ಶಾಲೆಯೊಳೋದಿ ತೆಗೆವುನ್ನತದಂಕಗಳೇ?
ನಲಿದುಲಿವಂತೆ ರಸಿಕರನೆಳೆವ ಕಲೆಯೇ?
ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ?
ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ?
ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು – ವಿಜ್ಞಾನೇಶ್ವರಾ
*****