ದಲಿತರೊದ್ದಾರಕ್ಕೆ ಟೊಂಕ ಕಟ್ಟಿದ ಬಡವರ ದಾತಾರ ನೀನು ಇಹಪರಗಳಲ್ಲೂ ಮೆರೆವ ದೊರೆ ಬುವಿಯ ಅವತಾರ ನೀನು ಆತ್ಮ ಆತ್ಮಗಳ ನಡುವೆ ಭೇದ ಸೃಷ್ಟಿಸಿ ಬಾಳುವ ಜನ ಮಧ್ಯ ಸಮತೆಯ ದೀಪ ಬೆಳಗಿದವ ನೀನು ಎಲ್ಲರೂ ಒಂದೇ ಎಂದೇ ಬುವಿ ಮಧ್ಯ ಬುದ್ಧ ಗುರುವಿನ ಅನುಯಾಯಿ ...

ದಾರುಣತೆ ವಿಪ್ಲವದ ಮೊದಲಿತ್ತು ಜತೆಯಿತ್ತು ಆಮೇಲೆಯೂ ಇತ್ತು ವಿಪ್ಲವಕ್ಕೊಂದು ಕಾರಣವಾಗಿ ಇತ್ತು ಆಮೇಲೊಂದು ನೆನಪಾಗಿಯೂ ಇತ್ತು ಒಂದು ಆಕರ್ಷವಾಗಿ ಮತ್ತೊಂದು ದುಃಸ್ವಪ್ನ ವಾಗಿ ಕಾಡುತ್ತ ಇದ್ದುವು ವ್ಯಾಘ್ರದ ವ್ರಣದಂತೆ ಇದ್ದ ಮೂವರಲ್ಲೇ ಆಗಬೇಕು ಈ ...

“ಚೆಲುವನಾರಾಯಣಾ ಎಂಬುಲಿವು ಕಿವಿಸೋಕೆ ಮಳಮಳನೆ ಕಣ್ಣ ಹನಿಯುದುರುವುದು” ಎಂದ ಸತ್ಯಲೋಕನಿವಾಸಿ ರಸಕಾತರಂ ಮೌನಿ ನನ್ನನುತ್ತರಿಸಲೀ ಭಾವಗಳ ತಂದ. ‘ಹರಿ’ ಎನ್ನೆ ಗರಿಕೆದರಿ ರೆಕ್ಕೆ ಹರಡುವ ಸಂತ- ಚಿತ್ತದನುಕರಣೆಯೊಳು ಹಂಸಗತಿಗೆರೆ...

ಮನುಷ್ಯರ ಮನುಷ್ಯರ ನಡುವೆ ಜಾತಿಯ ವಿಷ ಬೀಜ ಬಿತ್ತಿದವರು ನೀವು ಜಾತ್ಯಾತೀತತೆಯ ಮಾತು ನಿಮಗೆ ಶೋಭಿಸದು ಬಿಡಿ. ಸಮಾನತೆಯ ಮಾತು ಬೇಡ ನಿಮಗೆ ಇಷ್ಟವಾಗುವುದಿಲ್ಲ ಹಿಟ್ಲರನ ಸಂತತಿ ಅಧಿಕಾರಿಶಾಹಿಗೆ ಪ್ರಜಾಪರತೆಯ ಮಾತು ಬಿಡಿ ಅದು ನಿಮಗೆ ಶೋಭಿಸದು. ಗುಡ...

ನಮ್ಮೂರ ಗಣಪ ಜೋಯಿಸರಿಗೆ ಉಪ- ವಾಸವು ಶನಿವಾರ ಉಪವಾಸದ ದಿನ ಬರಿ ಹಾಲೂ ಗೆಣ- ಸಿನದೇ ಅವರಿಗೆ ಫಲಹಾರ ಆ ಪುಣ್ಯದ ಫಲ- ದಿಂದೇ ಈ ನೆಲ- ದಲಿ ಸಾಗಿದೆ ಆ ಸಂಸಾರ ಮೊನ್ನಿನ ಆ ದಿನ ಒಂದೆರಡೇ ಮಣ ಗೆಣಸನು ತೇಗಿ ಹೊಟ್ಟೆಯು ಬೀಗಿ ಹರಿದೇ ಹೋಯಿತು ಉಡಿದಾರ ಅಲ...

ಸೆಟ್ಟಾಗುವವರೆಗೆ ಹುಡುಗಿಯ ಹಿಂದೆ ಹುಡುಗ ಸಟ್ಟಾದ ಮೇಲೆ ಹುಡುಗನ ಹಿಂದೆ ಹುಡುಗಿ ಸೆಟ್ಟಾಗುವವರೆಗೆ ಹಲ್ಲು ದಾಳಿಂಬೆ ಕಾಳು ಸೆಟ್ಟಾದ ಮೇಲೆ ಅದೇ ಬಣ್ಣನೆ ಗೋಳು ಸೆಟ್ಟಾಗುವವರೆಗೆ ಮೂಗು ಗಿಳಿಯ ಮೂಗು ಸೆಟ್ಟಾದ ಮೇಲೆ ಮೂಗು ಹಾಗೂ ಹೀಗೂ ಸೆಟ್ಟಾಗುವವರ...

ಮೂಲ: ಅಡಾಲ್ಡ್‌ಸ್ಟೀನ್‌ ಕ್ರಿಸ್‌ಮಂಡ್‌ಸನ್‌ (ಐಸ್‌ಲ್ಯಾಂಡಿಕ್‌ ಕವಿ) ಈ ಹೆಲೆನಿಕ್ ವೈಭವ ಈ ರೋಮನ್ ಭವ್ಯತೆ ನನ್ನ ಮೈಮೇಲಿನ ಒಣಹುಡಿ ಮಾತ್ರ. ಒಂದು ದಿನ ಗಾಳಿ ಅದನ್ನು ಹಾರಿಸಿಬಿಡುತ್ತದೆ ಇಗೋ ನೋಡು ಯಾವ ಮರ್ತ್ಯಹಸ್ತವೂ ಸೋಂಕದ ನಾನು ಇಲ್ಲಿ ಮಲಗ...

ನನ್ನ ಪ್ರೀತಿಯವರನ್ನು ಹಿಂದಕೆ ಬಿಟ್ಟು ಸಾಹಸವನೊಂದ ಕೈಕೊಂಡು ನಡೆದೆ: ಕೊನೆಗಾಣಿಸುವ ಶಕ್ತಿಯ ಕೊಡು,- ಸಮುದ್ರನಾಥ! ತುಂಬಿದ್ದ ಸ್ನೇಹಸಾಗರದಲ್ಲಿ ಬಿಂದುಮಾತ್ರವಾಗಿದ್ದೆ ನಾನು: ಇಂದಿನ ನನ್ನ ಏಕಾಂತವಾಸವನು ದಿವ್ಯ ತುಂಬುರನಾದದಿಂದ ತುಂಬುವ ನಂಬುಗೆ...

ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ...

1...56789...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...