ಕರುನಾಡು ತಾಯ್ನಾಡು
ಕನ್ನಡದಾ ಸಿರಿನಾಡು
ಕನ್ನಡವು ಎಂದೆನಿತು ನುಡಿ ಮನವೆ||
ಶಿಲ್ಪ ಸಿಂಧೂರ ಕಲ್ಪಧಾರೆಯಲ್ಲಿ
ಪವಡಿಸುತಿದೆ ನಿನ್ನಲ್ಲಿ ಅನಂತಬಿಂಬ
ಸುಯ್ ಗುಟ್ಟುವ ತಂಗಾಳಿಯಲಿ
ಗಾನ ಝೇಂಕಾರ ಕೇಳ ಬರುತಿದೆ ನಿತ್ಯ ಸತ್ಯ||
ಗಗನ ಮೌನ ಸದೃಶ್ಯಧಾರೆಯಲ್ಲಿ
ಕಾರ್ಮೋಡಗಳ ಸೆರೆಯಲ್ಲಿ
ಸಿಡಿಲೊಂದು ಬಡಿದೆಬ್ಬಸಿ ಪೇಳುತಿದೆ ನಿತ್ಯಸತ್ಯ||
ಜೋಗದ ಸಿರಿಯಾಗಿ ಐಸಿರಿಯ ತೋರಿ
ಜಲಪಾತದ ಅಲೆಯಾಗಿ ಕಲರವ ದನಿಸೇರಿ
ಮಿಂಚು ಹೊಳಪಾಗಿ ತಾಯ್‌ನಾಡಸಿರಿನುಡಿಯುತಿದೆ ನಿತ್ಯಸತ್ಯ||
ಶಶಿಯು ಬಂದಾಗ ಉಷೆಯ ಕಂಡಾಗ
ಹೂಗಳರಳಿದವು ಆಗ ಚೈತ್ರ ಬಂತೊಂದು
ವರ್ಷದಾಗ ನಗುನಗುತಲಿ ಹಾಡೊಂದಹಾಡಿ
ನಲಿಯಿತು ಬೃ೦ಗ ಕನ್ನಡವೇ ನಿತ್ಯಸತ್ಯ||
ಅಮ್ಮಾ ಎಂದೆನುತಲಿ ನುಡಿಯುತ
ಬಂತೊಂದು ಶಿಶುವು ಹಾಲಕರೆಯ
ದನಿಯಲ್ಲಿ ಮುಗಳ್ ನಗೆಯ ಚೆಲ್ಲುತಾ
ಹಾಲ್‌ಗಲ್ಲ ಸವರಿ ರವಿಯು ಹೊಂಗಿರಣಕೆ
ಮರೆಮಾಚಿ ನಾಚಿ ನುಡಿಯಿತು ನಿತ್ಯಸತ್ಯ||
*****



















