ಸೃಷ್ಟಿಯಲಿ ಚೆಲುವು ದೃಷ್ಟಿಯಲಿ ಚೆಲುವು ಕಳೆಯಲ್ಲಿ ಚೆಲುವು ಬೆಳೆಯಲ್ಲಿ ಚೆಲುವು ಮರಮರವು ಚಿಗುರು ನಗುತಿರುವ ಚೆಲುವು ಮೈತುಂಬ ಸೀರೆಯಂತೆ ಬಿಳಿಹಳದಿ ಕೆಂಪು ತರತರದ ಕಂಪು ಮುಖವರಳಿ ನಗುವಳಂತೆ ಆಕಾಶದಲ್ಲಿ ನೀರನ್ನು ಹೊತ್ತು ಮೋಡಗಳು ಸಾಗುತಿಹವು ತಲ...

೧ ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ. ತುಸು ಅ...

ಓ ಸಾಗರ ಕನ್ಯೆ ಇದ್ದಕ್ಕಿದ್ದಂತೆ ಘೋರ ಹುಚ್ಚಿಯಂತೆ ಯಾಕೀ ರುದ್ರ ತಾಂಡವ ಸುನಾಮಿ ನೃತ್ಯವನ್ನಾಡಿಬಿಟ್ಟೆ ಕಣ್ಣಿಗೆ ಕಂಡ ಕೈಗೆ ಸಿಕ್ಕವರನ್ನೆಲ್ಲ ರಾಕ್ಷಸಿಯಂತೆ ನುಂಗಿ ನೊಣೆದುಬಿಟ್ಟೆ ಈ ಮನುಷ್ಯರು ಆಕಾಶದಿಂದ ನಿನಗೆ ಚಂದ್ರನನ್ನು ತಂದುಕೊಡಲಿಲ್ಲವೆ...

ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮೆರೆದೆ. ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಲೋಲಾಡಿ ಸುಖಿಯಾದೆನಯ್ಯ ಚನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಹಾಡೆಲೆ ಹೃದಯದ ಹಕ್ಕಿಯೆ ಹಾಡು ನವ ಜೀವನ ಸುಮಧುರ ಗಾನ ಕೊರಡು ಕೊನರುತಿದೆ ಚೆಲುವು ಹರಡುತಿದೆ ಉದಿಸಲಿ ಚೇತನ ತಂತಾನ ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ ಓಹೋ ಎಂಥಹ ಸುರ ಚೆಲುವು ಇದನ್ನು ಕಾಣಲು ಉಂಡದ್ದಾಯಿತು ಓ ಹಾ ಇರುಳಿನ ಕಡು ನೋವು ಜಗವೆ ಸು...

ಕುಂಟು ಬಿಲ್ಲೆ ಆಡುವ ನಿನ್ನೆಯ ಹುಡುಗಿಯರು ಇಂದು ಬುರ್ಕಾ ಹಾಕಿ ಅಮ್ಮಂದಿರಾಗುತ್ತಿದ್ದಂತೆಯೇ ನಾಳೆ ಅಜ್ಜಿಯರೂ ಆಗಿ ನಾಡದ್ದಿನ ಮರಿ ಮಕ್ಕಳಿಗೆ ಬುದ್ಧಿ ಹೇಳುತ್ತಾರೆ *****...

ದೂರದ ಮೂಸಿಹೊಳೆಯ ಸಂಕದ ಮೇಲೆ ಸಿಕಂದರಾಬಾದಿನಿಂದ ಫಲಕ್‌ನುಮಾಗೆ ನಿಧಾನವಾಗಿ ಗಮಿಸುತ್ತಿರುವ ಲೋಕಲ್‌ಗಾಡಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ನೆನಪಾಗುವುದು- ಮಳೆಗಾಲದಲ್ಲಿ ನಮ್ಮೂರ ಅಡಿಕೆ ತೋಟಗಳಲ್ಲಿ ಕಾಣಿಸುವ ಸಾವಿರಕಾಲಿನ ಬಂಡಿಚೋರಟೆಗಳು: ತಿರು...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....