ನಾನೆ ಹೂವು ನಾನೆ ತಂಗು
ನಾನೆ ಆರತಿಯಾಗುವೆ
ಪಂಚಪೀಠದ ಪರಮ ಗುರುವೆ
ನಿನಗೆ ಆರತಿ ಬೆಳಗುವೆ
ಜಯ ಜಯ ಗುರುವರ ರೇಣುಕಾ
ಜಗದ್ಗುರು ಋಷಿ ರೇಣುಕಾ ||
ಜಡದ ದೇಹದ ತೇಗು ಹಿಡಿಯುವೆ
ಮನದ ಕರ್ಪೂರ ಹಚ್ಚುವೆ
ಜೋಡು ಕಣ್ಣಿನ ತುಪ್ಪದಾರತಿ
ನಿನಗೆ ಅರ್ಪಿಸಿ ಬೆಳಗುವೆ
ಅಂತರಾತ್ಮದ ಶಿವನ ಎಚ್ಚರ
ಗಂಟೆ ಜಾಗಟೆ ನುಡಿಸುವೆ
ದೇಹ ದೇಗುಲ ಮನವೆ ಲಿಂಗವು
ಗುರುವಿಗಾರತಿ ಎತ್ತುವೆ
ಉಸಿರು ಪರಿಮಳ ಚರಿತೆ ನಿರ್ಮಲ
ನಾನೆ ಪಾಯಸವಾಗುವೆ
ನಾನೆ ಅರ್ಪಣೆ ಗುರು ಸಮರ್ಪಣೆ
ಶಿವ ಸಮರ್ಪಣೆಯಾಗುವೆ
*****
ಧ್ವನಿಸುರುಳಿ : ಗುರುಗಾನ ತರಂಗ
ಹಾಡಿದವರು : ಆರ್ಚನಾ ಉಡುಪ
ಸ್ಟುಡಿಯೊ : ಅಶ್ವಿನಿ



















