ಎಂಥಾ ಚಂದ್ರಾಮ ಇವನೆಂಥಾ ಚಂದ್ರಾಮ ಪಡುಮನೆ ಇಳಿಯಲು ಹೋಗಿ ಇವ ನೀರಿಗೆ ಬಿದ್ದಾನ ನೀರ ತರುವವರ ಸೆರಗಿಗೆ ಬಿದ್ದಾನ ಎಂಥಾ ಚಂದ್ರಾಮ ಮೂಡಲ ಮನೆ ಏರಲು ಹೋಗಿ ಮುಗಿಲಿಗೆ ಮೆತ್ಯಾನ ಮನೆಯವಳ ಹೆಗಲಿಗೆ ಸುತ್ಯಾನ ಎಂಥಾ ಚಂದ್ರಾಮ ಮಲ್ಲಿಗೆ ಹೂಗಳ ಕೊಯ್ಯಲು ಹ...

ಹಣ್ಣಿನಿಂ ತರು ನಮ್ರ ಮೋಡ ಹನಿಯಿಂ ನಮ್ರ ನೆರೆದ ಸಿರಿಯೊಳು ಪುಣ್ಯ ಪುರುಷ ನಮ್ರ ಜ್ಞಾನಿಯರಿವಿಂ ನಮ್ರ ಆರ್ತನಳಲಿಂ ನಮ್ರ ನೆಲೆಯರ್ತಿಗಿಂಬಾಗಿ ಭಕ್ತ ನಮ್ರ ಭಾವಂಗಳಿಡಿದಿರಲು ಸತ್ ಕವಿಯು ವಾಙ್ನಮ್ರ ವಿಪುಲದರ್ಶನ ಶಕ್ತ ಧರ್ಮನಮ್ರ ಎಲ್ಲರಹಮನು ಕಳೆದು...

ಮುರಿದ ಮೀನಾರುಗಳು, ಕಡಿದ ಮಂದಿರಗಳು ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು ಗತ ಮರೆತ ಇತಿಹಾಸದ ಪುಟಗಳು ಸರಸ ಜನನ, ವಿರಸಮರಣವೆಂದೆ ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ! ಲವಲವಿಕೆಯ ನಗುವಿನ ಒಡೆಯ ನೀನು ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ ಸಮನ್ವ...

೧ ಬಾರೆಲೆ ಕೋಗಿಲೆಯುಲಿಯುತ ಬನದೊಳು ತಾರೆಲೆ ಮೋದವ ಮೇದಿನಿಗೆ ಹಾಡೆಲೆ ಬಹುವಿಧ ರಾಗದೆ ನರರನು ತೇಲಿಸಿ ಕುಣಿಸೆಲೆ ಲೀಲೆಮಿಗೆ ೨ ಕುಡಿಗೊನರೆಲ್ಲವು ಗಿಡಗಳ ಮಡಲೊಳು ಬಿಡದಲೆ ಕಾಣುವೆ ಕೋಗಿಲೆಯೆ ತಡವನು ಮಾಡದೆ ಒಡನೆಯೆ ನಯನುಡಿ ಬೆಡಗನು ಬಿಡಿಸಲೆ ಬಿಂಕ...

‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕನ್ನಡಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿ‌ಋಷಿ ಕಲಿಗಳ ವಿಶ್ವಕೆ ತಂದಿಹ ನಮ್ಮ ನುಡಿ ಮರೆಯಾಗುತಿದೆ ನ...

ಮೂಲ: ಟಿ ಎಸ್ ಎಲಿಯಟ್ ಆದಿಯಲ್ಲಿದೆ ನನ್ನ ಅಂತ್ಯ೨ ಮನೆಗಳು ಒಂದು ಕ್ರಮ ಹಿಡಿದು ಏಳುವುವು, ಬೀಳುವುವು, ಕಡಿಯುವುವು ಬೆಳೆಯುವುವು, ಮರೆಯಾಗುವುವು, ನಾಶವಾಗುವುವು; ಬಿದ್ದ ಮನೆ ಮತ್ತೆ ಎದ್ದೇಳುವುವು, ಹಿಂದೆ ಮನೆ ಇದ್ದಲ್ಲಿ ಈಗ ಇದೆ ಮೈದಾನ ಕಾರ್ಖಾ...

ಬ್ರಹ್ಮನಿತ್ತಿಹ ಮನಸು, ವಿಷ್ಣುವಿತ್ತಿಹ ಕನಸು, ರುದ್ರನಿತ್ತಿಹ ಮುನಿಸನಳವಡಿಸಿಕೊಳುತಿಲ್ಲಿ ನೀ ಬೆಳೆದೆ ಗಂಡೆದೆಯ ಕಣ್ಣೆ, ಹೆಣ್ಣೇ ! ನೆನಸು ನಿನ್ನ ರೂಪ-ವಿರೂಪಗಳ ನೆನೆದಿರುವಲ್ಲಿ. ಮುಂದಾದೆ ‘ಚಂದ್ರಮುಖಿ ’, ‘ಕುಂದ ಕುಟ್ಮಲರದನೆ ’ ‘ಮೀನಾಕ್ಷಿ’...

ನಾನೆ ಹೂವು ನಾನೆ ತಂಗು ನಾನೆ ಆರತಿಯಾಗುವೆ ಪಂಚಪೀಠದ ಪರಮ ಗುರುವೆ ನಿನಗೆ ಆರತಿ ಬೆಳಗುವೆ ಜಯ ಜಯ ಗುರುವರ ರೇಣುಕಾ ಜಗದ್ಗುರು ಋಷಿ ರೇಣುಕಾ || ಜಡದ ದೇಹದ ತೇಗು ಹಿಡಿಯುವೆ ಮನದ ಕರ್ಪೂರ ಹಚ್ಚುವೆ ಜೋಡು ಕಣ್ಣಿನ ತುಪ್ಪದಾರತಿ ನಿನಗೆ ಅರ್ಪಿಸಿ ಬೆಳಗ...

ಜೀತದ ಜೀವದ ಕುಲಿಮೇಲಿ ಬದುಕೋ ಆಸೆ ಕಲ್ ಮೇಲಿ ಬೆವರಿನ್ ರೂಪೈ ರಕ್ತದ್ ಮೋರ ಠಣಗುಡ್ತ್ ಯೇಳ್ತದೆ ನೋಡ್ ಅಲ್ ನೇರ- ಮುರಕಲ್ ಜೋಪ್ಡಿ ಟಂಕ್ಸಾಲೆ ! ಬತ್ಕೊಂಡ್ ವೊಟ್ಟೆ ಅಕ್ಸಾಲೆ ! ೧ ಬದುಕೊಕ್ ಬಿಡಕಾಸ್ ಪಡೆಯಾಕೆ ಲಕ್ಸಾಂತ್ರ್ ರೂಪಾಯ್ ದುಡದಾಕಿ ಮಂಡೇ...

ತಡಸಲು ತಡಸಲು ಅಗೊ ಅಲ್ಲಿ, ದಡದಡ ಎನುವದು ಎದೆ ಇಲ್ಲಿ. ದಿಡುಗದೊ ಗುಡುಗುಡು ಗುಡುಗುತಿದೆ ಗಿಡ, ಮರ, ಜನ, ಮನ ನಡುಗುತಿದೆ. ಗುಡುಗೇ ನೀರಾಗಿಹುದಲ್ಲಿ, ಮೋಡ ಹುಟ್ಟುತಿದೆ ಮಳೆಯಲ್ಲಿ; ತುಂತುರ ಮಳೆ ಹೊಳೆಯಂಚಿಗಿದೆ, ನೀರೇ ಮಿರಿ ಮಿರಿ ಮಿಂಚುತಿದೆ. ಮ...

1...5556575859...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...