ಜೀತದ ಜೀವದ ಕುಲಿಮೇಲಿ
ಬದುಕೋ ಆಸೆ ಕಲ್ ಮೇಲಿ
ಬೆವರಿನ್ ರೂಪೈ ರಕ್ತದ್ ಮೋರ
ಠಣಗುಡ್ತ್ ಯೇಳ್ತದೆ ನೋಡ್ ಅಲ್ ನೇರ-
ಮುರಕಲ್ ಜೋಪ್ಡಿ ಟಂಕ್ಸಾಲೆ !
ಬತ್ಕೊಂಡ್ ವೊಟ್ಟೆ ಅಕ್ಸಾಲೆ ! ೧
ಬದುಕೊಕ್ ಬಿಡಕಾಸ್ ಪಡೆಯಾಕೆ
ಲಕ್ಸಾಂತ್ರ್ ರೂಪಾಯ್ ದುಡದಾಕಿ
ಮಂಡೇಲ್ ಮಡಗಿ ಸಿಕ್ದೋರ್ ಜೋಡು
ಮಂಕ್ ಇಡದಂಗೆ ದುಡಿತೈತ್ ನೋಡು-
ವುತ್ತಾ ಕಟ್ಟೋ ಗೆದ್ಲುಳ !
ಜೇನ್ ಕೂಡಾದೋ ಜೇನುಳ ! ೨
ಸಿಗಿಯಾಕ್ ಒಳ್ಳೆ ಮೋಪಾಗಿ
ಆನೇಗ್ ಬಾಳೆ ತೋಪಾಗಿ
ಬತ್ಕೊಂಡ್ ವೊಟ್ಟೆ ಸಿಕ್ಕೈತೇಂತ
ಬಗಿಯೋ ಡೊಳ್ಳೀನ್ ನೋಡ್ದ ಮಂತೆ-
ವುತ್ತಾ ಅತ್ತೋ ಎಬ್ಬಾವ್ನ !
ಜೇನ್ ಕದ್ದ್ ಜನ್ಮ ದಬ್ಬಾವ್ನ್ ! ೩
ಅಳ್ಳ ಕೆಳಕ್ಕ್ ಕೆಳಕ್ಕ್ ಒತ್ಕೋಂತೆ !
ಬೆಟ್ಟ ಬೆಟ್ಟಾನ್ ಯೆತ್ಕೋಂತೆ !
‘ಬದುಕೋದ್ ಸಾಲ್ದು, ಬದುಕಿಸ್ಬೇಕು’
ಅಂತ್ ಅಂಗಿದ್ರೆ-ಅದು ನಾಜೂಕು !
ನಾಜೋಕಿನ್ದ್ ಈ ಕಾಲ್ದಲ್ಲಿ
ನೀರೇ ಇಲ್ಲ-ಬರಿ ನಲ್ಲಿ ! ೪
*****



















