ಈ ಜಗದ ಸ್ವರವಾಗಿ ಖಗ ಮೃಗಗಳಲ್ಲಲ್ಲಿ
ಗೌಜಿಯೊಳು ಉಲಿವಂತೆ ಎನ್ನುಲಿವು
ರಜ ನಲಿವು, ಜೊತೆಗಳುವು
ಸಾಜ ಗುಣವಿದೆನ್ನದಿರುವುದಿಂತು
ಈ ಜಗದ ಕಾವ್ಯದೊಳಿದೊಂದಕ್ಷರವು – ವಿಜ್ಞಾನೇಶ್ವರಾ
*****
ರಜ = ಸ್ವಲ್ಪ
ಸಾಜ = ಸಹಜ