನ ಸಸ್ಪೆಂಡ್ನಾಗಿಕ್ಕೋಣ. ಆಮ್ಯಾಲೆ ಆ ಸಿಟಿ ರವಿ ಅವನ ಗ್ಯಾಂಗ್ನ ಕಣ್ಣುವರೆಸಿ ಸಿಂಬ್ಳ ಸೀಟಿದ್ರಾತು ಅಂತ ಯಡ್ಡಿ ಶಟ್ಟರ್, ಟಿಪ್ಪು ಸೆಟ್ಟಿ, ಈಶ್ವರಿ ತಾವ ಡೀಲು ಕುದುರಿಸವ್ನೆ. ಆದರೂ ಸಿಟಿ ರವಿ ಗ್ಯಾಂಗು ದತ್ತ ಮಾಲೆ ಹಾಕ್ಕಂಡು ಗುಡ್ಡ ಏರಿ ಭಜನೆ ಮಾಡಿ ಒಂದು ಮಂಕ್ರಿ ಕರ್ಪೂರ ಸುಟ್ಟು ಇದೆ ಹೋಮ ಅಂತ ಎಗರ್ಲಾಡಿ, ಅಧ್ಯಕ್ಷ ಸದಾ ಹಲ್ಲು ಗಿಂಜುತ್ತಾ ಆನಂದವಾಗಿರೋ ಗೋಡನ ಸಮೇತ ಅರೆಸ್ಟ್ ಆಗವ್ನೆ.

ಜಿಲ್ಲಾಡಳಿತಕ್ಕೆ ಪವರ್ ಕೊಡೋದಾದ್ರೆ ಸರ್ಕಾರ ಎದಕ್ರಿ? ಈಗೋರಿ ಆ ಗೋಡ ಅವ್ನ ಮಗ ಇಬ್ಬರೂ ಬಿಜೆಪಿನೋಗೆ ಸರೆಂಡರ್ ಆಗಿಬಿಟ್ಟಾರ್ರಿ ಅಂತ ಬಾಯಿ ಬಡ್ಕಂತಾನೆ ದಬರಿ ಧರ್ಮು. ಇವದು ಸೋಭಾಯಾತ್ರೆಗಿಂತ ಕಾಸಿ ಯಾತ್ರೆಗೆ ಹೋಗ್ಲಿ ಅಂತ ಬೈಸಿಕಲ್ ಬಂಗಾರಿ ಉಗಿಲಿಕತ್ತಾನ್ರಿ. ಮಂಗಳೂನಾಗೆ ಬೆಂಕಿ ಇಕ್ಕಿದಾತು. ನಮ್ಮ ನೆಕ್ಸ್ಟ್ ಕ್ಯಾಂಪು ಚಿಕ್ಕಮಗಳೂರೇ ಅಂತ ಬಿಜೆಪಿ ಚಡ್ಡಿಗಳು ಬಾಲ್ ಡ್ಯಾನ್ಸ್ ಮಾಡ್ಲಿಕತ್ತಾವಂತ್ರಿ. ದತ್ತನ ನೆಪ ಮಾಡ್ಕೊಂಡು ಬಂದ, ಮುತಾಲಿಕನೂ ಅರೆಸ್ಟ್ ಆಗವ್ನೆ.

ಈ ಬಡ್ಡೆತ್ತೋವು ಸೋಭಾಯಾತ್ರೆ ಮಾಡಿದ್ರೆ ನಾವು ಪಾದಯಾತ್ರೆ ಮಾಡ್ತೀವಿ ಅಂತ ಕೋಮು ಸೌಹಾರ್ದ ವೇದಿಕೆನೋರು ಪಟ್ಟು ಹಿಡಿದವರೆ. ಬುದ್ಧಿಜೀವಿಗಳು ಸುದ್ದಿ ಜೀವಿಗಳು ಹೊಸ ಜುಬ್ಬ ಪೈಜಾಮ ಹೊಲಿಯಾಕೆ ಹಾಕವೆ. ಅಯ್ಯೋ ಡಿಸೆಂಬರ್ ಇನ್ನೂ ಬಾಳ ದೂರೈತೆ. ಡಿಸೆಂಬರ್ ಬಂದಾಗ ನೋಡಿಕೊಂಡ್ರಾತು ಅಂತ ಗಡದ್ದಾಗಿ ಬಕ್ರಿ ಉಂಡು ಢರ್ರನೆ ತೇಗಿ ಕೆಟ್ಟದಾಗಿ ಆಕಳಿಸಿದ ಕೊಮಾರನೆಂಬ ಆಸಾಮಿ ನವಲಗುಂದದ ನಾವಳ್ಳಿನಾಗಿರೋ ಅಲ್ಲಾಬಿ ನದಾಫ್ ಮನೆಯಾಗೆ ಮಕ್ಕಂಡು ಕೋಮು ಸೌಹಾರ್ದತೆ ಅಂದ್ರೆ ಇದೆ ಬ್ರದರ್ ಅಂತ ಕನವರಸ್ಲಿಕತ್ತಾನಂತ್ರಿ.
*****
( ದಿ. ೨೬-೧೦-೨೦೦೬)