ಈ ಪರಂಜ್ಯೋತಿ ಪ್ರಕಾಶವಾದ
ಬೆಳಗ ನೋಡಿ ನೋಟವ ಮೆರೆದೆ.
ಕೂಡಿ ಕೂಟವ ಮರೆದೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ
ಲೋಲಾಡಿ ಸುಖಿಯಾದೆನಯ್ಯ
ಚನ್ನಮಲ್ಲೇಶ್ವರನ ಕರುಣವಿಡಿದು
ಅಪ್ಪಣಪ್ರಿಯ ಚನ್ನಬಸವಣ್ಣಾ.
*****