ಸಾಗರದಾಳದಲ್ಲೊಂದು ಮನೆಯ ಮಾಡಿ

ಸಾಗರದಾಳದಲ್ಲೊಂದು ಮನೆಯ ಮಾಡಿ

ಜನವಸತಿಗೆ ಇಂಥದ್ದೆ ಸ್ಥಳ ಇರಬೇಕಿಂದಿಲ್ಲ. ಅದು ಆಕಾಶವಾಗಿರಲಿ, ನೆಲದಡಿ ಇರಲಿ, ಸಮುದ್ರ ಆಳದಲ್ಲಿ ಒಂದಿಷ್ಟು ನಿವೇಶನ ಸಿಕ್ಕರೂ ಸಾಕು ಅಲ್ಲಿಗೂ ಲಗ್ಗೆಹಾಕುತ್ತಾನೆ. ಮಾನವ ಈಗಾಗಲೇ ಉಪಯೋಗದಲ್ಲಿರುವ ಅರಮನೆಗಳು, ವಿಹಾರಧಾಮಗಳು, ಹೋಟೆಲ್‌ಗಳು ಹಾಗೂ ಸದ್ಯದಲ್ಲಿಯೇ ಬಳಕೆಯಾಗುತ್ತಲಿರುವ ಅಮೇರಿಕೆಯ ಫ್ಲೋರಿಡಾದ ಸಾಗರಾಳದ ಹೋಟೆಲ್‌ಗಳು ನೇಪಾಳಿಯರಿಗೆ ಸಾಗರದಾಳದಲ್ಲಿ ನಗರ ನಿರ್ಮಾಣಕ್ಕೆ ಉತ್ತೇಜನ, ಪೂರಕ ಚೈತನ್ಯ ಸಿಕ್ಕಿದೆ.

ಈ ಸಾಗರದಾಳದ ನಿರ್ಮಾಣದಲ್ಲಿ ಕಡಿಮೆ ವೆಚ್ಚ ಪರಿಸರವನ್ನು ಬಳಸಿ ಅನುಕೂಲಕರವಾದ ನಗರ ನಿರ್ಮಾಣದಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡವುದಾಗಿದೆ. ೧೫೦ ಮಹಡಿಯಲ್ಲಿ ೧,೫೦೦ ಅಡಿ ಎತ್ತರದ ೬೭೨ ವಾಸದ ಮನೆಗಳ, ೩೦೦ ಚ. ಅಡಿ ವಿಸ್ತೀರ್ಣದ ನಗರ ಸಂಕೀರ್ಣವೊಂದರ ನಿರ್ಮಾಣಗೊಳ್ಳುತ್ತದೆ. ಈ ನಗರಕ್ಕೆ ೧೦ ಸಾವಿರ ಜನ ಪ್ರವಾಸಿಗರು ಬಂದು ಹೋಗುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಗಡುಸಾದ ಕಲ್ಲಿನ ಅಡಿಪಾಯವನ್ನು ಬಳಸಿಕೊಂಡು ನಗರದ ಪಾಯ ಮಾಡಲಾಗಿದೆ. ಚಂಡಮಾರುತ ಬಿರುಗಾಳಿಗಳಿಂದ ಮುಕ್ತವಾದ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಜನಸಾಂದ್ರತೆಯಿಂದ ಉಂಟಾಗುವ ನೂರಾರು ಸಮಸ್ಯೆಗಳು ಮುಕ್ತವಾಗುತ್ತವೆಂದು ನಿರ್ಮಾಪಕರು ಹೇಳುತ್ತಾರೆ. ಪಾತಾಳಗರ್ಭದಲ್ಲಿ ಇಂಥಹ ನಗರ ಒಂದನ್ನು ನಿರ್ಮಿಸಲು ಹಣದ ವೆಚ್ಚ ಮಾತ್ರ ಅತ್ಯಂತ ದುಬಾರಿ ಎಂದು ಹೇಳುತ್ತಾರೆ. ಉಕ್ಕು, ಗಾಜು, ಸಿಮೆಂಟನ್ನು ಬಳಸಿ ಸಾಗರದಾಳವನ್ನು ಬಗೆದು ಆಳದಲ್ಲಿ ಬದುಕನ್ನು ನೀಗಬೇಕಾದ ಪರಿಸ್ಥಿತಿಯು ಮುಂದಿನ ಶತಮಾನಕ್ಕೆ ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಬೇರೆ ವಸತಿ ಸೌಕರ್ಯಗಳ ನೀಲಿ ನಕ್ಷೆಗಳು ತಯಾರಾಗುತ್ತಲಿದೆ.
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಜ ಪ್ರಕೃತಿ ಗುಣ ಬದಲಿಸುವುದೆಂತು ?
Next post ಗಿಳಿಯೇ

ಸಣ್ಣ ಕತೆ