ಮೊದಲಿನ ಹಾಗಲ್ಲ ಈಗ ನಾವು ಬೇಜಾರಾಗಿ ಬಿಟ್ಟಿದ್ದೇವೆ ನಮ್ಮ ಬೇಜಾರೇ ನಮ್ಮ ಸಂತೋಷ ನಮಗೆ ಇದು ಯಾವುದೂ ಬೇಡ ಹಾಗಾದರೆ ಇವಕ್ಕೆಲ್ಲ ಬೆನ್ನು ಕೊಟ್ಟು ನಾವೇ ಓಡಿ ಹೋಗೋಣ ನಡಿ ಕನಸಿನವರೆಗೆ ಅಥವಾ ಸಾವಿನವರೆಗೆ ಓಡು ಓಡು ಇನ್ನೂ ಜೋರಾಗಿ ಸಿಗರೇಟಿನ ಹೊಗೆಯ...

ಬನ್ನಿ ಪಡೆಯಿರಿ ನನ್ನಿ ಮುಡಿಯಿರಿ ಚಿನ್ನ ಚಲುವಿನ ಚಂದಕೆ || ಪಕ್ಷಿ ಕಂಠದ ಗಾನ ತೋಟದಿ ಮುಗಿಲ ನೀಲಿಮೆ ನಕ್ಕಳು ವೃಕ್ಷ ತೊಂಗಲ ಹಸಿರ ಮಂಚದಿ ಯಕ್ಷಿ ಹೂರಮೆ ಹೂಕ್ಕಳು ಕೇಳು ಕೂಜನ ಶಿವನ ಭಾಜನ ಉಣ್ಣು ವಾಣಿಯ ಭೋಜನ ಎದ್ದು ನಿಲ್ಲೈ ಜಿದ್ದು ಹೇಳೈ ಭವ್...

೧ ಯಾರಿವಳು? ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು? ಗಂಡನೆಂಬವನನ್ನ ಕಂಡ ಕಂಡಂತೆಯೇ ಕಂದ ಎಂಬಂತೆ ಮಮತೆಯಲಿ ಮಾತಾಡುವಳು! ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ ಉಡಿಯಲ್ಲಿ ಹಾಕಿ ಶಮಿಸಿದವಳು ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ ಹ...

ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ ಸುಂದರ ಕನಸ ಎಳೆಯಲಿ ಭಾವನೆಗಳ ಜೊತೆ...

ಹಸಿವು ರೊಟ್ಟಿಯನ್ನು ಕಂಡುಕೊಳ್ಳುತ್ತದೆ ಕೊಂಡುಕೊಳ್ಳುತ್ತದೆ. ಪಾತ್ರ ಕೊಟ್ಟು ತಾಲೀಮು ನೀಡುತ್ತದೆ. ನಟನೆಯಲಿ ತನ್ಮಯ ಅಮಾಯಕ ರೊಟ್ಟಿ ಪಾತ್ರವೇ ತಾನಾಗಿ ಕರಗಿಹೋಗುತ್ತದೆ. *****...

ಅಂತ ಕರಣ ಒಸರಿಸಿದ ರಸಪದದ ರಾಗ ಹರಿವ ನದಿಯ ಜುಳು ಜುಳು ಸಪ್ತಸ್ವರವಾದ ಸಪ್ತರ್ಷಿಮಂಡಲ ಮಿನುಗು ಮಿಂಚು ರಸಭಾವ ಎಲ್ಲ ತಲ್ಲಣಗಳ ದಾಟಿ ಒಡಲಿಂದ ಒಡಲಿಗೆ ಸೇರುವ ಅಂತರಂಗದ ಸಮುದ್ರ. ವೃಷ್ಠಿ ಸಮಷ್ಠಿಯ ಮಂಗಳ ಹಾಸು ಬೀಸಿದ ಹೃದಯದಲಿ ಶೀವನ ನಟುವಾಂಗ ತಿಳಿ...

ಮಸಾಲೆ ದೋಸೆ ಬೇಕೆಂದಾಗೆಲ್ಲಾ ಏನಾದರೂ ನೆಪ ಹೇಳಿ ಗಂಡನೊಂದಿಗೆ ಮುನಿಸಿಕೊಳ್ಳುವದು ಅವನ ಪ್ರೀತಿ ಬೇಕೆಂದಾಗೆಲ್ಲ ಅವನಿಷ್ಟದ ಅಡುಗೆ ಮಾಡುವದು. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...