
ತರತರದಡುಗೆ ಮಾಡುವ ವರಶಕ್ತಿಯೆಮಗಿರಲು ಬರವೆಂದೇನು ಬಡ ಬಡಿಸುವುದೋ ಬೋರಿನಾಳದಿ ನೀರೆತ್ತಿ ಸೂರಪ್ಪ ಮರಗಿಡವನಳಿಸುವುದೋ? ಊರಿಗೂರೇ ಮಧುಮೇಹವಪ್ಪಂತಾ ಕಬ್ಬನಿಕ್ಕುವುದೋ? ಬರವೆನದೆಲ್ಲೆಡೆ ಬೆಳೆವ ಹಲಸಿನಡುಗೆಲ್ಲ ರೋಗಕೆ ಮದ್ದೋ- ವಿಜ್ಞಾನೇಶ್ವರಾ ****...
ಗೋವಿಂದ ರಾಯಾ ಲಂಬೋನೂ ಹೊತ್ತರೇಳು ಮೊದಲೇ ಲೆಳುವಾನೋ ಹೊತ್ತೇಳೂ ಮುನ್ನೇ ಲೆದ್ದೇನೋ ಕಯ್ಯು ಕಾಲು ಮೋರೆ ತೊಳೆದೇಲೋ ಬಣ್ಣದೊಂದು ಚದರದ ಮೇನೇಲೋ ಹೊನ್ನಿನ ಒಂದು ರಾಚೀ ಹೊಯ್ದಾನೋ ಹೊನ್ನಿಗೊಂದು ರಾಶೀ ಹೊಯ್ದೊಲೇ ಚಿನ್ನದ ಕೊಳಗ ತರವಾನೋ ಬೆಳ್ಳಿಯ ಶಿದ್...
ಅದೊ ನೋಡು ಮಧ್ಯಾಹ್ನ ಸರಿದು ಸಂಜೆ ಗತ್ತಲು ಸಾಗಿ ಬರುತ್ತಿದೆ ನಿನ್ನೂರಿಗೆ ಹೋಗುವ ಬದಲು ಏನು ಜಾತ್ರೆ ನಿನ್ನೀ ಮನ ಮಾಡಿದೆ ನೀನೋರ್ವನೆ ಅಲ್ಲಿ ಸಾಗಬೇಕು ನಿನಗ್ಯಾರು ಅಲ್ಲಿ ಜೊತೆಗಿಲ್ಲ ನಿನ್ನ ಕರ್ಮಗಳೇ ಸಂಗಾತಿ ಮತ್ತೇನು ಹಿಂದೆ ಬರುವುದಿಲ್ಲ ಎ...
ಕೇಳು ರಂಜಾನ್ ಹಬ್ಬದಂತ್ಯದೊಳದೊಂದು ದಿನ, ಶುಭ ಚಂದ್ರನಿನ್ನು ಮುದಿಸದಿರೆ, ಸಂಜೆಯಲಿ ನಾನೋರ್ವ ಕುಂಬಾರನಂಗಡಿಯ ಬಳಿ ನಿಂತು ಮಣ್ಣ ಮಾಟಗಳ ಸಾಲ್ಗಳ ನೋಡುತಿರ್ದೆಂ. *****...
ಚಂಚಲ ಚಿತ್ತದ ಚುಂ ಚುಂ ಅಳಿಲೇ ಮುಂಜಾವದ ಮೈ ಜುಂ ಜುಂ ಅಳಿಲೆ ಚುಮು ಚುಮು ಬೆಳಕಿಗೆ ಹೊರಟಿಹೆಯಲ್ಲೆ ಆ ಕಡೆ ನೋಡುವಿ ಈ ಕಡೆ ನೋಡುವಿ ಏನೋ ಮರೆತಂತೆಲ್ಲಿ ನೋಡುವಿ ಕಿವಿ ನಿಮಿರಿಸಿ ಮೈ ನವಿರೇಳಿಸಿ ಯಾವಾಗಲು ನೀ ಚುರುಕಾಗಿರುವಿ ಹಿಂಗಾದರ ನೀ ಯಾವಾಗ ಮ...
ಇಸ್ಲಾಂ ಎಂದರೇನು? ಆತಂಕವಾದದೊಂದಿಗೆ ಜೋಡಿಸದಿರಿ ನನ್ನ ಇಸ್ಲಾಂನ್ನು ಅದರ ಬೇರುಗಳು ಪ್ರೀತಿಯಲ್ಲಿವೆ ಅದರ ಸೆರಗಿನಲ್ಲಿ ಗುಲಾಬಿಗಳು ಅರಳಿವೆ ನೆರೆಯವನನ್ನು ಜಾತಿಯಲಿ ಹುಡುಕುವವನು ಇವನಾದರೆ ನೆರೆಯವನು ಹಸಿದಿರುವಾಗ ಉಣ್ಣುವುದು “ಹರಾಮ್R...
ಹತೋ ವಾ ಪ್ತವ್ಸ್ಯಸಿ ಸ್ವರ್ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ | ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭) ಯಾರಂಬರು ಮುಗಿದುವೆಂದು ಬವರಂ? ನಂಬದಿರದು ಮರುಳರ ಮಾತೆ: ನರನೆನ್ನವರಂ ನರನನ್ನೆವರಂ ರಣಾಂಗಣವೆ ಶಾಂತಿಯ ಮಾತೆ! ಶ...
ಕನ್ನಡ ಬಾವುಟ ಮೇಲಕೆ ಹಾರಿದೆ ನೀಲಿ ಅಂಬರದಾ ಕಡೆಗೆ ಶಾಂತಿ ಸತ್ಯತೆ ಬೀಗುತ ಸಾರಿದೆ ವಿಶ್ವದ ಎಂಟು ದಿಕ್ಕಿನೆಡೆ ಹಳದಿ ಸಿಂಧೂರಮ ಮಂಗಳ ವರ್ಣವ ಬೆಳ್ಳಿಯ ಮುಗಿಲಲಿ ಹರಡುತಿದೆ ಒಂದೇ ಬಳ್ಳಿಯ ಬಗೆಬಗೆ ಹೂಗಳ ಅನಂತ ಸೃಷ್ಟಿಗೆ ಎರೆಯುತಿದೆ ವರ್ಷವ ಮರಳಿಸ...
ಕರುನಾಡು ತಾಯ್ನಾಡು ಕನ್ನಡದಾ ಸಿರಿನಾಡು ಕನ್ನಡವು ಎಂದೆನಿತು ನುಡಿ ಮನವೆ|| ಶಿಲ್ಪ ಸಿಂಧೂರ ಕಲ್ಪಧಾರೆಯಲ್ಲಿ ಪವಡಿಸುತಿದೆ ನಿನ್ನಲ್ಲಿ ಅನಂತಬಿಂಬ ಸುಯ್ ಗುಟ್ಟುವ ತಂಗಾಳಿಯಲಿ ಗಾನ ಝೇಂಕಾರ ಕೇಳ ಬರುತಿದೆ ನಿತ್ಯ ಸತ್ಯ|| ಗಗನ ಮೌನ ಸದೃಶ್ಯಧಾರೆಯಲ್...













