ಹಣ್ಣಿನಿಂ ತರು ನಮ್ರ ಮೋಡ ಹನಿಯಿಂ ನಮ್ರ
ನೆರೆದ ಸಿರಿಯೊಳು ಪುಣ್ಯ ಪುರುಷ ನಮ್ರ
ಜ್ಞಾನಿಯರಿವಿಂ ನಮ್ರ ಆರ್ತನಳಲಿಂ ನಮ್ರ
ನೆಲೆಯರ್ತಿಗಿಂಬಾಗಿ ಭಕ್ತ ನಮ್ರ
ಭಾವಂಗಳಿಡಿದಿರಲು ಸತ್ ಕವಿಯು ವಾಙ್ನಮ್ರ
ವಿಪುಲದರ್ಶನ ಶಕ್ತ ಧರ್ಮನಮ್ರ
ಎಲ್ಲರಹಮನು ಕಳೆದು ವೃದ್ಧ ಮಾದೀ ಗುಡಿಯು
ಸಕಲಜನಕಾಯಿತಾದಾನನಮ್ರ.
ಇಲ್ಲಿ ಮಣಿದವನೆಲ್ಲೆಡೆಯು ಸೆಟೆದು ನಿಲುವ
ಇಲ್ಲಿ ಮೈಕುಗ್ಗಿದವನೆಲ್ಲೆಲ್ಲು ನೇರ ನಡೆವ.
*****